Aero India 2023: ಏರ್‌ಪೋರ್ಟ್ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ, ಭಾರೀ ಟ್ರಾಫಿಕ್ ಜಾಮ್
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಏರೋ ಶೋ, ಏರೋ ಇಂಡಿಯಾ 2023 ರ 14 ನೇ ಆವೃತ್ತಿಯನ್ನು ಉದ್ಘಾಟಿಸಿದ್ದಾರೆ.
ಬೆಂಗಳೂರು, ಫೆಬ್ರವರಿ. 13: ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಏರೋ ಶೋ, ಏರೋ ಇಂಡಿಯಾ 2023 ರ 14 ನೇ ಆವೃತ್ತಿ ಉದ್ಘಾಟನೆಯಾಗಿದ್ದು, ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಹಾಗೇಯೇ ಹಲವು ಮಂದಿ ತೊಂದರೆಗೂ ಒಳಗಾಗಿದ್ದಾರೆ.
ಹೌದು, ಬೆಂಗಳೂರಿನ ಏರ್‌ಪೋರ್ಟ್ ರೋಡ್ ಎಂದರೇ ಯಾವಾಗಲೂ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿ. ಅಂತಹದರಲ್ಲಿ ಸೋಮವಾರದಿಂದ ಏರ್ ಶೋ ಕೂಡ ಆರಂಭವಾಗಿದ್ದು, ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಂಡು ಜನ ಸುಸ್ತಾಗಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಸಾವಿರಾರು ಮಂದಿ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 202ರನ್ನು ಕಣ್ತುಂಬಿಕೊಳ್ಳಲು ಅತ್ತ ಪ್ರಯಾಣಿಸಿರುವುದು ಟ್ರಾಫಿಕ್ ಜಾಮ್ ಅನ್ನು ಅಧಿಕಗೊಳಿಸಿದೆ.

ಈ ಹಿಂದೆಯೇ ನಗರ ಸಂಚಾರಿ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಏರ್‌ಪೋರ್ಟ್ ರಸ್ತೆಗೆ ಬರುವವರು ಬೇರೆ ಮಾರ್ಗಗಳ ಮೂಲಕ ತೆರಳಲು ಸೂಚಿಸಲಾಗಿದೆ. ಆದರೂ, ಭಾರೀ ಟ್ರಾಫಿಕ್ ಜಾಮ್‌ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸಾಕ್ಷಿಯಾಗಿದೆ.

ಇನ್ನು, ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023 ರ 14 ನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. "ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ. ಇಂದು, ರಾಷ್ಟ್ರವು ಹೊಸ ಎತ್ತರವನ್ನು ಮುಟ್ಟುತ್ತಿದ್ದು, ಅದನ್ನು ದಾಟುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.












Click it and Unblock the Notifications