ಅಕ್ಷಯ ತೃತೀಯ: ಚಿನ್ನ ಖರೀದಿ ಭರಾಟೆ ಬಲು ಜೋರು

ಬೆಂಗಳೂರು,ಏ.21:

ಬೆಂಗಳೂರಿನ
ಆಭರಣ
ಮಳಿಗೆಗಳು
ಮಂಗಳವಾರ
ಜನರಿಂದ
ತುಂಬಿ
ತುಳುಕುತ್ತಿದ್ದವು.
ಇದಕ್ಕೆ
ಕಾರಣ
ಹೊಸದಾಗಿ
ಹೇಳಬೇಕಾಗಿಲ್ಲ.
ಅಕ್ಷಯ
ತೃತೀಯಕ್ಕೆ
ಬಾರಿ
ಬಸವ
ಜಯಂತಿ
ರಜೆಯ
ಕೊಡುಗೆ.
ಜಯನಗರ,
ಎಂಜಿ
ರಸ್ತೆ,
ಕೋರಮಂಗಲ,
ಮಲ್ಲೇಶ್ವರಂ
ಸೇರಿದಂತೆ
ನಗರದ
ಚಿಕ್ಕ
ಚಿಕ್ಕ
ಆಭರಣ
ಮಳಿಗೆಗಳಿಂದ
ಹಿಡಿದು
ದೊಡ್ಡ
ಅಂಗಡಿಗಳಲ್ಲೂ
ಜನರು
ಚಿನ್ನಾಭರಣ
ಖರೀದಿಯಲ್ಲಿ
ನಿರತರಾಗಿದ್ದರು.

id="toptextpromo">
id='are-slot-1'
class='oiad
oi-axt
oiadv'>

ಜಯನಗರ

3
ನೇ
ಹಂತದ
ಸುತ್ತಮುತ್ತಲಿರುವ
ಜೊಯಾಲುಕ್ಕಾಸ್,
ಸುಲ್ತಾನ್,
ಆರ್
ಆರ್
ಗೋಲ್ಡ್
ಪ್ಯಾಲೇಸ್,
ಭೀಮಾ,
ಕಲ್ಯಾಣ್,
ಮಲಬಾರ್
ಎಲ್ಲ
ಮಳಿಗೆಗಳಲ್ಲೂ
ಗ್ರಾಹಕರಿದ್ದರು.
ಮಹಿಳೆಯರೇ
ಹೆಚ್ಚಿದ್ದದ್ದು
ವಿಶೇಷ.
ಚಿನ್ನ
ಖರೀದಿ
ಭರಾಟೆಯ
ಕೆಲ
ತುಣುಕುಗಳು
ನಿಮ್ಮ
ಮುಂದಿವೆ.[ಚಿನ್ನಾ...
ಬಂಗಾರ
ಖರೀದಿ
ಬೇಡ
ಎನ್ನಲೂ
ಇದೆ
ಕಾರಣ]

id='are-slot-2'
class='oiad
oi-axt
oiadv'>

ವರ್ತಕರಿಗೆ ಲಾಭವೋ ಲಾಭ

ವರ್ತಕರಿಗೆ ಲಾಭವೋ ಲಾಭ

ಭಾರತೀಯರಿಗೆ ಆಭರಣ ಕೊಳ್ಳುವುದು ಒಂದು ಸಂಪ್ರದಾಯ, ಒಂದು ಫ್ಯಾಷನ್, ಒಂದು ಪ್ರತಿಷ್ಠೆ. ಹಬ್ಬಗಳು ಎದುರಾದಾಗ ಅಗತ್ಯವಿರಲಿ ಬಿಡಲಿ ಆಭರಣ ಕೊಳ್ಳುವುದನ್ನು ನಾವು ಒಪ್ಪಿ ಅಪ್ಪಿಕೊಂಡಿದ್ದೇವೆ. ಅದರಲ್ಲೂ ಅಕ್ಷಯ ತೃತೀಯದ ನಂಬಿಕೆ ವಿವಿಧ ಆಫರ್ ಗಳ ಜತೆಗೆ ಚಿನ್ನ ವರ್ತಕರಿಗೆ ಬೃಹತ್ ಲಾಭ ತಂದುಕೊಡುವ ದಿನವಾಗಿ ಮಾರ್ಪಟ್ಟಿದೆ.

ಚಿನ್ನ ಖರೀದಿ ಮಾಡಲೇಬೇಕು

ಚಿನ್ನ ಖರೀದಿ ಮಾಡಲೇಬೇಕು

ಪ್ರತಿ ವರ್ಷವೂ ಒಂದಷ್ಟಾದರೂ ಚಿನ್ನ ಖರೀದಿ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದೇವೆ. ನಮ್ಮ ನಂಬಿಕೆಗಳೇ ಹಾಗೆ ಯಾರೂ ಏನೇ ಹೇಳಿದರೂ ಬದಲಾಗಲ್ಲ. ಬೆಲೆ ಏರಿದೆ ಅಂಥ ಗೊತ್ತಿದ್ದರೂ ಈ ದಿನ ಚಿನ್ನ ಖರೀದಿ ಮಾಡಲೇಬೇಕು ಎಂದು ಬಸವನಗುಡಿಯ ಗೃಹಿಣಿ ಸುಜಾತಾ ಖಡಾಖಂಡಿತವಾಗಿ ಹೇಳುತ್ತಾರೆ.

ನಮಗೇನು ಗೊತ್ತು?

ನಮಗೇನು ಗೊತ್ತು?

ಅಕ್ಷಯ ತೃತೀಯಾ ಯಾವತ್ತು? ಎಂಬುದೇ ನನಗೆ ಗೊತ್ತಿರಲಿಲ್ಲ. ಏಕಾಏಕಿ ಹೆಂಡತಿ ಚಿನ್ನ ಖರೀದಿ ಮಾಡಬೇಕು ಎಂದು ಕರೆದುಕೊಂಡು ಬಂದಳು. ಮಾಧ್ಯಮಗಳೇ ಇಲ್ಲದ ಪ್ರಚಾರ ನೀಡಿ ಚಿನ್ನ ಖರೀದಿ ಕ್ರೇಜ್ ಹೆಚ್ಚು ಮಾಡುತ್ತವೆ ಎಂದು ಜೆಪಿ ನಗರ ನಿವಾಸಿ ರಮೇಶ್ ಗಂಭೀರ ಆರೋಪ ಮಾಡುತ್ತಾರೆ.

ಇದೊಂದು ಪ್ರತಿಷ್ಠೆ ಪ್ರಶ್ನೆ

ಇದೊಂದು ಪ್ರತಿಷ್ಠೆ ಪ್ರಶ್ನೆ

ಪಕ್ಕದಮನೆಯವರು ಮಾಡಿದ್ದನ್ನು ನಾವು ಮಾಡಬೇಕು ಎಂಬ ಮನೋಭಾವ ಭಾರತೀಯರಲ್ಲಿ ನೆಲೆ ನಿಂತಿದೆ. ಅದರ ಒಂದು ಮುಖವೇ ಈ ಚಿನ್ನ ಖರೀದಿ. ಅಗತ್ಯವಿರಲಿ, ಬಿಡಲಿ ಚಿನ್ನದ ವ್ಯಾಮೋಹಕ್ಕೆ ಸಿಕ್ಕು ಕೂಡಿಟ್ಟಿದ್ದ ಅಲ್ಪ ಹಣವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂಬುದು ಹೆಸರೇಳಲು ಇಚ್ಛಿಸದ 'ಪತಿರಾಯ'ರೊಬ್ಬರ ಮಾತು.

ಮಹಿಳೆಯರ ಶಾಪಿಂಗ್, ಗಂಡಂದಿರ ವಾಚಿಂಗ್

ಮಹಿಳೆಯರ ಶಾಪಿಂಗ್, ಗಂಡಂದಿರ ವಾಚಿಂಗ್

ಮಹಿಳೆಯರು ಆಭರಣ ಮಳಿಗೆ ಒಳಕ್ಕೆ ತೆರಳಿ ಚಿನ್ನಾಭರಣ ಹುಡುಕಾಟದಲ್ಲಿ ಬಿಜಿಯಾಗಿದ್ದರೆ, ಗಂಡಂದಿರು ಹೊರಗಡೆ ಕಾಯುತ್ತಾ ನಿಂತಿದ್ದರು. ಆಭರಣ ಅಂಗಡಿ ಎದುರು ಗಾಡಿ ಪಾರ್ಕ್ ಮಾಡಿ ನಿಂತಿದ್ದವರ ಮುಖದಲ್ಲಿ ಯಾವಾಗ ಈ ಖರೀದಿ ಮುಗಿಯತ್ತೋ ಎಂಬ ಭಾವನೆ ಮನೆ ಮಾಡಿತ್ತು.

ಪೊಲೀಸ್ ಭದ್ರತೆ

ಪೊಲೀಸ್ ಭದ್ರತೆ

ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಚಿನ್ನಾಭರಣ ಮಳಿಗೆಗಳ ಸುತ್ತ ಭದ್ರತೆ ಒದಗಿಸಿದೆ. ಎಲ್ಲ ಆಭರಣ ಮಳಿಗೆಗಳ ಸುತ್ತ ಇಬ್ಬರು ಪೊಲೀಸ್ ಪೇದೆಗಳ ನಿಯೋಜನೆ ಮಾಡಲಾಗಿದೆ.

ವ್ಯಾಪಾರ ಅಷ್ಟೇನಿಲ್ಲ

ವ್ಯಾಪಾರ ಅಷ್ಟೇನಿಲ್ಲ

ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯಾಪಾರ ಅಷ್ಟೇನಿಲ್ಲ. ಸಂಜೆ ಹೆಚ್ಚು ಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ. ಅಕ್ಷಯ ತೃತೀಯ ನಿಮಿತ್ತ ವಿವಿಧ ಆಫರ್ ಗಳನ್ನು ನೀಡಿದ್ದೇವೆ. ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಕೊಡುಗೆಗಳನ್ನು ನೀಡಲಾಗಿದೆ ಎಂದು ಸುಲ್ತಾನ್ ಜ್ಯುವೆಲರ್ಸ್ ಮ್ಯಾನೇಜರ್ ಮಾಹಿತಿ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+