Darshan Fans: ಅಂಧಾಭಿಮಾನಿಗಳ ಹುಚ್ಚಾಟಕ್ಕೆ ಕ್ಯಾರೆ ಎನ್ನದೆ ದರ್ಶನ್‌ನನ್ನು ಕೈಹಿಡಿದು ಕೊರ್ಟ್‌ನೊಳಗೆ ಎಳೆದೊಯ್ದ ಪೊಲೀಸರು
Darshan Fans: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಟ ದರ್ಶನ್ & ಗ್ಯಾಗ್‌ನ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಇಂದು (ಜೂನ್ 22) ವಿಚಾರಣೆಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ಈ ವೇಳೆ ಪ್ರಕರಣದ ಎ2 ಆರೋಪಿ ದರ್ಶನ್, ವಿನಯ್, ಪ್ರದೂಷ್ ಮತ್ತು ಧನರಾಜ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಕೋರ್ಟ್‌ಗೆ ಕರೆತರುವ ಮುನ್ನ ಅಂಧಾಭಿಮಾನಿಗಳ ಹುಚ್ಚಾಟ ಮುಂದುವರೆದಿತ್ತು. ಇನ್ನು ಈ ವೇಳೆ ಪೊಲೀಸರ ಗಾಂಭೀರ್ಯ ಹೇಗಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇನ್ನು ಈ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದ ದರ್ಶನ್ ಸೇರಿ ವಿನಯ್, ಪ್ರದೋಶ್, ಧನರಾಜ್‌ನನ್ನು ಅನ್ನಪೂರ್ಣೇಶ್ವರಿ ಠಾಣೆಯಿಂದ ಕೋರ್ಟ್‌ನತ್ತ ಪೊಲೀಸರು ಕರೆದೊಯ್ದಿದ್ದು, ಈ ವೇಳೆ ಅಂಧಾಭಿಮಾನಿಗಳು ಹುಚ್ಚಾಟ ಮೆರೆದ ಘಟನೆ ನಡೆದಿದ್ದು, ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನು ಕೋರ್ಟ್‌ನತ್ತ ಬರುತ್ತಿದ್ದಂತೆ ಅಂಧಾಭಿಮಾನಿಗಳು ನೆರೆದಿದ್ದು, ಇದರ ನಡುವೆಯೇ ಪೊಲೀಸರು ಕ್ಯಾರೆ ಕೋರ್ಟ್‌ನೊಳಗೆ ದರ್ಶನ್‌ನನ್ನು ಕೈ ಹಿಡಿದು ಎಳೆದೊಯ್ದಿದ್ದಾರೆ.
ಅಲ್ಲದೆ ಕೋರ್ಟ್ ಮುಂದೆ ಹುಚ್ಚಾಟ ಮೆರೆಯುತ್ತಿದ್ದ ಅಂಧಾಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಮತ್ತೊಂದೆಡೆ ಇದೀಗ ದರ್ಶನ್ & ಗ್ಯಾಂಗ್ ಅನ್ನು ಪರಪ್ಪನ ಅಗ್ರಹಾರದತ್ತ ಪೊಲೀಸರು ಕರೆದೊಯ್ಯುತ್ತಿದ್ದಾರೆ. ಈ ಹಿನ್ನೆಲೆ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೊಬೈಲ್ ವೀಕ್ಷಣೆಗೆ ಅನುಮತಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮತ್ತೊಂದೆಡೆ . ಇಂದು (ಜೂನ್ 20) ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು, ಅವರನ್ನು ಕೋರ್ಟ್‌ಗೆ ಕರೆದೊಯ್ಯಲಾಗಿತ್ತು. ಇನ್ನು ಈ ನಾಲ್ವರು ಆರೋಪಿಗಳಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಮತ್ತೊಂದೆಡೆ ಇವರೆಲ್ಲರ ಮೊಬೈಲ್ ವೀಕ್ಷಣೆಗೆ ಅನುಮತಿ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ಚಿತ್ರದುರ್ಗ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ನಟ ದರ್ಶನ್ ಮತ್ತು ಗ್ಯಾಂಗ್ ಅವರನ್ನು ಭೀಕರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇತ್ತು. ಈಗಾಗಲೇ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಇಂದು (ಜೂನ್ 22) ಕೋರ್ಟ್ ಆದೇಶದ ಮೇರೆಗೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ.
ಪೊಲೀಸರು ಕೋರ್ಟ್‌ಗೆ ಆರೋಪಿಗಳ ಮೊಬೈಲ್‌ಗಳ ಪರಿಶೀಲನೆಗೆ ಅನುಮತಿ ನೀಡುವಂತೆ ಕೇಳಿತ್ತು. ಅದರಂತೆಯೇ ಬೆಂಗಳೂರಿನ 5ನೇ ACMM ಕೋರ್ಟ್ ನಟ ದರ್ಶನ್, ವಿನಯ್, ಪ್ರಧೋಶ್ ಮತ್ತು ಧನರಾಜ್ ನಾಲ್ವರ ಮೊಬೈಲ್ ಅನ್‌ಸೀಲ್ ಮಾಡಲು ಒಪ್ಪಿಗೆ ಕೊಟ್ಟಿದೆ. ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಸಾಕ್ಷಿ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ನಟ ದರ್ಶನ್ ಸೇರಿದಂತೆ ಈ ಆರೋಪಿಗಳು ಯಾರ್‍ಯಾರಿಗೆ ಕರೆ ಮಾಡಿದ್ದರು ಹಾಗೂ ಸಚಿವರು, ಶಾಸಕರು, ಪೊಲೀಸ್ ಅಧಿಕಾರಿಗಳಿಗೂ ಕರೆ ಮಾಡಿದ್ದಾರೆ ಎನ್ನುವ ಶಂಕೆಯಿದ್ದು, ಮೊಬೈಲ್ ಪರೀಶೀಲನೆ ಬಳಿಕ ಈ ಎಲ್ಲದರ ಬಗ್ಗೆ ಸತ್ಯ ಹೊರಬೀಳುವ ಸಾಧ್ಯತೆಯಿದೆ. ಅಲ್ಲದೆ, ಪೊಲೀಸರು ಆರೋಪಿಗಳ ಮೊಬೈಲ್ ಪರಿಶೀಲನೆಗೆ ಕೋರ್ಟ್‌ನಿಂದ ಒಪ್ಪಿಗೆ ಪಡೆದ ಹಿನ್ನೆಲೆ ಪ್ರಕರಣದಲ್ಲಿ ಮೂಗು ತೂರಿಸಿದವರಿಗೆ ಈಗಾಗಲೇ ನಡುಕ ಶುರುವಾಗಿದೆ ಅಂತಲೂ ಹೇಳಬಹುದು.












Click it and Unblock the Notifications