Rameshwaram Cafe: ಬೆಂಗಳೂರಿನ ರಾಮೇಶ್ವರಂ ಕೆಫೆಗೆ ನಟ ಕಾರ್ತಿಕ್ ಆರ್ಯನ್ ಭೇಟಿ: ಊಟ ಸವಿದು ಹೇಳಿದ್ದೇನು?

ಹಿಂದಿ ಸಿನಿಮಾರಂಗದ ಪ್ರಸಿದ್ಧ ನಟ ಕಾರ್ತಿಕ್ ಆರ್ಯನ್ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದು, ರಾಮೇಶ್ವರಂ ಕೆಫೆ ಸೇರಿದಂತೆ ನಗರದ ಪ್ರಮುಖ ಕೆಫೆಗಳಲ್ಲಿ ವಿವಿಧ ತಿಂಡಿ-ತಿನಿಸುಗಳನ್ನು ಸವಿದು ಆನಂದಿಸಿದರು. ಶನಿವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾರ್ತಿಕ್ ಅವರು ತಮ್ಮ ಪ್ರವಾಸದ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಕಾರ್ತಿಕ್ ದೋಸೆ, ಕಾಫಿ ಸೇವಿಸಿದ್ದಾರೆ. ಮೊದಲ ಫೋಟೋದಲ್ಲಿ, ಕಾರ್ತಿಕ್ ರಾಮೇಶ್ವರಂ ಕೆಫೆಯ ಹೊರಗೆ ಪೋಸ್ ನೀಡಿದ್ದಾರೆ. ಸೆಲ್ಫಿಯಲ್ಲಿ ದೋಸೆಯ ತಟ್ಟೆ ಹಿಡಿದು ಮುಗುಳ್ನಕ್ಕರು. ಅವರು ಬಿಳಿ ಟಿ-ಶರ್ಟ್, ಬೂದು ಪ್ಯಾಂಟ್ ಮತ್ತು ಕಪ್ಪು ಸನ್‌ಗ್ಲಾಸ್‌ನಲ್ಲಿ ಕಾಣಿಸಿಕೊಂಡರು. ತನ್ನ ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಒಳಗೆ ಕುಳಿತು ತಿನ್ನುವ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಬೂದು ಬಣ್ಣದ ಟಿ-ಶರ್ಟ್ ಮತ್ತು ಸನ್‌ಗ್ಲಾಸ್ ಧರಿಸಿದ್ದರು.

 Actor Kartik Aaryan Explores Bengalurus Famous Rameshwaram Cafe

ಕಾರ್ತಿಕ್, ಕ್ಲಿಪ್‌ನಲ್ಲಿ ಎರಡು ಫಿಲ್ಟರ್ ಕಾಫಿಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಮುಂದಿನ ಕೆಲವು ಫೋಟೋಗಳಲ್ಲಿ, ಕಾರ್ತಿಕ್ ರಾಮೇಶ್ವರಂ ಕೆಫೆಯ ಹೊರಗೆ ನಿಂತು ಪೋಸ್ ನೀಡಿದ್ದಾರೆ. ಊಟದ ಚಿತ್ರಗಳನ್ನೂ ಕ್ಲಿಕ್ಕಿಸಿ ಕಾಫಿ ಸವಿಯುತ್ತಾ ಖಷಿಪಟ್ಟಿದ್ದಾರೆ.

ಸಾಂಬಾರ್ ನೋಡಿ ಕನ್ಪ್ಯೂಸ್ ಆದ

ಒಂದು ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಯು ರೆಸ್ಟೋರೆಂಟ್‌ನಲ್ಲಿ ಅವರಿಗೆ ಆಹಾರವನ್ನು ನೀಡುತ್ತಿದ್ದಂತೆ, ಕಾರ್ತಿಕ್ ಅವನಿಗೆ, "ಸ್ವಲ್ಪ ಸ್ವಲಪ ಕೊಡಿ, ಹೆಚ್ಚಾಗಿ ಬೇಡ" ಎಂದು ಹೇಳಿದ್ದಾರೆ. ಸಾಂಬಾರ್ ನೀಡಿದಾಗ ಅದನ್ನು ಕಾರ್ತಿಕ್ ಆರ್ಯನ್ ದಾಲ್‌ ಎಂದು ತಪ್ಪಾಗಿ ಅರ್ಥ ಮಾಡಿಕೊಂಡರು. ಬಳಿಕ ಇದು ಸಾಂಬಾರ್ ಎಂದಾಗಿ, ಸಸ್ಯಹಾರಿಯಾ ಎಂದು ಕೇಳಿದ್ದಾರೆ.

ಫುಡ್ ಬ್ಲಾಗರ್ ಆಗ್ತೀನಿ ಎಂದ ಕಾರ್ತಿಕ್

ಪೋಸ್ಟ್ ಅನ್ನು ಹಂಚಿಕೊಂಡ ಕಾರ್ತಿಕ್, "ಬೆಂಗಳೂರಿನಲ್ಲಿರುವ ಈ ರುಚಿಕರವಾದ ಮತ್ತು ಐಕಾನಿಕ್ ತಿನಿಸುಗಳಿಗೆ ಭೇಟಿ ನೀಡಿದ ನಂತರ, ನಾನು ಫುಡ್ ಬ್ಲಾಗರ್ ಆಗಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾರ್ತಿಕ್ ರಾಮೇಶ್ವರಂ ಕೆಫೆ, ನಾಗಾರ್ಜುನ ಫುಡ್ ಮತ್ತು ಚೀಟ್ ಡೇ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಕೂಡ ಸೇರಿಸಿದ್ದಾರೆ. ಅವರು ಈ ಸ್ಥಳವನ್ನು ಬೆಂಗಳೂರು ಎಂದು ಟ್ಯಾಗ್ ಮಾಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದರು.

ಜೂನ್ 14ರಂದು ಸಿನಿಮಾ ತೆರೆಗೆ

ಕಾರ್ತಿಕ್ ಆರ್ಯನ್ ನಟನೆಯ ನಿರ್ದೇಶಕ ಕಬೀರ್ ಖಾನ್ ಅವರ ಚಂದು ಚಾಂಪಿಯನ್‌ ಜೂನ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಚಲನಚಿತ್ರವು ಕ್ರೀಡಾಪಟುವಿನ ಅಸಾಮಾನ್ಯ ನೈಜ-ಜೀವನದ ಕಥೆ ಮತ್ತು ಎಂದಿಗೂ ಸೋಲದ ಆಟಗಾರನ ಮನೋಭಾವವನ್ನು ಆಧರಿಸಿದೆ. ಕಾರ್ತಿಕ್ ಚಂದು ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದಲ್ಲದೆ, ಅವರು ಹಾರರ್ ಕಾಮಿಡಿ ಚಿತ್ರ ಭೂಲ್ ಭುಲೈಯಾ 3 ಸಹ ಶೂಟಿಂಗ್‌ ಗಂತದಲ್ಲಿದೆ. ಇದರಲ್ಲಿ ತೃಪ್ತಿ ಮತ್ತು ವಿದ್ಯಾ ಬಾಲನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭೂಲ್ ಭುಲೈಯಾ ಈ ದೀಪಾವಳಿಗೆ ಬಿಡುಗಡೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+