ರಂಗಶಂಕರದಲ್ಲಿ ಇಬ್ಸೆನ್ ನಾಟಕದ ರೂಪಾಂತರ 'ಅಹಲ್ಯಾ' ಬಿ. ಡಿ.
ಬೆಂಗಳೂರು, ಫೆಬ್ರವರಿ 17: ಹೆನ್ರಿಕ್ ಇಬ್ಸೆನ್‍ನ ಹೆಡ್ಡಾ ಗ್ಯಾಬ್ಲರ್ ನ ಕನ್ನಡ ರೂಪಾಂತರ 'ಅಹಲ್ಯಾ' ಬಿ. ಡಿ ನಾಟಕದ ಎರಡು ಪ್ರದರ್ಶನ ರಂಗಶಂಕರದಲ್ಲಿ ಆಯೋಜನೆಗೊಂಡಿದೆ.
ಅಹಲ್ಯಾ -ಕನ್ನಡದ ಹೆಡ್ಡಾ ಗ್ಯಾಬ್ಲರ್- ವಿದ್ವಾಂಸನ ಹೆಂಡತಿ. ಜೀವನದಲ್ಲಿ ಏಕತಾನತೆಯಿಂದ ಬೇಸತ್ತ ಹೆಣ್ಣು. ಬದುಕಿಗಾಗಿ ಹಂಬಲಿಸುತ್ತಿದ್ದಾಳೆ. ಮದುವೆಯ ಇಡಕತ್ತರಿಯಲ್ಲಿ ಸಿಲುಕಿರುವ ಈಕೆ ಇಬ್ಬರು ಗಂಡಸರ - ಒಬ್ಬನನ್ನು ಪ್ರೀತಿಸಿ ಆತನನ್ನು ಪ್ರೇಮಿಯೆಂದು ಜಗತ್ತಿನ ಮುಂದೆ ಹೇಳಲಾಗದೇ ಒದ್ದಾಡುತ್ತಿದ್ದಾಳೆ.
ಇನ್ನೊಬ್ಬ ವ್ಯಕ್ತಿ ಆಕೆಯ ಗಂಡ - ಹಣೇಬರಹವನ್ನು ತಿದ್ದುವ ಹುನ್ನಾರದಲ್ಲಿದ್ದಾಳೆ. ಆಕೆಗೆ ತನ್ನ ಸುತ್ತಲಿರುವ ಎಲ್ಲಾ ಗಂಡಸರೂ ಮಹಾ ಬೋರ್ ಎನಿಸಿ, ನೈತಿಕ ಚೌಕಟ್ಟುಗಳಲ್ಲಿ ಉಸಿರು ಕಟ್ಟಿಸುತ್ತಿರುವ ಸಮಾಜದ ಸಂಪ್ರದಾಯದ ವಿರುದ್ಧವಾಗಿ ಹೆಣ್ಣೊಬ್ಬಳತ್ತ ಆಕರ್ಷಿತಳಾಗುತ್ತಾಳೆ.

ಆದರೆ, ಅದನ್ನೂ ಬಹಿರಂಗವಾಗಿ ಒಪ್ಪಿಕೊಳ್ಳಲು ಆಕೆಗೆ ಜಗತ್ತಿನ ರೀತಿ-ರಿವಾಜುಗಳು ಅಡ್ಡಿಬರುತ್ತವೆ. ಕೊನೆಯಲ್ಲಿ ಅಹಲ್ಯಾ ತನ್ನ ಹಣೆಬರಹವನ್ನು ತಾನೆ 'ಸುಂದರ'ವಾಗಿ ರೂಪಿಸಿಕೊಳ್ಳುತ್ತಾಳೆ, ರಾಮಾಯಣದ ಅಹಲ್ಯೆಯಂತೆ ಅಲ್ಲ.

ಹೆನ್ರಿಕ್ ಇಬ್ಸೆನ್‍ನ ಹೆಡ್ಡಾ ಗ್ಯಾಬ್ಲರ್ ರೂಪಾಂತರ
ರೂಪಾಂತರ, ನಿರ್ದೇಶನ: ಸುರೇಂದ್ರನಾಥ್
ಕನ್ನಡ, 90 ನಿಮಿಷಗಳು
ಫೆಬ್ರವರಿ 28 ಮತ್ತು ಮಾರ್ಚ್ 1 | ಸಂಜೆ 7:30 | 150/- | ರಂಗ ಶಂಕರ
ಟಿಕೆಟ್ ಗಳು ರಂಗ ಶಂಕರದಲ್ಲಿ ಲಭ್ಯ











Click it and Unblock the Notifications