ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

17 ಅನರ್ಹ ಶಾಸಕರಿಗೆ ಗುಡ್ ನ್ಯೂಸ್ ಕೊಟ್ಟ ಅಮಿತ್ ಶಾ

|
Google Oneindia Kannada News

Recommended Video

BJP National President Amit Shah Has Good News To All 17 disqualified MLAs | Oneindia Kannada

ಬೆಂಗಳೂರು, ನವೆಂಬರ್ 27: ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ನೀಡಿ, ಈಗ ಬಿಜೆಪಿ ಸೇರಿರುವ ಎಲ್ಲ 17 ಜನ ಅನರ್ಹ ಶಾಸಕರಿಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಕೇಳಿದರೆ ಅನರ್ಹ ಶಾಸಕರೂ ಖುಷಿ ಪಡಲಿದ್ದಾರೆ. ಖುದ್ದು ಅಮಿತ್ ಶಾ ಅವರೇ ಈ ಸುದ್ದಿ ರವಾನಿಸಿದ್ದಾರೆ. ಅದು ಏನೆಂದರೆ ಅನರ್ಹ ಶಾಸಕರಿಗಾಗಿ ಬರೊಬ್ಬರಿ 7 ಜನ ಎಂಎಲ್ಸಿಗಳ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

ಫಡ್ನವೀಸ್, ಬಿಎಸ್‌ವೈ; ಅಕ್ಕಪಕ್ಕ ರಾಜ್ಯಗಳ ನಾಯಕರ ಕಥೆ!ಫಡ್ನವೀಸ್, ಬಿಎಸ್‌ವೈ; ಅಕ್ಕಪಕ್ಕ ರಾಜ್ಯಗಳ ನಾಯಕರ ಕಥೆ!

ಈ ಉಪ ಚುನಾವಣೆಯಲ್ಲಿ ಐದು ಜನ ಅಭ್ಯರ್ಥಿಗಳು ಸೋಲುತ್ತಾರೆ ಎಂಬ ಗುಪ್ತಚರ ವರದಿಯನ್ನು ಅಮಿತ್ ಶಾ ತರಿಸಿಕೊಂಡಿದ್ದಾರೆ. ಈ ಆಧಾರದ ಮೇಲೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಾರಣರಾದ ಅನರ್ಹ ಶಾಸಕರ ಹಿತ ಕಾಯಲು ಮುಂದಾಗಿದ್ದಾರೆ.

Amit Shah Gives Good News To 17 Disqualifieds

ಉಪ ಚುನಾವಣೆ ನಡೆಯಲ್ಲಿ ಸೋಲುವ ಐದು ಜನ ಮತ್ತು ಮುನಿರತ್ನ, ಪ್ರತಾಪ್ ಗೌಡರನ್ನೂ ಎಂಎಲ್ಸಿ ಮಾಡಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರಿಗಾಗಿ ರಾಜೀನಾಮೆ ಪಡೆಯಬೇಕು ಮತ್ತು ಡಿಸೆಂಬರ್ 12 ರಂದೇ ಸಚಿವ ಸಂಪುಟ ಪುನರ್ ರಚನೆ ಮಾಡುವಂತೆ ಹೇಳಿದ್ದಾರೆ.

ಸಂಕ್ರಾಂತಿ ನಂತರ ಮತ್ತೆ ಕುಮಾರಸ್ವಾಮಿ ಸಿಎಂ.?ಸಂಕ್ರಾಂತಿ ನಂತರ ಮತ್ತೆ ಕುಮಾರಸ್ವಾಮಿ ಸಿಎಂ.?

ಅಷ್ಟೇ ಅಲ್ಲದೆ ಈಗಿರುವ 6 ಜನ ಮಂತ್ರಿಗಳಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರು, ಗೆದ್ದವರು ಮತ್ತು ಎಲೆಕ್ಷನ್ ಗೆ ನಿಲ್ಲದ ಅನರ್ಹರಿಗೂ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಸೂಚನೆ ನೀಡಿದ್ದಾರೆ.

ಡಿಸಿಎಂಗಳಾದ ಅಶ್ವಥ್ ನಾರಾಯಣ, ಲಕ್ಷ್ಮಣ್ ಸವದಿ ಮತ್ತು ಸಚಿವರಾದ ಮಾಧುಸ್ವಾಮಿ, ಸಿ.ಟಿ.ರವಿ, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್ ಅವರಿಂದ ರಾಜೀನಾಮೆ ಪಡೆದು ಅನರ್ಹರಿಗೆ ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.

English summary
BJP National President Amit Shah Has Given Good News To All 17 BJP MLAs Who Have Now Resigned From The Alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X