Actor Darshan Case: ಚಿತ್ರದುರ್ಗದ ಅಭಿಮಾನಿ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ನಟ ದರ್ಶನ್ ವಿಶೇಷ ಸಂದೇಶ
Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಇನ್ನು ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಈ ನಡುವೆಯೇ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ತೆರೆಮರೆಯಲ್ಲಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಇದೀದ ದರ್ಶನ್ ಚಿತ್ರದುರ್ಗದ ಅಭಿಮಾನಿ ಮೂಲಕ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆಂಬ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.

ಈಗಾಗಲೇ ಜೈಲೂಟದಿಂದ ದರ್ಶನ್ ಸೊರಗಿಹೋಗಿದ್ದು, ಮನೆ ಊಟಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಇದನ್ನು ತರಸ್ಕರಿಸಿ ಜೈಲಿನಲ್ಲಿ ಎಲ್ಲರಿಗೂ ನೀಡುವಂತೆ ನಿಮಗೂ ಸಹ ಅದೇ ಊಟವನ್ನು ನೀಡಲಾಗುತ್ತದೆ. ಮನೆ ಊಟಕ್ಕೆ ಅವಕಾಶವಿಲ್ಲವೆಂದು ಕೋರ್ಟ್ ಆದೇಶ ಹೊರಡಿಸಿತ್ತು.
ಇನ್ನು ಇದೀಗ ಸಿದ್ಧರೂಢ ಎಂಬ ಚಿತ್ರದುರ್ಗದ ಅಭಿಮಾನಿಯೊಬ್ಬರು ನಟ ದರ್ಶನ್‌ನನ್ನು ಭೇಟಿ ಆಗಿದ್ದು, ಈ ವೇಳೆ ಅವರ ಮೂಲಕ ದರ್ಶನ್ ರೇಣುಕಾಸ್ವಾಮಿ ಕುಟುಂಬಕ್ಕೆ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಪ್ರಕರಣವೊಂದರಲ್ಲಿ ಚಿತ್ರದುರ್ಗ ಮೂಲಕ ಸಿದ್ಧಾರೂಢ ಎಂಬುವವರು ಜೈಲು ಸೇರಿದ್ದರು. ಬಳ್ಳಾರಿ ಜೈಲು, ಚಿತ್ರದುರ್ಗದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಇದೀಗ ಸನ್ನಡತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗುದ್ದು, ಈ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಸಿದ್ಧಾರೂಢ, ದರ್ಶನ್ ಅವರನ್ನು ಭೇಟಿಯಾಗುವುದದಾಗಿ ಕೇಳಿಕೊಂಡಿದ್ದರಂತೆ.
ಇನ್ನು ನಾನು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ಒಂದು ಬಾರಿಯಾದ್ರೂ ಭೇಟಿ ಮಾಬೇಕು ಎಂದು ಮನವಿ ಮಾಡಿಕೊಂಡಿದ್ದರಂತೆ. ಬಳಿಕ ಅವರ ಒತ್ತಾಯಕ್ಕೆ ಮಣಿದ ಜೈಲಾಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ನೀಡಿದ್ದು, ಒಟ್ಟು 12 ನಿಮಿಷಗಳ ಕಾಲ ದರ್ಶನ್ ಅವರನ್ನು ಭೇಟಿಯಾಗಿ ಸಿದ್ಧಾರೂಢ ಅವರು ಮಾತುಕತೆ ನಡೆಸಿದ್ದಾರೆ ಎಂದು ತಿತಳಿದುಬಂದಿದೆ.
ಇನ್ನು ಭೇಟಿ ಬಳಿಕ ಮಾತನಾಡಿದ ಸಿದ್ಧರೂಢ ಅವರು, ದರ್ಶನ್ ಕಣ್ಣಲ್ಲಿ ಪಶ್ಚಾತ್ತಾಪ ನೋಡಿದೆ. ನಾನು ದರ್ಶನ್ ಅವರ ಅಭಿಮಾನಿ ಅಂತಾ ಇದನ್ನು ಹೇಳುತ್ತಿಲ್ಲ. ನಿಜವಾಗಲೂ ದರ್ಶನ್ ಅವರು ಜೈಲಿನಲ್ಲಿ ಪ್ರತಿಕ್ಷಣವೂ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ದರ್ಶನ್ ಅವರ ಮುಖ, ಕಣ್ಣಲ್ಲಿ ಪಶ್ಚಾತ್ತಾಪವೇ ಕಾಣುತ್ತಿದೆ. ಪ್ರತಿ ಕ್ಷಣವೂ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಕ್ಷಮೆಯಾಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ದರ್ಶನ್ ಅವರು ದೇವರು ಅವಕಾಶ ಕೊಟ್ಟರೆ, ರೇಣುಕಾಸ್ವಾಮಿ ಸ್ವಾಮಿ ಕುಟುಂಬದವರ ಎಲ್ಲರ ಕಾಲಿಗೆ ಬೀಳುತ್ತೇನೆ ಅಂತಾ ಹೇಳಿದ್ದಾರೆ ಎಂದು ಸಿದ್ಧರೂಢ ಹೇಳಿದ್ದಾರೆ.
ಇನ್ನು ನಟ ದರ್ಶನ್ ಜೈಲೂಟದ ಬಗ್ಗೆ ಮಾತನಾಡಿದ ಅವರು, ಜೈಲಿನ ಊಟ ತಿನ್ನಲು ಅಣ್ಣನಿಗೆ ತುಂಬಾ ಕಷ್ಟ. ಅಲ್ಲಿ ನೀಡುವ ಊಟಕ್ಕೆ ಅವರು ಹೊಂದಿಕೊಳ್ಳುವುದು ತುಂಬಾ ಕಷ್ಟ ಅಂತಲೂ ಹೇಳಿದ್ದಾರೆ.












Click it and Unblock the Notifications