ಹಂದಿಜ್ವರ ನಿಯಂತ್ರಣಕ್ಕೆ ಎಲ್ಲಾ ಆಸ್ಪತ್ರೆಗಳಲ್ಲಿ ಮಾತ್ರೆ ಲಭ್ಯ
ಬೆಂಗಳೂರು, ಅಕ್ಟೋಬರ್ 12: ದಿನದಿಂದ ದಿನಕ್ಕೆ ಹಂದಿಜ್ವರ(ಎಚ್1ಎನ್1) ಪ್ರಕರಣಗಳು ಹೆಚ್ಚಾಗುತ್ತಿವೆ, ರೋಗ ತಡೆಗೆ ಅಗತ್ಯವಿರುವ ಡ್ಯಾಮಿಫ್ಲ್ಯೂ ಮಾತ್ರೆಯನ್ನು ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ ಬೆಂಗಳೂರಲ್ಲಿ 109 ಪ್ರಕರಣಗಳು ಪತ್ತೆಯಾಗಿರುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. ಮಹದೇವಪುರ ವಲಯ ಒಂದರಲ್ಲೇ ಅತಿ ಹೆಚ್ಚು 43 ಪ್ರಕರಣಗಳು ಬೆಳಕಿಗೆ ಬಂದಿವೆ, ಉಳಿದಂತೆ ಪೂರ್ವ ವಲಯದಲ್ಲಿ 22, ದಕ್ಷಿಣ ವಲಯದಲ್ಲಿ 17, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ವಲಯದಲ್ಲಿ ತಲಾ 7, ಪಶ್ಚಿಮ, ಯಲಹಂಕ ವಲಯಗಳಲ್ಲಿ ತಲಾ 6 ಮತ್ತು ದಾಸರಹಳ್ಳಿ ವಲಯದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಎಚ್1ಎನ್1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮೇಯರ್ ಗಂಗಾಂಬಿಕೆ ಪಾಲಿಕೆ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರೋಗ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಎಚ್1ಎನ್1 ಸೋಂಕು ಕಂಡುಬಂದ ರೋಗಿಗಳ ಹತ್ತಿರದ ಸಂಬಂಧಿಕರು, ಕುಟುಂಬಸ್ಥರಿಗೆ ರೋಗ ಹರಡುವಿಕೆ ನಿಯಂತ್ರಿಸುವ ಸಲಹೆಗಳನ್ನು ನೀಡಿದರು.

ಮೊದಲು ಹೆಚ್ಚಾದ ಕೆಮ್ಮು ಮತ್ತು ಹಳದಿ ಕಫ, ಅತಿಯಾದ ಭೇದಿ, ವಾಂತಿ, ಮೈಕೈ ನೋವು, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿದ್ದರೆ ಅದು ಎಚ್1ಎನ್1 ಲಕ್ಷಣಗಳಿರಬಹುದು ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕಾಗಿದೆ.












Click it and Unblock the Notifications