ಪ್ರೇಮಿಗಳ ಹಬ್ಬದಂದು ನಗರದಲ್ಲಿ "ಅಜೀಬ್ ದಾಸ್ತಾನ್" ಸಂಗೀತ ಸಂಜೆ
ಬೆಂಗಳೂರು, ಫೆಬ್ರವರಿ 11: ಪ್ರೇಮಿಗಳ ದಿನವನ್ನು ಮತ್ತಷ್ಟು ಮಧುರಗೊಳಿಸಲು ಟಾಕ್ ಆಫ್ ದಿ ಟೌನ್, ನಗರದಲ್ಲಿ 'ಅಜೀಬ್ ದಾಸ್ತಾನ್' - ಪ್ರೀತಿ ಹಾಗೂ ಸಂಗೀತದ ಒಂದು ಪಯಣವನ್ನು ಆಯೋಜಿಸಿದೆ.
'ನಾದೋಪಾಸನಾ' ಈ ಕಾರ್ಯಕ್ರಮ ಆಯೋಜಿಸಿದ್ದು ನೇರ ಸಂಗೀತ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಮೊತ್ತವನ್ನು ಸಮಾಜದ ದುರ್ಬಲರಿಗೆ ಹಾಗೂ ಅಸಮರ್ಥರಿಗೆ ನೀಡಲಾಗುತ್ತದೆ.
ಕನ್ನಡ ಮತ್ತು ಹಿಂದಿ ಭಾಷೆಯ ಹಾಡುಗಳು ಕೇಳುಗರಿಗೆ ಮುದ ನೀಡಲಿದೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 14, 2019 ಸಂಜೆ 6ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಕಲಾವಿದರಾದ ಅನುರಾಧ ಭಟ್ ಮತ್ತು ನಿಖಿಲ್ ಪಾರ್ಥಸಾರಥಿ ಹಾಡುಗಳಿಗೆ ದನಿ ನೀಡಲಿದ್ದಾರೆ. ರೂ.300, ರೂ.500, ರೂ.800 ದರದ ಟಿಕೆಟ್ ಗಳು ಲಭ್ಯವಿದೆ.
ಅನುರಾಧಾ ಭಟ್ : ಮಂಗಳೂರು ಮೂಲದ ಕನ್ನಡ ಗಾಯಕಿ ಅನುರಾಧಾ ಭಟ್ ಅವರು ಭರತನಾಟ್ಯ ನೃತ್ಯಗಾರ್ತಿ, ವೀಣಾ ವಾದಕಿ, ಎಂಬಿಎ ಪದವೀಧರೆ, 14 ಭಾಷೆಗಳಲ್ಲಿ ಸುಮಾರು 5000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ಸಂಗೀತ ದಿಗ್ಗಜರಾದ ಡಾ. ಬಾಲಸುಬ್ರಹ್ಮಣ್ಯಂ, ಶಂಕರ್ ಮಹಾದೇವನ್, ಸುರೇಶ್ ವಾಡೆಕರ್, ಉದಿತ್ ನಾರಾಯಣ್, ವಿಜಯ್ ಪ್ರಕಾಶ್, ವಿಜಯ್ ಯೇಸುದಾಸ್, ರಾಜೇಶ್ ಕೃಷ್ಣನ್ ಮುಂತಾದವರ ಜತೆ ಹಾಡಿದ್ದಾರೆ. ಇಳಯರಾಜ, ಹಂಸಲೇಖ, ಗುರುಕಿರಣ್, ಮನೋಮೂರ್ತಿ, ಕೀರವಾಣಿ, ವಿ ಹರಿಕೃಷ್ಣ, ಅರ್ಜುನ್ ಜನ್ಯಾ ಮುಂತಾದ ಸಂಗೀತ ನಿರ್ದೇಶಕರ ಸಂಯೋಜನೆಗೆ ದನಿಯಾಗಿದ್ದಾರೆ. ಫೆ.14ರಂದು ನಿರ್ಗತಿಕ ಮಕ್ಕಳಿಗಾಗಿ ದೇಣಿಗೆ ಸಂಗ್ರಹಿಸಲು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ.












Click it and Unblock the Notifications