ಬೆಂಗಳೂರಲ್ಲಿ ವಾಯು ಗುಣಮಟ್ಟ ನಿಯಂತ್ರಣ ವಲಯ ಅನುಷ್ಠಾನ
ಬೆಂಗಳೂರು, ಆಗಸ್ಟ್ 1: ಬೆಂಗಳೂರಲ್ಲಿ ವಾಹನ ಸಂಚಾರ ವಿಪರೀತವಾಗಿರುವುದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ, ಇದರ ನಿಯಂತ್ರಣಕ್ಕಾಗಿ ನಗರದ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟ ನಿಯಂತ್ರಣ ವಲಯವನ್ನು ಸ್ಥಾಪನೆಗೆ ಮುಂದಾಗಿರುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಲಂಡನ್ ಉಪಮೇಯರ್ ಹಾಗೂ ಸಿ40 ಸಿಟಿ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ವಿಚಾರಗೋಷ್ಠಿ ನಡೆಸಲಾಗಿತ್ತು, ಈ ವೇಳೆ ನಗರ ಮಾಲಿನ್ಯ ನಿಯಂತ್ರಣದ ಬಗ್ಗೆ ವಿಚಾರ ಮಂಡನೆಯಾಗಿತ್ತು. ಬುಧವಾರ ಕೂಡ ವಿಧಾನಸೌಧದಲ್ಲಿ ಲಂಡನ್ ಉಪಮೇಯರ್ ಶಿರ್ಲಿ ಡೋಡ್ರಿಗಸ್ ಹಾಗೂ ಪ್ರತಿನಿಧಿಗಳ ಜತೆಗೆ ನಡೆಸಲಾಯಿತು.
ಕಳೆದ 10 ವರ್ಷದಲ್ಲಿ ಬೆಂಗಳೂರು ಹೆಚ್ಚು ಬೆಳೆದಿದೆ. ಮಾಲಿನ್ಯ ಪ್ರಮಾಣ ಕೂಡ ಹೆಚ್ಚಿದೆ. ಆದರೆ, ದೆಹಲಿ,ಮುಂಬೈಗೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ನಮ್ಮಲ್ಲಿಕಡಿಮೆ ಇದೆ ಎಂಬುದು ಸಮಾಧಾನದ ಸಂಗತಿ. ಆದರೂ ಮಾಲಿನ್ಯ ಪ್ರಮಾಣದ ಬಗ್ಗೆ ಈಗಿನಿಂದಲೇ ಚಿಂತಿಸಬೇಕಿದೆ.

ಅದಕ್ಕೆ ಪೆಟ್ರೋಲ್, ಡೀಸಲ್ ಚಾಲಿತ ವಾಹನಗಳ ನೋಂದಣಿಯನ್ನು ನಿಲ್ಲಿಸುವ ಅಗತ್ಯವಿದೆ. ಸಿಎನ್‌ಜಿ, ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಬೇಕಿದೆ. ಇದರಿಂದ ಒಂದಷ್ಟು ಪ್ರಮಾಣದ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದು ಪರಮೇಶ್ವರ್ ಹೇಳಿದರು.
ಅಲ್ಲಿ ಮಾಲಿನ್ಯ ನಿಯಂತ್ರಣ, ಕ್ವಾಲಿಟಿ ಏರ್ ಕೂಡ ಇದೆ. ಈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಆಗಬೇಕಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕಸ ಸಂಸ್ಕರಣೆ, ಟ್ರಾಫಿಕ್ ನಿರ್ವಹಣೆ ಕೂಡ ಆಗಬೇಕು. ಇದಕ್ಕೆ ಲಂಡನ್‌ನ ಯೋಜನೆಯನ್ನು ಇಲ್ಲಿ ಅನುಷ್ಠಾನ ಆಗಬೇಕಿದೆ. ನಗರದ ಮೂಲ ಸಮಸ್ಯೆ ಬಗೆ ಹರಿಯಬೇಕು ಎಂದು ಹೇಳಿದರು.
ಡೆಂಡರ್ ಶ್ಯೂರ್ ಯೋಜನೆಯಡಿ ಸೈಕಲಿಂಗ್ ಟ್ರಾಕ್ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕೆರೆಗಳಲ್ಲಿ ನೊರೆ ಸಮಸ್ಯೆ ಬಗ್ಗೆ ಕೂಡ ಚರ್ಚಿಸಲಾಯಿತು. ಇದನ್ನು ಈ ಯೋಜನೆಯಡಿ ಕೈಗೊಂಡರೆ ಈ ಸಮಸ್ಯೆ ನಿವಾರಣೆಗೆ ಸಹಕಾರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನಗರದಲ್ಲಿ ಮಾಲಿನ್ಯ ನಿಯಂತ್ರಣದ ರೂಪುರೇಷೆ ಬಗ್ಗೆ ಚರ್ಚೆಯಾಯಿತು. ಸಭೆಯಲ್ಲಿ ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಇದ್ದರು.











Click it and Unblock the Notifications