ಸಿಕ್ಕಾಪಟ್ಟೆ ಟೆನ್ಷನ್: ಪೊಲೀಸರ ಬಳಿ ಸಿಗರೇಟ್ ಕೇಳಿದ ನಟ ದರ್ಶನ್
ಬೆಂಗಳೂರು, ಜೂನ್ 12: ಕೊಲೆ ಆರೋಪದ ಮೇಲೆ ನಟ ದರ್ಶನ್ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇಂದು ಆರೋಪಿಗಳ ಜೊತೆ ಸ್ಥಳ ಮಹಜರು ನಡೆಯಲಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿದ್ದು, ಕೇಸ್‌ನ ಎ-1 ಆರೋಪಿ ಪವಿತ್ರ ಗೌಡ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಸದ್ಯ ಪೊಲೀಸರ ಬಂಧನದಲ್ಲಿರುವ ದರ್ಶನ್ ಟೆನ್ಷನ್ ತಾಳಲಾರದೇ ಸಿಗರೇಟ್ ಕೊಡುವಂತೆ ಪೊಲೀಸರನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

ಪೊಲೀಸ್ ಠಾಣೆಯಲ್ಲಿ ಸಖತ್ ಟೆನ್ಷನ್‌ನಲ್ಲಿರುವ ದರ್ಶನ್ ಒಂದು ಸಿಗರೇಟು ನೀಡುವಂತೆ ಕೇಳಿದ್ದು, ಇಲ್ಲಿ ಸಿಗರೇಟ್ ನೀಡಲು ಸಾಧ್ಯವಿಲ್ಲ ಎಂದು ದರ್ಶನ್ಗೆ ಪೊಲೀಸರು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಠಾಣೆಯಲ್ಲಿ ನಿನ್ನೆಯಿಂದಲೂ ಊಟ ಮಾಡದ ದರ್ಶನ್ ಕೇವಲ ಜ್ಯೂಸ್ ಮತ್ತು ಮಜ್ಜಿಗೆ ಮಾತ್ರ ಕುಡಿಯುತ್ತಿದ್ದಾರೆ. ನಿನ್ನೆ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ ಇಡ್ಲಿ ತಿಂದಿದ್ದ ದರ್ಶನ್, ಮಧ್ಯಾಹ್ನನೂ ಏನು ಊಟ ಮಾಡಿರಲಿಲ್ಲ. ಸಂಜೆ ಕೂಡ ಊಟ ಬೇಡವೆಂದು ಮಜ್ಜಿಗೆ ಕುಡಿದು ಮಲಗಿದ್ದರು. ಇಂದು ಕೂಡ ತಿಂಡಿಗೆ ನಿರಾಕರಿಸಿರುವ ದರ್ಶನ್ ಟೆನ್ಷನ್ನಲ್ಲಿ ಸಿಗರೇಟ್ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ
ಇನ್ನು ನಿನ್ನೆ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದ ಪೊಲೀಸರು ಆರೋಪಿಗಳಿಗೆ ಹೊರಗಡೆಯಿಂದ ಊಟ ತರಿಸಿ ಕೊಟ್ಟಿದ್ದಾರೆ. ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ತರಿಸಿದ ಪೊಲೀಸರು 12 ಆರೋಪಿಗಳಿಗೆ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಿದ್ದರು. ಹೊಟೇಲ್ ಸಿಬ್ಬಂದಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಊಟ ತಂದುಕೊಟ್ಟಿದ್ದರು. ಇಂದು ಕೂಡ ಹೊರಗಡೆಯಿಂದ ಆರೋಪಿಗೆ ತಿಂಡಿ ತರಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications