ಕಾಣೆಯಾಗಿ 6 ತಿಂಗಳ ಬಳಿಕ ಅರೆ ಬೆಂದ ಸ್ಥಿತಿಯಲ್ಲಿ ಶಿಕ್ಷಕಿ ಶವ ಪತ್ತೆ
ಬೆಂಗಳೂರು, ಮೇ 16: ಶಿಕ್ಷಕಿಯೊಬ್ಬರು ಕಾಣೆಯಾಗಿ ಆರು ತಿಂಗಳ ಬಳಿಕ ಅರೆ ಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತರು ಮೂಕಾಂಬಿಕನಗರದ ನಿವಾಸಿ ಕಾವ್ಯ ಸತೀಶ್ ಎಂದು ಗುರುತಿಸಲಾಗಿದೆ. 30 ವರ್ಷ ವಯಸ್ಸಿನ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಅಸ್ಥಿಪಂಜರದ ತಲೆಯ ಭಾಗದಲ್ಲಿ ಸಾಕಷ್ಟು ಗಾಯದ ಗುರುತುಗಳಿದ್ದವು.ಕಾವ್ಯ ಸತೀಶ್ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.

ಅಕ್ಟೋಬರ್ 31ರಂದು ಕಾವ್ಯ ಕಾಣೆಯಾಗಿದ್ದರು. ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು, ಬಸ್ ಸ್ಟ್ಯಾಂಡ್ ಇನ್ನಿತರೆ ಯಾವುದೇ ಪ್ರದೇಶದಲ್ಲಿ ಹುಡುಕಿದ್ದರೂ ಆಕೆ ಪತ್ತೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಿಂದ ಕಾವ್ಯ ಅವರ ತಂಗಿ ಸೌಮ್ಯಗೆ ಕರೆ ಬಂದಾಗ ಸತ್ಯ ಗೊತ್ತಾಗಿದೆ. ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲಿ ಅರೆಬೆಂದ ದೇಹ ಪತ್ತೆಯಾಗಿದೆ, ಕೆಲವು ಪ್ರಾಣಿಗಳು ಮೃತದೇಹವನ್ನು ಎಳೆದುಹಾಕಿವೆ ಎಂದು ತಿಳಿಸಿದ್ದರು.
ಮಹಿಳೆ ಶವದ ಬಳಿ ಲಂಚ್ ಬಾಕ್ಸ್, ವಾಚ್, ಚಪ್ಪಲಿ ಪತ್ತೆಯಾಗಿತ್ತು ಇದೆಲ್ಲವೂ ಕಾವ್ಯ ಪತಿ ಸತೀಶ್ ಹೇಳಿದ್ದ ಕುರುಹುಗಳೇ ಆಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications