ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಿಸ್ಸಿಂಗ್ ಮ್ಯಾನ್' ಮೃತ ಪೈಲಟ್‌ಗೆ ಆಗಸದಲ್ಲೇ ಶ್ರದ್ಧಾಂಜಲಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರದರ್ಶನದ ಸಿದ್ಧತೆ ವೇಳೆ ತಾಲೀಮಿನಲ್ಲಿ ಮೃತಪಟ್ಟಿದ್ದ ಸಾಹಿಲ್‌ಗೆ ಗಾಂಧಿಗೆ ಎಚ್‌ಎಎಲ್‌ನ ಸುಖೋಯ್, ಜಾಗ್ವಾರ್, ತೇಜಸ್ ಯುದ್ಧ ವಿಮಾನಗಳು ಒಟ್ಟಾಗಿ ಶ್ರದ್ಧಾಂಜಲಿ ಸಲ್ಲಿಸಿದವು.

ನಂತರ ಎಚ್ಎಎಲ್‌ನಿಂದ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಹಗುರ ಯುದ್ಧ ವಿಮಾನ ತೇಜಸ್, ವಿಮಾನಕ್ಕೆ 'ತೇಜಸ್ ' ಎಂದು ನಾಮಕರಣ ಮಾಡಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ಅಧಿಕೃತ ಚಾಲನೆ ದೊರೆಯುತ್ತಿದ್ದಂತೆ, ದೇಶ ವಿದೇಶಗಳ ಅತ್ಯುನ್ನತ ಯುದ್ಧ ಹಾಗೂ ನಾಗರಿಕಯಾನ ವಿಮಾನಗಳು ಮೈನವಿರೇಳಿಸುವ ಪ್ರದರ್ಶನ ನೀಡಿದವು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು , ಕೇಂದ್ರ ಸಾಂಖ್ಯಿಕ ಮತ್ತು ದತ್ತಾಂಶ ಇಲಾಖೆ ಸಚಿವ ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸೇನೆಯ ಮುಖ್ಯಸ್ಥರು ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ವಿಮಾನಗಳು ಕಸರತ್ತು ನಡೆಸಿದವು.

Aero india 2019, Missing man formation in honour of Wing Commander Sahil Gandhi

ಆದರೆ, ಈ ಪ್ರದರ್ಶನದ ಉತ್ಸಾಹದ ಬೆನ್ನಲ್ಲೇ ನಿನ್ನೆ ನಡೆದ ಯುದ್ಧ ವಿಮಾನಗಳ ಅಪಘಾತದ ಕರಿನೆರಳು ಢಾಳಾಗಿ ಕಾಣಿಸಿತು.ಪ್ರದರ್ಶನದ ಆಕರ್ಷಣೆಯಾಗಿದ್ದ ಸಾರಂಗ್ ಹೆಲಿಕಾಪ್ಟರ್ ಗಳು ಎಂದಿನಂತೆ ತಮ್ಮ ಅಪಾಯಕಾರಿ ಕ್ರಾಸಿಂಗ್ ಗಳ ಮೂಲಕ ಜನರನ್ನು ಬೆಚ್ಚಿ ಬೀಳಿಸಿದವು.

ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು

ಹೊಗೆ ಉಗುಳುತ್ತಾ ಮೈದಾನದ ನಾಲ್ಕು ದಿಕ್ಕುಗಳನ್ನು ಆವರಿಸಿ, ಆಗಾಗ್ಗೆ ಒಂದೊಕ್ಕೊಂದು ಡಿಕ್ಕಿ ಹೊಡೆಯುವಂತೆ ವೇಗವಾಗಿ ನುಗ್ಗಿ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಮತ್ತೆ ಹಾರಾಟ ನಡೆಸುವ ಮೂಲಕ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದವು.

ಅಪಘಾತದ ಹಿನ್ನೆಲೆಯಲ್ಲಿ "ಸೂರ್ಯಕಿರಣ" ಜೆಟ್ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿಲ್ಲ. ಉದ್ಘಾಟನಾ ಕಾರ್ಯಕ್ರಮದ ಆರಂಭದಲ್ಲಿ ಮೃತ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.

ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ

ಐದು ದಿನಗಳ ವೈಮಾನಿಕ ಪ್ರದರ್ಶನದಲ್ಲಿ ವಿಮಾನ, ಹೆಲಿಕಾಪ್ಟರ್‌ಗಳು, ನಾಗರಿಕ ವಿಮಾನಗಳು ವೈಮಾನಿಕ ಪ್ರದರ್ಶನವನ್ನು ನೀಡಲಿವೆ. ದೇಶ-ವಿದೇಶಗಳ ನೂರಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಈ ವೇಳೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು, ಮಾರಾಟ, ಖರೀದಿಗೆ ಸಹಿ ಬೀಳಲಿವೆ.

English summary
Aero india 2019: Surya kiran aerobotic display team lost on of its display pilotss wg Sahil Ganshi. As a fitting tribute to one of their beloved teammates the suryakirans will now fly missing man formation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X