'ಉ.ಪ್ರ ಸಿಎಂ ನಟನೆಗೆ ನನ್ನೆಲ್ಲ ರಾಷ್ಟ್ರಪ್ರಶಸ್ತಿ ಕೊಡೋಣ ಅನಿಸಿತು'

ಬೆಂಗಳೂರು, ಅಕ್ಟೋಬರ್ 2: "ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಒಂದು ವಿಡಿಯೋ ನೋಡಿದೆ. ಅದರಲ್ಲಿದ್ದುದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು. ನನಗೆ 5 ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅವರ ನಟನೆ ನೋಡಿ ಅವನ್ನು ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು! ನಾನೊಬ್ಬ ದೊಡ್ಡ ನಟ. ಅವರೆಲ್ಲ (ರಾಜಕಾರಣಿಗಳು) ನನಗಿಂತ ದೊಡ್ಡ ನಟರಾಗಲು ಯತ್ನಿಸುತ್ತಿದ್ದಾರೆ".

-ಬಹುಭಾಷಾ ನಟ ಪ್ರಕಾಶ್ ರೈ ನೀಡಿದ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಆರಂಭವಾದ ಮೂರು ದಿನಗಳ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ)ನ 11ನೇ ರಾಜ್ಯ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Adityanath is a better actor than me. I think I must give out all my five national awards to him: Prakash Rai

ಗೌರಿ ನನ್ನ ಆತ್ಮೀಯ ಗೆಳತಿ. ಗೌರಿಯನ್ನು ಕೊಂದವರು ಯಾರು ಎಂಬುದು ಗೊತ್ತಿಲ್ಲದಿರಬಹುದು, ಆದರೆ ಗೌರಿಯವರ ಸಾವನ್ನು ಸಂಭ್ರಮಿಸುತ್ತಿರುವವರು ಯಾರು ಎಂಬುದು ಗೊತ್ತಿದೆ. ಗೌರಿಯವರ ಹತ್ಯೆಯನ್ನು ನಾನು ಖಂಡಿಸಿದ ಮೇಲೆ, ಜಾಲತಾಣಗಳಲ್ಲಿ ನಾನು ಎಂದೂ ಕೇಳಿರದಂತಹ ಕೆಟ್ಟ ಭಾಷೆಯ ಬಯ್ಗುಳವನ್ನು ನೋಡುತ್ತಿದ್ದೇನೆ. ಆದರೆ ಇಂತಹ ಬೆದರಿಕೆಗಳಿಂದ ನಾನು ಬೆದರುವವನಲ್ಲ ಎಂದು ಹೇಳಿದರು.

ಟ್ವೀಟರ್, ಫೇಸ್ ಬುಕ್ ಮುಂತಾದ ಜಾಲತಾಣದಲ್ಲಿ ಕೆಟ್ಟದಾಗಿ ನಿಂದಿಸುವವರು ಎದುರಿಗೆ ಬಂದು ನಿಂತು ಮಾತನಾಡಿ' ಎಂದು ಸವಾಲು ಹಾಕಿದರು.

ಸಮಾಜದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನರು ಅವರಿಗೇನು ಆಳುವ ಪಕ್ಷ. ಹಣಬಲದಿಂದ ಗೆಲ್ಲುತ್ತಾರೆ.', ಕ್ಷೇತ್ರದಲ್ಲಿ ಅವರ ಜಾತಿ ಓಟು ಜಾಸ್ತಿ ಇದೆ. ಗೆಲ್ಲುತ್ತಾರೆ' ಎಂಬಂತೆ ಮಾತನಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಮಕ್ಕಳಿಗೆ ಕುಡಿಯಲು ಹಾಲಿಲ್ಲದಿರುವಾಗ ಚಿತ್ರನಟರ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವುದು ಮೂರ್ಖತನ. ರಾಜಕೀಯ, ಸಮಾಜ ಸುಧಾರಣೆ ಆಗಬೇಕಾದರೆ ಯುವಜನರು ಉತ್ತಮ ನಾಯಕರಾಗಿ ಬೆಳೆದು ಬರಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+