ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲಿನ ನಾನಾ ವಿಶೇಷತೆಗಳ ಸುದ್ದಿಗುಚ್ಛ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 07 : ಮಾನವ ಯಾವಾಗಲೂ ವಾಸ್ತವತೆಯ ನಡುವೆ ನಾಗಲೋಟದಲ್ಲಿ ಓಡುತ್ತಿರುತ್ತಾನೆ. ಘಟನೆಗಳಷ್ಟೇ ಮಾನವನು ಚುರುಕ, ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡು ನಾಡಿನ ನಾನಾ ಘಟನೆಗಳಿಗೆ ಸೆಡ್ಡು ಹೊಡೆಯುತ್ತಾ ಬದುಕಾಬೇಕಾಗುತ್ತೆ.

ನಾಡಿನ ಪ್ರತಿ ಮೂಲೆಯೂ ಸುದ್ದಿ ಆಗುತ್ತಿರುವ ಸಂದರ್ಭದಲ್ಲಿ ಮಾನವ ನಮ್ಮ ನಾಡಿನ ವೈವಿಧ್ಯ ಘಟನೆಗಳ ಬೆನ್ನು ಹತ್ತಿದಾಗಲೇ ಇಡೀ ನಾಡಿನ ಐತಿಹ್ಯವನ್ನು ಕ್ಷಣಾರ್ಧದಲ್ಲಿ ತಿಳಿದುಕೊಂಡು ಜ್ಞಾನ ಭಂಡಾರ ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಾಗಾದರೆ ಬನ್ನಿ ನಮ್ಮ ನಾಡಿನಲ್ಲಿ ಏನೆಲ್ಲಾ ಘಟನೆಗಳು ಜರುಗುತ್ತಿದೆ ಎಂದು ನೋಡುತ್ತಾ, ನಮ್ಮ ನಾಡಿನ ಕುರಿತಾಗಿ ಇರುವ ನಮ್ಮ ಜ್ಞಾನ ಭಂಡಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳೋಣ....[ಪ್ರಪಂಚದ ಕೆಲವು ಘಟನಾವಳಿಗಳ ಚಿತ್ರಸುದ್ದಿ]

ಭಾದ್ರಪದ ಮಾಸದ ಭಾವೈಕ್ಯತೆಯ ಹಬ್ಬ

ಭಾದ್ರಪದ ಮಾಸದ ಭಾವೈಕ್ಯತೆಯ ಹಬ್ಬ

ಭಾದ್ರಪದ ಮಾಸದಲ್ಲಿ ಧರ್ಮ, ಜನಾಂಗಗಳ ಭೇದವಿಲ್ಲದೇ ಆಚರಿಸಿಸುವ ಏಕೈಕ ಹಬ್ಬವೇ ಗಣಪತಿ ಹಬ್ಬ. ಈಗಾಗಲೇ ನಾನಾ ಅವತಾರವೆತ್ತಿರುವ ಗಣಪ ಬಣ್ಣ, ಒಡವೆ ಕಿರೀಟ ಧರಿಸಿಕೊಂಡು ತನ್ನ ಭಕ್ತರನ್ನು ಸೆಳೆಯಲು ಪ್ರಾರಂಭಿಸಿದ್ದಾನೆ. ಇಲ್ಲೊಬ್ಬ ಚೆನ್ನೈನ ಮಹಿಳಾ ಕಲಾವಿದೆ ಗಣಪತಿ ಹಬ್ಬದಲ್ಲಿ ತನ್ನ ಗಣಪನೇ ಸುಂದರವಾಗಿ ಕಾಣಬೇಕೆಂದು ಮಗುವಿಗೆ ಮೇಕೆಪ್ ಮಾಡುವ ರೀತಿ ನಾನಾ ಬಣ್ಣದಿಂದ ವಿನಾಯಕನನ್ನು ಸುರ ಸುಂದರನನ್ನಾಗಿ ಮಾಡುತ್ತಿದ್ದಾಳೆ..

ಸ್ವಾಗತ...ಸುಸ್ವಾಗತ

ಸ್ವಾಗತ...ಸುಸ್ವಾಗತ

ಡಿಜಿಟಲ್ ಇಂಡಿಯಾ ಭಾಗವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಭಾರತೀಯ ವಾಯುಸೇನೆ ಹೊರತಂದಿರುವ ಇ ಪೋರ್ಟಲ್ ಗೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಬಂದಂತಹ ಪರ್ರಿಕರ್ ಅವರನ್ನು ಸಂಸತ್ತಿನ ಸದಸ್ಯರಾದ ರಾಜೀವ್ ಚಂದ್ರಶೇಖರ್ ಕೈಕುಲುಕಿ ಬರಮಾಡಿಕೊಂಡ ಪರಿ.

ಇದು ಕಿತ್ತಳೆ ಅಲ್ಲ, ನಮ್ಮ ಸೂರ್ಯ

ಇದು ಕಿತ್ತಳೆ ಅಲ್ಲ, ನಮ್ಮ ಸೂರ್ಯ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾದ ಖಗೋಳಶಾಸ್ತ್ರಜ್ಞರಿಗೆ ನಮ್ಮ ಸೂರ್ಯ ಮಹಾರಾಜ್ ಕಾಣಿಸಿದ್ದು ಹೀಗೆ..

ದಹಿಹಂಡಿ ಉತ್ಸವ

ದಹಿಹಂಡಿ ಉತ್ಸವ

ಮಹಾರಾಷ್ಟ್ರದ ಭಾರೀ ಜನಪ್ರಿಯ ಆಚರಣೆಯೇ ಈ ದಹಿಹಂಡಿ ಉತ್ಸವ. ಇದು ಇದೀಗ ಸಾಹಸ ಕ್ರೀಡೆ ಸ್ವರೂಪ ಪಡೆದುಕೊಂಡಿದೆ. ಇದನ್ನು ಕೃಷ್ಣ ಜನ್ಮಾಷ್ಟಮಿಯ ಮರುದಿನ ಆಚರಿಸುತ್ತಾರೆ. ಮಾನವ ಪಿರಮಿಡ್ ಗಳ ಮೂಲಕ ಎತ್ತರಲ್ಲಿರುವ ಮೊಸರಿನ ಗಡಿಗೆ ಒಡೆಯುವುದೇ ಆ ಆಟದ ವಿಶೇಷತೆ. ಜಾರ್ಖಂಡ್ ಮುಖ್ಯಮಂತ್ರಿ ರಘುಬಾರ್ ದಹಿಹಂಡಿಗೆ ಪೂಜೆ ಸಲ್ಲಿಸಿದರು.

ನಮ್ಮ ತಂಡ ಗೆದ್ದಿತು

ನಮ್ಮ ತಂಡ ಗೆದ್ದಿತು

2018ನೇ ಫಿಫಾ ವರ್ಡ್ ಕಪ್‌ಗೆ ನಡೆಸಿದ ತಯಾರಿಯಲ್ಲಿ ಇಂಡಿಯಾದ ವಿರುದ್ಧ ಜಯ ಗಳಿಸಿ ಅರ್ಹತೆ ಪಡೆದ ಇರಾನಿಯನ್ ಫುಟ್ಬಾಲ್ ತಂಡದ ಅಭಿಮಾನಿಗಳಾದ ಲಲನೆಯರು ಬೆಂಗಳೂರಿನ ಕಂಟೇಶ್ವರ ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು

ನಾನಾ ಗಣ್ಯರ ಸಮಾಗಮ

ನಾನಾ ಗಣ್ಯರ ಸಮಾಗಮ

ಡಿಜಿಟಲ್ ಇಂಡಿಯಾ ಭಾಗವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಭಾರತೀಯ ವಾಯುಸೇನೆ ಹೊರತಂದಿರುವಇ ಪೋರ್ಟಲ್ ಗೆ ಚಾಲನೆ ನೀಡಲು ಹೋಗಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಸಂಸತ್ತಿನ ಸದಸ್ಯ ರಾಜೀವ್ ಚಂದ್ರಶೇಖರ್, ರಾಜ್ಯ ಗೃಹ ಸಚಿವ ಕೆ ಜೆ ಜಾರ್ಜ್ ಫೋಟೋಗೆ ದಕ್ಕಿದ್ದು ಹೀಗೆ

ಮನೆತುಂಬಾ ನೀರು, ಹೇಗಿರೋದು

ಮನೆತುಂಬಾ ನೀರು, ಹೇಗಿರೋದು

ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಮನೆಗಳಿಗೆ ನೀರು ನುಗಿ ಜನರು ಕಾಲ ತಳ್ಳುವುದು ದುಸ್ತರವಾಗಿದೆ. ಮಳೆ ನೀರು ಮನೆ ನುಗ್ಗಿದ ಪರಿಣಾಮ ಏನು ತೋಚದೆ ಕಂಗೆಟ್ಟ ಸ್ಥಿತಿಯಲ್ಲಿ ಕೂತಿರುವ ಮಕ್ಕಳು.

ಮೋದಿ ಗಾಳಿಪಟ ಬೇಕಾ?

ಮೋದಿ ಗಾಳಿಪಟ ಬೇಕಾ?

ಕೊಲ್ಕತ್ತಾದಲ್ಲಿ ಕೆಲವು ದಿನದಲ್ಲಿ ಗಾಳಿಪಟ ಹಾರಿಸುವ ಹಬ್ಬ ಆರಂಭವಾಗುತ್ತದೆ. ಇದಕ್ಕೆ ಪೂರ್ವ ತಯಾರಿಗಾಗಿ ವೃದ್ಧರೊಬ್ಬರು ಪ್ರಧಾನ ಮಂತ್ರಿ ನರೇಂದ್ರಮೋದಿ ಇರುವ ಭಾವಚಿತ್ರವನ್ನು ತನ್ನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದು, ಅದನ್ನು ಕೊಳ್ಳಲು ಕಾದು ನಿಂತಿರುವ ಯುವಕ

English summary
This every photos indicates all over India's many latest, precious events on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X