ಬೀದರ್‌ಗೆ ರಾಹುಲ್ ಗಾಂಧಿ: 3 ಲಕ್ಷ ಜನರನ್ನುದ್ದೇಶಿಸಿ ಭಾಷಣ
ಬೆಂಗಳೂರು, ಆಗಸ್ಟ್ 7: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಆಗಸ್ಟ್ 13ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಬೀದರ್‌ನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲಿದ್ದು ಮೂರು ಲಕ್ಷ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಇದು ಮಹತ್ವದ ಕಾರ್ಯಕ್ರಮವಾಗಿರಲಿದೆ. ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆಗಾಗಿ ಆ.9ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕೂಡ ಕಾರ್ಯಕ್ರಮ ನಡೆಯಲಿದೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡವರಿಗೆ ಆಹ್ವಾನ ನೀಡಲಾಗಿದೆ.
ರಾಜ್ಯದ ಪ್ರತಿನಿಧಿ ನಿರ್ಮಲಾ ಸೀತಾರಾಮನ್ ದೇಶದ ಇಲಾಖೆ ನಿರ್ವಹಿಸುತ್ತಿದ್ದಾರೆ. ಆದರೆ ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೂ ಸುಮ್ಮನಿದ್ದಾರೆ., ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದೀರೆಂದು ತಿಳಿಸಲು ಅವರಿಗೆ ಪತ್ರ ಬರೆಯುತ್ತಿದ್ದೇವೆ ಎಂದರು.

ಹಣಕಾಸು ಆಯೋಗದಿಂದ ಅನ್ಯಾಯವಾಗುತ್ತಿದೆ, ಹಣ ಕೊರತೆಯಾಗುತ್ತದೆ. ಬ್ಯಾಂಕಿಂಗ್ ನೇಮಕದಲ್ಲಿ ದಕ್ಷಿಣ ರಾಜ್ಯಗಳ ಕಡೆ ಗಣನೆಯಾಗುತ್ತಿದೆ. ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ. ಸಿಆರ್ ಪಿಎಫ್ ಸೆಂಟರ್ ಕರ್ನಾಟಕದಲ್ಲಿ ಆಗಬೇಕಿತ್ತು.
ಉತ್ತರ ಪ್ರದೇಶಕ್ಕೆ ವರ್ಗಾಯಿಸಿ ಅನ್ಯಾಯ ಮಾಡಲಾಗಿದೆ. ರಫೇಲ್ ಡೀಲ್ ನಲ್ಲಿ ಎಚ್ ಎಎಲ್ ಗೆ ಅನ್ಯಾಯವಾಗಿದೆ. 96ರಿಂದ ನಡೆಯುತ್ತಿರುವ ಏರ್ ಷೋ ಬದಲಾವಣೆಗೆ ಪ್ರಯತ್ನ ನಡೆದಿದ್ದು ತಾವು ಬೆಂಗಳೂರಲ್ಲೇ ಉಳಿಸಲು ತೀರ್ಮಾನ ಮಾಡುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ನೀವು ಕರ್ನಾಟಕದಿಂದ ಆಯ್ಕೆಯಾಗಿದ್ದು, ರಾಜ್ಯದ ಹಿತಾಸಕ್ತಿ ಕಾಪಾಡಿ. ದೇಶದ ರಕ್ಷಣಾ ಸಚಿವರಾಗಿ ರಾಜ್ಯದ ರಕ್ಷಣೆಯನ್ನೂ ಕಾಪಾಡಿ ಇಲ್ಲವಾದರೆ ನಿಮ್ಮ ಬದ್ಧತೆ ಬಗ್ಗೆ ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದರು.












Click it and Unblock the Notifications