Yuva Rajkumar: ಇಂದು ಯುವ-ಶ್ರೀದೇವಿ ವಿಚ್ಛೇದನ ಅರ್ಜಿ ವಿಚಾರಣೆ
ಬೆಂಗಳೂರು, ಜುಲೈ 04: ದೊಡ್ಮನೆ ಕುಟುಂಬದ ಮೂರನೇ ತಲೆಮಾರಿನ ನಟ ಯುವ ರಾಜಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದಿದ್ದು, ಅವರು ಪತ್ನಿಗೆ ಡಿವೋರ್ಸ್ ನೀಡುತ್ತಿರುವ ವಿಚಾರ ಬಹಿರಂಗವಾಗಿದೆ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಇಂದು ಗುರುವಾರ (ಜುಲೈ 04) ನಡೆಯಲಿದೆ.
ನಟ ಯುವರಾಜ ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ದಾಂಪತ್ಯ ಜೀವನ ಸರಿ ಇಲ್ಲ ಎಂಬುದು ಜಗಜ್ಜಾಹಿರಾಗಿದೆ. ಯುವ ಅವರು ಪತ್ನಿಗೆ ಡಿವೋರ್ಸ್ ನೋಟಿಸ್ ನೀಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂತು. ಅವರು ಪತ್ನಿ ಅಗೌರವ ತೋರುತ್ತಾರೆ ಎಂದೆಲ್ಲ ಹೇಳಿ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಯುವ ಪತ್ನಿ ಶ್ರೀದೇವಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಕೋರ್ಟ್‌ನಲ್ಲಿಯೇ ಉತ್ತರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದ ಪತ್ನಿ ಶ್ರೀದೇವಿ ಬೈರಪ್ಪ, ತನ್ನ ಪತಿ ಹಾಗೂ ಸ್ಯಾಂಡಲ್‌ವುಡ್ ನಟಿಯೊಂದಿಗೆ ಸಂಬಂಧ ಇರುವುದಾಗಿ ತಿಳಿಸಿದ್ದರು. ಈ ಕುರಿತ ಆಡಿಯೋ ಸಹ ಹೊರ ಬಂದಿದ್ದು, ಎಲ್ಲರು ನಂಬುವಂತೆ ಮಾಡಿದೆ.
ಪತ್ನಿ ಶ್ರೀದೇವಿ ಬೆಂಗಳೂರಿಗೆ ಆಗಮನ
ಸದ್ಯ ಶ್ರೀದೇವಿ ಬೈರಪ್ಪ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು, ಕೋರ್ಟ್ ವಿಚಾರಣೆ ಪ್ರಯುಕ್ತ ಬುಧವಾರವಷ್ಟೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ನ್ಯಾಯಾಲಯದಲ್ಲಿ ತಮಗೆ ಬಂದ ನೋಟಿಸ್, ದಾಂಪತ್ಯ ಜೀವನ ಇನ್ನಿತರ ವಿಷಯ ಕುರಿತು ಶ್ರೀದೇವಿ ಅವರು ಮಾತನಾಡಲಿದ್ದಾರೆ ಎನ್ನಲಾಗಿದೆ.
ಯುವ ರಾಜಕುಮಾರ್ ಈಗಷ್ಟೇ ಒಂದು ಸಿನಿಮಾ ಮಾಡಿ, ಗೆದ್ದ ಖುಷಿಯಲ್ಲಿದ್ದರು. ಪನೀತ್ ರಾಜಕುಮಾರ್ ನಿಧನಾನಂತರ ಅವರ ಸ್ಥಾನ ತುಂಬುವವರು ಇವರೇ ಎಂದು ಹೇಳಲಾಗಿತ್ತು. ಆದರೆ ಅಭಿಮಾನಿಗಳ ಈ ಭರವಸೆ, ಆಸೆಯನ್ನು ನಟ ಯುವ ನಿರಾಸೆ ಮಾಡಿದ್ದಾರೆ. ಅಭಿಮಾನಿಗಳು ಅಪ್ಪು ಅಪ್ಪುನೇ, ಅವರ ಸ್ಥಾನ ಯಾರು ತುಂಬಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೊಡ್ಮನೆಯಲ್ಲಿ ದಾಂಪತ್ಯದಲ್ಲಿ ಕಲಹ ವಿಚಾರವಾಗಿ, ಮುನ್ನೆಲೆ ಬಂದ, ದೊಡ್ಮನೆ ವೈಯಕ್ತಿಕ ವಿಚಾರಗಳು ಸುದ್ದಿಯಾದ ಮೊದಲ ಪ್ರಕರಣ ಇದಾಗಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಅಭಿಮಾನಿಗಳು ಯುವಾ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications