Darshan Thoogudeepa: ಇಂದು ನಟ ದರ್ಶನ್ & ಪವಿತ್ರಾ ಗೌಡ ಜಾಮೀನು ಭವಿಷ್ಯ ನಿರ್ಧಾರ
ಬೆಂಗಳೂರು, ಅಕ್ಟೋಬರ್ 05: ಆರೋಪಿ ಸ್ಥಾನದಲ್ಲಿರುವ ಸ್ಯಾಂಡಲ್‌ವುಡ್ ನಟ ನಟ ದರ್ಶನ್ ತುಗೂದೀಪ ಹಾಗೂ ನಟಿ ಪವಿತ್ರಾ ಗೌಡ ಅವರು ಜಾಮೀನಿಗಾಗಿ ಕಾಯುತ್ತಿದ್ದಾರೆ. ನ್ಯಾಯಾಲಯ ಅವರ ಜಾಮೀನನ್ನು ಮುಂದೂಡುತ್ತಲೇ ಬಂದಿದೆ. ನೆನ್ನೆ ಶುಕ್ರವಾರ ವಿಚಾರಣೆ ನಡೆಸಿದ ಕೋರ್ಟ್ ಇಂದು ಶನಿವಾರಕ್ಕೆ (ಅಕ್ಟೋಬರ್ 5ಕ್ಕೆ) ಮುಂದೂಡಿಕೆ ಮಾಡಿದೆ. ಹೀಗಾಗಿ ಇಂದು ಇವರಿಬ್ಬರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ನಂತರ ನಟ ದರ್ಶನ್ ಹಾಗೂ ಪವಿತ್ರಾಗೌಡ ಇವತ್ತೆ ಜಾಮೀನು ಸಿಕ್ಕಿ ಬಿಡುತ್ತದೆ ಎಂಬ ಆಸೆಯಲ್ಲಿದ್ದರು. ಆದರೆ ಅವರ ಆಸೆ ಕೈಗೂಡಲಿಲ್ಲ. ಇಂದು ನ್ಯಾಯಾಲಯ ಒಪ್ಪಿದರೆ, ಜಾಮೀನು ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ನಟ ದರ್ಶನ್ ಪತ ವಕೀಲರು ಜಾಮೀನು ಅರ್ಜಿ ಸಲ್ಲಿಸುತ್ತಿದ್ದಂತೆ ಪ್ರಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಕೆಗೆ ಗಡುವು ಕೇಳಿದ್ದರು. ಸದ್ಯ ನಟ ದರ್ಶನ್ ಪ್ರಭಾವಿ, ಹಣ ಬಲ, ಪೇಸ್ ವ್ಯಾಲ್ಯೂ ಇರುವ ವ್ಯಕ್ತಿ, ನಟನಿಗೆ ಅಭಿಮಾನಿಗಳ ಬೆಂಬಲ ಇದೆ. ಸಾಕ್ಷಿ ನಾಶ ಮಾಡಬಹುದು ಎಂಬ ಕಾರಣಕ್ಕೆ ಎಸ್‌ಪಿಪಿ ಅವರು ಜಾಮೀನು ನೀಡದಂತೆ ಮನವಿ ಮಾಡುತ್ತಲೇ ಬಂದಿದ್ದಾರೆ.
ಇನ್ನೂ ದರ್ಶನ್ ಪರ ವಕೀಲರು ನಟ ದರ್ಶನ್ ಅನ್ನು ಮಾಧ್ಯಮಗಳಲ್ಲಿ ಪ್ರಕರಣದ ಟ್ರಯಲ್ ನಡೆದಿದೆ. ನನ್ನ ಕಕ್ಷಿದಾರ ದರ್ಶನ್ ಅವರನ್ನು ದೋಷಿ ಎಂದು ಮಾಡಲಾಗಿದೆ. ಮರಣ ದಂಡನೆ ಇಲ್ಲವೇ ಇತರ ಶಿಕ್ಷೆಯನ್ನು ಅವರೇ ಕೊಟ್ಟುಬಿಡುತ್ತಾರೇನೊ ಎಂದು ಹೇಳಿದ್ದಾರೆ. ಸದ್ಯ ಜಾಮೀನು ಅರ್ಜೀ ವಿಚಾರಣೆ ಇಂದಿಗೆ ಮುಂದೂಡಿಕೆ ಆಗಿದೆ.
ನಟ ದರ್ಶನ್ ಜಾಮೀನು ಬಗ್ಗೆ ರಾಜ್ಯದ ಅಪಾರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ದರ್ಶನ್ ಪ್ರಕರಣದಲ್ಲಿ ಪರ ವಿರೋಧ ಚರ್ಚೆ ಆಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧಿಯಾಗುತ್ತಿದ್ದಂತೆ ನಟ ದರ್ಶನ್ ನಟಿಸುತ್ತಿದ್ದ ಡೇವಿಲ್ ಸಿನಿಮಾ ಅರ್ಧಕ್ಕೆ ನಿಂತಿದೆ. ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಬಳ್ಳಾರಿಯಿಂದ ನಟ ದರ್ಶನ್ ಬೆಂಗಳೂರಿಗೆ?
ಬಳ್ಳಾರಿಯಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಅನ್ನು ಮತ್ತೆ ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ದರ್ಶನ್‌ಗೆ ಕೆಲವು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈ ಕಾರಣದಿಂದ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳ್ಳಾರಿ ಜೈಲಿನಲ್ಲಿ ಆರೋಪಿ ನಟ ದರ್ಶನ್ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆ ತರಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.












Click it and Unblock the Notifications