ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗುವಿಗಾಗಿ 'ಮಿಂಚಿನ ಓಟ'; ಹೀರೋ ಆದ ಆಂಬುಲೆನ್ಸ್ ಚಾಲಕ

|
Google Oneindia Kannada News

Recommended Video

ಮಿಂಚಿನ ಓಟದಲ್ಲಿ ಮಂಗಳೂರು To ಬೆಂಗಳೂರು | Oneindia Kannada

ಬೆಂಗಳೂರು, ಫೆಬ್ರವರಿ 6; ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಗುವನ್ನು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಬಂದ ಆಂಬುಲೆನ್ಸ್ ಚಾಲಕನಿಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗುರುವಾರ ಮಗುವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ನಲವತ್ತು ದಿನದ ಸೈಪುಲ್ ಅಜ್ಮಾನ್ ಎಂಬ ಮಗುವನ್ನು ತೀವ್ರ ನಿಗಾ ಘಟಕಕ್ಕೆ ಸಾಗಿಸಲಾಯಿತು. ಈ ವೇಳೆ ಮಗುವಿನ ಪ್ರಾಣಾಪಾಯಕ್ಕೆ ಯಾವುದೇ ದಕ್ಕೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಮಗುವಿನ ಹೃದಯಕ್ಕೆ ಸ್ಪಂದಿಸಿದ ಜನ; ಮಂಗಳೂರಿನಿಂದ ಝೀರೊ ಟ್ರಾಫಿಕ್ಮಗುವಿನ ಹೃದಯಕ್ಕೆ ಸ್ಪಂದಿಸಿದ ಜನ; ಮಂಗಳೂರಿನಿಂದ ಝೀರೊ ಟ್ರಾಫಿಕ್

ಆಸ್ಪತ್ರೆ ಮುಂದೆ ಜಮಾಯಿಸಿದ್ದ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಆಂಬುಲೆನ್ಸ್ ಚಾಲಕ ಹನೀಪ್‌ನಿಗೆ ಪೇಟ ತೊಡಿಸಿ ಸನ್ಮಾನಿಸಿ, ಅಭಿನಂದಿಸಿದರು. ಚಾಲಕನ ಸಮಯಪ್ರಜ್ಞೆಯನ್ನು ಕೊಂಡಾಡಿದರು. ಈ ವೇಳೆ ಮಾತನಾಡಿದ ಹನೀಪ್, ದೇವರು ನನಗೆ ಇಂತಹ ಒಂದು ಕಠಿಣ ಕೆಲಸ ನೀಡಿದ್ದ, ನಾನು ಅದನ್ನು ನಿಭಾಯಿಸಿರುವ ಖುಷಿಯಲ್ಲಿದ್ದೇನೆ ಎಂದರು.

ಮಗುವಿಗೆ ಏನಾಗಿತ್ತು?

ಮಂಗಳೂರಿನ 40 ದಿನದ ಸೈಫುಲ್ ಅಝ್ಮಾನ್ ಎಂಬ ಮಗು ಹೃದಯ ಕಾಯಿಲೆಯಿಂದ ಬಳಲುತ್ತಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಐಸಿಯು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲು ಅಲ್ಲಿನ ವೈದ್ಯರು ಶಿಫಾರಸು ಮಾಡಿದ್ದರು.

ಝೀರೊ ಟ್ರಾಫಿಕ್ ನಲ್ಲಿ ಮಗು

ಝೀರೊ ಟ್ರಾಫಿಕ್ ನಲ್ಲಿ ಮಗು

ಗುರುವಾರ ಬೆಳಿಗ್ಗೆ 11.30ಕ್ಕೆ ಮಂಗಳೂರಿನಿಂದ ಬೆಂಗಳೂರಿನ ಜಯದೇವ ಆಸ್ಪತ್ರೆ ಕಡೆಗೆ ಝೀರೊ ಟ್ರಾಫಿಕ್ ನಲ್ಲಿ ಮಗುವನ್ನು ಕರೆದುಕೊಂಡು ಬರಲಾಯಿತು. ಆಂಬುಲೆನ್ಸ್ ಗೆ ಸರಾಗ ದಾರಿ ಮಾಡಿಕೊಡುವಂತೆ ಸಾರ್ವಜನಿಕರಲ್ಲಿ ಈ ಮುನ್ನವೇ ಮನವಿ ಮಾಡಿಕೊಳ್ಳಲಾಗಿತ್ತು. ಸಕಲೇಶಪುರ, ಹಾಸನದ ಯುವಕರಿಗೆ ಆಂಬುಲೆನ್ಸ್ ತೆರಳಲು ನೆರವಾಗುವಂತೆ ಕೇಳಿಕೊಳ್ಳಲಾಗಿತ್ತು. ಯುವಕರು ಸ್ವಯಂ ಸೇವಕರಾಗಿ ನಿಂತು ಆಂಬುಲೆನ್ಸ್ ಸರಾಗವಾಗಿ ಸಾಗಲು ದಾರಿ ಮಾಡಿಕೊಟ್ಟರು.

ಸಮಯಕ್ಕೆ ಸರಿಯಾಗಿ ಬಂದ ಚಾಲಕ

ಸಮಯಕ್ಕೆ ಸರಿಯಾಗಿ ಬಂದ ಚಾಲಕ

ಆಂಬುಲೆನ್ಸ್ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಹೊರಟಿತು. ದೋಣಿಗಲ್ ಸಕಲೇಶಪುರ-ಹಾಸನ, ತಣ್ಣೀರುಹಳ್ಳ ಬೈಪಾಸ್, ಬಿಟ್ಟಗೌಡನಹಳ್ಳಿ ಬೈಪಾಸ್, ಚನ್ನಪಟ್ಟಣ ಬೈಪಾಸ್, ಗವೇನಹಳ್ಳಿ, ಭೂವನಹಳ್ಳಿ ಬೈಪಾಸ್ ಮತ್ತು ಬೆಂಗಳೂರು ಮಾರ್ಗವಾಗಿ ಜೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಜಯದೇವ ಆಸ್ಪತ್ರೆ ತಲುಪಿತು.

ಕೇವಲ ನಾಲ್ಕುವರೆ ಗಂಟೆಯಲ್ಲಿ

ಕೇವಲ ನಾಲ್ಕುವರೆ ಗಂಟೆಯಲ್ಲಿ

ಮಂಗಳೂರು ವೈದ್ಯರು ಸಮಯಕ್ಕೆ ಸರಿಯಾಗಿ ಮಗುವನ್ನು ತಲುಪಿಸಬೇಕು ಎಂದು ವೈದ್ಯರು ಚಾಲಕ ಹನೀಪ್‌ನಿಗೆ ಹೇಳಿದ್ದರು. ಅದರಂತೆ ಜಿರೋ ಟ್ರಾಫಿಕ್ ವ್ಯವಸ್ಥೆಯನ್ನು ಪಡೆದುಕೊಂಡ ಚಾಲಕ, ವೈದ್ಯರಿಗೆ ನೀಡಿದ ಮಾತಿನಂತೆ 400 ಕಿಲೋ ಮೀಟರ್ ದೂರವನ್ನು ಕೇವಲ 4 ಗಂಟೆ 20 ನಿಮಿಷದಲ್ಲಿ ತಲುಪಿ, ಹಿರೋ ಎನಿಸಿಕೊಂಡರು. ಮಗುವಿನ ಕುಟುಂಬದವರು ಹನೀಪ್‌ನನ್ನು ಬಿಗಿದಪ್ಪಿ ಧನ್ಯವಾದ ಹೇಳಿದರು.

English summary
Haneef Balanja Ambulance Driver Reach Mangalore to Bangalore in four and half hour To Save Baby with heart Disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X