ಸಂಜನಾ ಜಾಮೀನು ಅರ್ಜಿ: ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಡಿಸೆಂಬರ್ 07: ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾಣಿ, ತನಗೆ ಆರೋಗ್ಯ ಸರಿಯಿಲ್ಲ ಎಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ.
ಡ್ರಗ್ ಸೇವನೆ ಆರೋಪದಡಿ ನಟಿ ಸಂಜನಾ ಗಲ್ರಾಣಿ ಬಂಧನಕ್ಕೆ ಒಳಗಾಗಿದ್ದರು. ವಿಚಾರಣೆ ವೇಳೆ ಡ್ರಗ್ ಮಾತ್ರವಲ್ಲದೇ ಕೋಟಿ ಕೋಟಿ ಬಡ್ಡಿ ವ್ಯಾಪಾರ ಕೂಡ ಬೆಳಕಿಗೆ ಬಂದಿತ್ತು. ದಿನಕ್ಕೊಂದು ಹೊಸ ಸಂಗತಿ ಹೊರ ಹಾಕಿದ್ದ ನಟಿಮಣಿಯ ಜಾಮೀನು ಅರ್ಜಿ ಸ್ಥಳೀಯ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಸಂಜನಾ ಕಳೆದ 90 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪೊಲೀಸರ ಕಾರು ಹತ್ತೋಕು ಹಿಂದೇಟು ಆಗಿದ್ದ ಗಲ್ರಾಣಿ ನಮ್ಮ ಮನೆ ಮೇಲೆ ದಾಳಿ ಮಾಡಲಿ, ನನಗೂ ಡ್ರಗ್ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು. ಇದಾದ ಬಳಿಕ ಸಿಸಿಬಿ ಪೊಲೀಸರು ಸಂಜನಾ ನಿವಾಸದ ಮೇಲೆ ಶೋಧ ನಡೆಸಿ ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು.

ಡ್ರಗ್ ಸಿಕ್ಕಿದ್ದಕ್ಕಿಂತೂ ಡ್ರಗ್ ಪೆಡ್ಲರ್ ಗಳ ಜತೆ ಸಂಜನಾ ಸಂಪರ್ಕ, ವಾಟ್ಯಪ್ ನಲ್ಲಿ ನಡೆದಿದ್ದ ಸಂಭಾಷಣೆ ಮತ್ತಿತರ ಸಾಕ್ಷಾಧಾರ ಆಧರಿಸಿ ಸಂಜನಾರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಜೈಲಿನಲ್ಲಿರುವ ಸಂಜನಾ ಅನಾರೋಗ್ಯ ಕಾರಣ ನೀಡಿ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ನಟಿ ಸಂಜನಾ ಅವರ ಆರೋಗ್ಯ ತಪಾಸಣೆಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆಸಿ, ತಪಾಸಣೆ ವರದಿಯನ್ನು ಡಿ. 10 ರೊಳಗೆ ಸಲ್ಲಿಸಲು ಸೂಚಿಸಿದೆ. ಸಂಜನಾ ಆರೋಗ್ಯ ತಪಾಸಣೆ ಮಾಧ್ಯಮಗಳ ಚಿತ್ರೀಕರಣಕ್ಕೆ ಅವಕಾಶ ಕೊಡಬಾರದು ಎಂದು ನ್ಯಾಯಪೀಠ ಸೂಚಿಸಿದೆ. ಪ್ರಕರಣದ ವಿಆರಣೆಯ್ನು ಡಿಸೆಂಬರ್ 10 ಕ್ಕೆ ಮುಂದೂಡಲಾಗಿದೆ.












Click it and Unblock the Notifications