• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಂಡನ್ ಇನ್ನು ಬೆಂಗಳೂರಿಗೆ ಹತ್ತಿರ: ಧನ್ಯವಾದ ಏರ್ ಇಂಡಿಯಾ

|

ಬೆಂಗಳೂರು, ಅಕ್ಟೋಬರ್ 10: ಇನ್ನುಮುಂದೆ ಬೆಂಗಳೂರಿಗೆ ಲಂಡನ್ ಹತ್ತಿರ ಹೇಗಂತೀರಾ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ನೇರ ವಿಮಾನ ಸೇವೆಯನ್ನು ಏರ್‌ ಇಂಡಿಯಾ ಆರಂಭಿಸಲಿದೆ.

ಕೆಐಎನಲ್ಲಿ ರದ್ದಾಗಲಿದೆ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು

ಲಂಡನ್ ಗೆ ತೆರಳಲು ಬಯಸುವ ಬೆಂಗಳೂರು ವಿಮಾನ ಪ್ರಯಾಣಿಕರು 2 ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ ಅಥವಾ ಅಹಮದಾಬಾದ್ ಗೆ ತೆರಳುವ ಅನಿವಾರ್ಯತೆ ಶೀಘ್ರವೇ ತಪ್ಪಲಿದೆ, ಅದರ ಬದಲಾಗಿ ಬೆಂಗಳೂರಿನಿಂದಲೇ ಲಂಡನ್ ಗೆ ನೇರವಾಗಿ ಹಾರಾಟ ಮಾಡಬಹುದಾಗಿದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ನವೆಂಬರ್ 17ರಿಂದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಬೆಂಗಳೂರಿನಿಂದಲೇ ನೇರವಾಗಿ ಲಂಡನ್ ವಿಮಾನ ನಿಲ್ದಾಣಕ್ಕೆ ಸೇವೆಯನ್ನು ಆರಂಭಿಸಲಿದ್ದು, ಈ ಬೋಯಿಂಗ್ 787 ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಲಂಡನ್ ನಿಂದ ಬೆಂಗಳೂರಿಗೆ ಬರಲಿದೆ. ಹಾಗೂ ಮಂಗಳವಾರ , ಗುರುವಾರ ಮತ್ತು ಶನಿವಾರ ಬೆಂಗಳೂರಿನಿಂದ ಲಂಡನ್ ಗೆ ತೆರಳಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಇದರಿಂದ ಐಡಿ ಮತ್ತು ಆರೋಗ್ಯ ಪ್ರವಾಸಕ್ಕಾಗಿ ಲಂಡನ್ ಗೆ ತೆರಳುವ ಬೆಂಗಳೂರು ಪ್ರಯಾಣಿಕರ ಆಸೆ ಈಡೇರಿದಂತಾಗಿದೆ. ಇದಕ್ಕೆ ಏರ್ ಇಂಡಿಯಾ ವಿಶೇಷ ಆಫರ್ ನೀಡಿದ್ದು, ಬ್ಯುಸಿನೆಸ್ ಕ್ಲಾಸ್ ಪ್ರಯಾಣವು 1,29,500 ಮತ್ತು ಎಕನಾಮಿಕ್ ಕ್ಲಾಸ್ ಪ್ರಯಾಣ 35,220 ನಿಗದಿಪಿಸಲಾಗಿದೆ. ಬೆಂಗಳೂರಿನಿಂದ ವಿಮಾನ ಬೆಳಗ್ಗೆ 5.25ಕ್ಕೆ ಹೊರಡಲಿದೆ.

English summary
Air India will start direct air service from Bengaluru to London from November 17. Earlier passengers have to travel via Mumbai or Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X