ಬಿಬಿಎಂಪಿಯಿಂದಲೇ ರಾಜಕಾಲುವೆ ಒತ್ತುವರಿ; ಕಟ್ಟಡ ತೆರವಿಗೆ ಆಗ್ರಹಿಸಿ ಎನ್‌ಆರ್ ರಮೇಶ್ ಪತ್ರ

ಬೆಂಗಳೂರು, ಸೆಪ್ಟೆಂಬರ್ 23: ಬಿಬಿಎಂಪಿಯದ್ದು ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಾಗಿದೆ. ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಗೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂದು ಹೇಳಿ ಕೆಲವು ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಿತ್ತು. ಆದರೆ ಬಿಬಿಎಂಪಿಯೇ ರಾಜಕಾಲುವೆಯನ್ನು ಒತ್ತುವರಿ ಮಾಡಿ ಕೆಲವು ಭಾಗದಲ್ಲಿ ಕಟ್ಟಡ ನಿರ್ಮಿಸಿದೆ. ಮೊದಲು ಆ ಕಟ್ಟಡ ತೆರವುಗೊಳಿಸಿ ಎಂದು ಬಿಜೆಪಿ ಮುಖಂಡ ಎನ್‌ಆರ್ ರಮೇಶ್‌ ಬಿಬಿಎಂಪಿಗೆ ಪತ್ರವನ್ನು ಬರೆದಿದ್ದಾರೆ.

ಎನ್‌ ಆರ್‍‌ ರಮೇಶ್ ಬರೆದ ಪತ್ರದಲ್ಲೇನಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( ಬಿಬಿಎಂಪಿ)ಯಲ್ಲಿ ವ್ಯಾಪ್ತಿಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮಹದೇವಪುರ ವಲಯ, ಪೂರ್ವ ವಲಯ ಮತ್ತು ಬೊಮ್ಮನಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ.ಈ ಭಾಗಗಳಲ್ಲಿ ರಾಜಕಾಲುವೆಗಳನ್ನು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಪ್ರತಿಷ್ಟಿತ ಬಿಲ್ಡರ್ ಸಂಸ್ಥೆಗಳು ನಿರ್ಮಿಸಿದ್ದ ಬೃಹತ್ ವಸತಿ ಸಂಕೀರ್ಣಗಳು, ವಸತಿ ಸಮುಚ್ಛಯಗಳು, ವಾಣಿಜ್ಯ ಸಮುಚ್ಛಯಗಳು, Tech Park ಗಳು, IT / BT ಕಂಪೆನಿಗಳ ಕಾರಣದಿಂದಾಗಿಯೇ ಈ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು ಎಂಬುದು ಈಗಾಗಲೇ ರುಜುವಾತಾಗಿರುವ ವಿಷಯ.

ಅದೇ ರೀತಿ ಕೇವಲ ಖಾಸಗಿ ಸಂಸ್ಥೆಗಳು ಮಾತ್ರವಲ್ಲದೇ, ಸ್ವತಃ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳೂ ಸಹ ತಮ್ಮ ಮಾಲೀಕತ್ವದ ಹತ್ತಾರು ಕಟ್ಟಡಗಳನ್ನು ರಾಜಕಾಲುವೆಗಳ ಮೇಲೆ ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಉದಾಹರಣೆಗಳು ನಮ್ಮ ಮುಂದೆ ಇವೆ.

Alleged Encroachment of Rajakaluve by BBMP, NR Ramesh Writes Letter

ಉದಾಹರಣೆಗೆ - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿಗೆ ಕೂಗಳತೆಯ ದೂರದಲ್ಲಿರುವ / ಟೌನ್ ಹಾಲ್ ಗೆ ಅತ್ಯಂತ ಸಮೀಪದಲ್ಲಿರುವ ಜೆ. ಸಿ. ರಸ್ತೆಯಲ್ಲಿ ಕೋರಮಂಗಲ ಕಣಿವೆಯ ಬೃಹತ್ ನೀರುಗಾಲುವೆ (Primary Drain) ಯನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಪಾಲಿಕೆಯೇ ಸ್ವತಃ ಮೂರು ನಾಲ್ಕು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದು, ಕಳೆದ 03 ದಶಕಗಳಿಂದ ಕಟ್ಟಡಗಳ ಕೆಳಗಿನ ರಾಜಕಾಲುವೆಗಳಲ್ಲಿ ಹೂಳು ತೆಗೆಯಲು ಸಾಧ್ಯವಾಗದೇ ಇರುವ ಕಾರಣ, ಈ ಭಾಗಗಳಲ್ಲಿಯೂ ಸಹ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುತ್ತಿರುವ ಸತ್ಯವನ್ನು ಪಾಲಿಕೆಯ ಮುಖ್ಯ ಆಯುಕ್ತರಿಗೆ, ಆಡಳಿತಾಧಿಕಾರಿಗಳಿಗೆ ದಾಖಲೆಗಳ ಸಹಿತ ತಿಳಿಸಲಾಗುತ್ತಿದೆ.

ಆದ ಕಾರಣ "ಬೇಲಿಯೇ ಎದ್ದು ಹೊಲ ಮೇಯ್ದಂತೆ" ಎನ್ನುವ ಗಾದೆ ಮಾತಿನಂತೆ , ತನ್ನ ತಪ್ಪುಗಳೇ ಸಾಕಷ್ಟಿದ್ದರೂ ಸಹ ಅದನ್ನು ಮರೆಮಾಚುತ್ತಿರುವ ಪಾಲಿಕೆಯ ಬೃಹತ್ ಮಳೆ ನೀರುಗಾಲುವೆ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಬೃಹತ್ ನೀರುಗಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಪಾಲಿಕೆಯ ಒಡೆತನದ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪಾಲಿಕೆಯ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಅಭಿಯಂತರರು, ಬೃಹತ್ ನೀರುಗಾಲುವೆ ಇಲಾಖೆ ಅವರಿಗೆ ಮನವಿ ಪತ್ರಗಳನ್ನು ನೀಡಲಾಗಿದೆ.

Alleged Encroachment of Rajakaluve by BBMP, NR Ramesh Writes Letter

ಹೀಗೆ ಬಿಬಿಎಂಪಿಯ ಒತ್ತುವರಿಯ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಹಾಗೂ ಆಡಳಿತ ಪಕ್ಷದ ಮಾಜಿ ನಾಯಕರ ರಮೇಶ್ ಎನ್. ಆರ್. ರವವರು ಬಿಬಿಎಂಪಿಗೆ ಪತ್ರವನ್ನು ಬರೆಯುವ ಮೂಲಕ ಬಿಬಿಎಂಪಿಯ ಯಡವಟ್ಟನ್ನು ತೆರೆದಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+