ದಕ್ಷಿಣ ಭಾರತಕ್ಕೆ ಅಮೆರಿಕದ ಬ್ಯುಜಿನೆಸ್ ವಿಸಿಟ್, ಮುಂದಿನ ಯೋಜನೆಗಳೇನು?
ಬೆಂಗಳೂರು, ಮೇ 9: ಯುಎಸ್ ಕಮರ್ಷಿಯಲ್ ಸರ್ವೀಸ್ ಅಮೆರಿಕದ 19 ಕಂಪನಿಗಳನ್ನು ದಕ್ಷಿಣ ಭಾರತಕ್ಕೆ ಕರೆತರುತ್ತಿದೆ. ಅಮೆರಿಕದ ವಾಣಿಜ್ಯ ಇಲಾಖೆಯ ಆನ್ಯುವಲ್ ಟ್ರೇಡ್ ಮಿಷನ್ ಕಾರ್ಯಕ್ರಮದಡಿ ಮೇ 9-13ರವರೆಗೆ ಚೆನ್ನೈ ಬೆಂಗಳೂರು ಹಾಗೂ ಹೈದರಾಬಾದ್‌ಗೆ ಭೇಟಿ ನೀಡಿದೆ.
ಟ್ರೇಡ್ ವಿಂಡ್ ಕಾರ್ಯಕ್ರಮದಡಿ ದೆಹಲಿಯಲ್ಲಿ ಇಂಡೋ-ಫೆಸಿಫಿಕ್ ಪ್ರಮುಖವಾಗಿಟ್ಟುಕೊಂಡು ಸಭೆ ಆಯೋಜನೆ ಮಾಡಲಾಗಿದೆ. ಅದರಲ್ಲಿ 100ಕ್ಕೂ ಹೆಚ್ಚಿನ ಅಮೆರಿಕಾದ ಕಂಪನಿಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಟ್ರೇಡ್ ಇಂಡಿಯಾ ಕಾರ್ಯಕ್ರಮವನ್ನು ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ವಾಣಿಜ್ಯಾತ್ಮಕ ಸಂಬಂಧವನ್ನು ಬಲ ಪಡಿಸುವಲ್ಲಿ ದಕ್ಷಿಣ ಭಾರತ ಮುಂದಿದೆ.

ಡಿಫೆನ್ಸ್, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಪರಿಸರ,ಶಿಕ್ಷಣ, ಆರೋಗ್ಯ ಇನ್ನಿತರೆ ವಿಚಾರದಲ್ಲಿ ಸಾಕಷ್ಟು ಮುಂದುವರೆದಿದೆ ಎಂದು ದಕ್ಷಿಣ ಭಾರತದ ಪ್ರಿನ್ಸಿಪಲ್ ಕಮರ್ಷಿಯಲ್ ಅಧಿಕಾರಿ ಮನೋಜ್ ದೇಸಾಯಿ ತಿಳಿಸಿದ್ದಾರೆ.












Click it and Unblock the Notifications