Actor Darshan: ನಟ ದರ್ಶನ್‌ ಎರಡು ಫುಲ್‌ ಬಾಟಲ್‌ ಹೊಡೆದ್ರೆ ಮನುಷ್ಯನೇ ಅಲ್ವಂತೆ

Actor Darshan Case: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ನಟ ದರ್ಶನ್‌ ಎ1 ಆರೋಪಿಯಾದರೆ, ಪವಿತ್ರಾಗೌಡ ಎ2 ಆರೋಪಿಯಾಗಿದ್ದಾರೆ. ಇನ್ನು ಈ ಬಗ್ಗೆ ಹಲವು ಗಣ್ಯರು ಈಗಾಗಲೇ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಾಗೆಯೇ ಇದೀಗ ವ್ಯಕ್ತಿಯೊಬ್ಬರು ದರ್ಶನ್‌ ಮತ್ತು ಗ್ಯಾಂಗ್‌, ಪವಿತ್ರಾಗೌಡಗೆ ಏಕವಚನದಲ್ಲೇ ಬಯ್ಯುವ ಮೂಲಕ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿರುವ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

"ನಟ ದರ್ಶನ್‌ಗೆ 100 ಜನ ಲವರ್ಸ್‌ ಇದ್ದಾರೆ, ಹಾಗಾದರೆ ಅವರೆಲ್ಲರೂ ಹೇಳಿದರೆ ಸಂದೇಶ ಕಳುಹಿಸಿದವರನ್ನೆನ್ನ ಕೊಂದುಬಿಡ್ತಾನಾ? ತಾಕತ್ತಿದ್ಯಾ? ಈಗಾಗಲೇ ಅವರ ಹೆಂಡ್ತಿಗೆ ಸಿರಗೇಟ್‌ನಲ್ಲಿ ಸುಟ್ಟಿದ್ದು, ಆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ. ಇನ್ನೂ ಎಷ್ಟೆಷ್ಟೋ ಕೇಸ್‌ಗಳಿವೆ. ಅವರು ಎಣ್ಣೇ ಹೊಡೆದ್ರೆ ಮನುಷ್ಯನೇ ಆಗಿರಲ್ವಂತೆ. 2 ಫುಲ್‌ ಬಾಟಲ್‌ ಕುಡಿದಮೇಲೆ ಸಿಕ್ಕಿದವರಿಗೆಲ್ಲ ಹೊಡೆಯೋದು. ಇದನ್ನೇ ನಿತ್ಯ ಬಂಡವಾಳ ಮಾಡಿಕೊಂಡಿದ್ದನಂತೆ ಅವನುಮ," ಎಂದು ಆಕ್ರೋಶ ಹೊರಹಾಕಿದ್ದಾರೆ.

Actor Darshan is demon A Man video viral

"ಸಲಾಕೆ, ಕಬ್ಬಿಣದಿಂದ ಹೊಡೆಯೋದು, ಸಿಕ್ಕಿ ಕಡೆಯಲ್ಲ ಸಿಗರೇಟ್‌ನಲ್ಲಿ ಸುಡೋದು. ಏನ್ರಿ ಅಂತಾ ಕರ್ಮ ಮಾಡಿರೋದು?. ಮೀಡಿಯಾದವರಿಂದ ದಶರ್ನ್‌ ಮಾಡಿರುವ ಇಂತಹ ಗನಾಂಧಾರಿ ಕೆಲಸಗಳು ಒಂದೊಂದೇ ಹೊರಬರುತ್ತಿವೆ. ಇಲ್ಲ ಅಂದ್ರೆ ಹೊಡೆದಾಕಿ ಅವರ ಫಾರ್ಮ್‌ ಹೌಸ್‌ನಲ್ಲೇ ಮಣ್ಣುಮುಚ್ಚುವ ಕೆಲಸವನ್ನು ಮಾಡಿಸ್ತಿದ್ದ," ಅಂತಲೂ ಗಂಭೀರ ಆರೋಪ ಮಾಡಿದ್ದಾರೆ.

"ಮೈಸೂರಿನಲ್ಲೂ ಕೂಡ ರೋಡ್‌ ಸೈಡಲ್ಲಿ, ಹಸು, ಕರಿ, ನಾಯಿಯನ್ನು ಬಿಡೋದಿಲ್ಲ ಈತ. ಎಲ್ಲದಕ್ಕೂ ಗುದ್ದಿ ಅಪಘಾತ ಮಾಡೋದೆ ಆಗಿಬಿಟ್ಟಿತ್ತು. ಹೀಗೆ ತುಂಬಾ ನೀಚ ಕೃತ್ಯಗಳನ್ನು ಮಾಡಿದ್ದಾನೆ. ಸರಿಯಾಗಿ ತನಿಖೆ ಮಾಡಿದ್ರೆ ಎಲ್ಲವೂ ಬಯಲಿಗೆ ಬರಲಿವೆ. ಅವನಿಗೆ ಕೊಬ್ಬು, ಗಾಂಚಲಿ ಜಾಸ್ತಿ. ಯಾಕೆ ಅಂದ್ರೆ ಸಾವಿರಾರು ಕೋಟಿಗಿದ್ದೇನೆ ಎನ್ನುವ ಮದ ಅವನಿಗೆ," ಎಂದು ಗುಡುಗಿದ್ದಾರೆ.

"ದರ್ಶನ್‌ ಅವರ ತಂದೆ ಸಿನಿಮಾಗಳಲ್ಲಿ ಖಳನಾಯಕನಾಗಿ ನಟನೆ ಮಾಡಿದರೂ, ನಿಜ ಜೀವನದಲ್ಲಿ ತುಂಬಾ ಒಳ್ಳೆಯವರಾಗಿದ್ದರು. ಆ ಕಾಲದಲ್ಲಿ ಅವರೆಲ್ಲ ಇಷ್ಟೊಂದು ಹಣ ನೋಡಿರಲಿಲ್ಲ, ಆದರೂ ತುಂಬಾ ಸರಳತೆ, ಒಳ್ಳೆಯವರಾಗಿ ಜೀವನ," ಮಾಡುತ್ತಿದ್ದವರಾಗಿದ್ದರು ಎಂದಿದ್ದಾರೆ.

"ಆದರೆ ದರ್ಶನ್‌ ಅವರ ತಂದೆಯ ರೀತಿಯಲ್ಲ, ಒಂದು ಸಿನಿಮಾ ಮಾಡಿದರೆ, 20-30 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಅವನಿಗೆ ಮದ ತುಂಬಾ ಜಾಸ್ತಿಯಾಗಿದೆ. ಎಷ್ಟೇ ಕೋಟಿಗಿರಲಿ, ಸಿನಿಮಾ ನಟರಾಗಲಿ, ರಾಜಕಾರಣಿಗಳಾಗಲಿ ದುರಹಂಕಾರದ ಕೆಲಸಗಳನ್ನು ಬಿಡಬೇಕು. ಯಾರು ದುರಹಂಕಾರ ಬಿಟ್ಟು ಸಾಗುತ್ತಾರೋ ಅವರು ಎತ್ತರಕ್ಕೆ ಬೆಳೆಯುತ್ತಾರೆ," ಎಂದು ಇಲ್ಲೊಬ್ಬ ವ್ಯಕ್ತಿ ಹೇಳಿರುವ ವಿಡಿಯೋ ಅದ್ವ ಟಿವಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

"ಇಡೀ ದೇಶವನ್ನು ಸೈನಿಕರು ಕಾದರೆ, ರಾಜ್ಯದಲ್ಲಿ ಕಾನೂನು ಕಾಪಾಡಲು ಪೊಲೀಸರು, ವಕೀಲರು ಇದ್ದಾರೆ. ಅವರ ಮೂಲಕ ಹೇಳಿಸಿ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಕೊಲೆ ಮಾಡುವ ಮಟ್ಟಕ್ಕೆ ಇಳಿದು ಕಾನೂನು ಕೈಗೆ ತೆಗೆದುಕೊಂಡಿರುವುದು ಸರಿಯಲ್ಲ. ಇವನಿಗೆ ಕೊಲೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು?," ಅಂತಾನೂ ಪ್ರಶ್ನೆ ಮಾಡಿದ್ದಾರೆ.

ಇನ್ನು "ಪವಿತ್ರಾಗೌಡ ರಾಕ್ಷಸ ಹೆಣ್ಣುಮಗಳು, ಅವಳಿಗೆ ಈ ವಿಚಾರ ಬೇಕಾಗಿರಲಿಲ್ಲ. ದರ್ಶನ್‌ಗೆ ಏನು ಇವಳು ಸ್ವಂತ ಹೆಂಡತಿಯಲ್ಲ. ಅವಳು ಹೇಳಿದ ತಕ್ಷಣ ಕೊಲೆ ಮಾಡಿಬಿಡೋದಾ?. ಹೊರಗಡೆ ಬರಲು ಈಗ ಒದ್ದಾಡುತ್ತಿದ್ದಾನೆ. ಮೊದಲಿಗೆ ಸಮಾಧಾನದಿಂದ ಕುಳಿತು ಯೋಚನೆ ಮಾಡಿ ಜಿಲ್ಲಾ ಪೊಲೀಸರು, ಡಿಸಿಪಿ, ಎಸಿಪಿ ಅಥವಾ ಮಿನಿಷ್ಟರ್‌ ಮೂಲಕವೋ ರೇಣುಕಾಸ್ವಾಮಿಗೆ ಎಚ್ಚರಿಕೆ ನೀಡಬಹುದಿತ್ತು. ಆದರೆ ದುಡುಕಿ ಕೊಲೆ ಮಾಡುವ ಮಟ್ಟಕ್ಕೆ ಹೋಗಿರುವುದು ಸರಿಯಲ್ಲ," ಎಂದು ಹೇಳಿದ್ದಾರೆ.

"ಅಷ್ಟೇ ಅಲ್ಲದೆ ಇದೀಗ ಕೋಟಿ, ಕೋಟಿ ಕೊಡ್ತೀನಿ ಅಂತಾ ಮಿನಿಸ್ಟರ್‌, ಪೊಲೀಸ್‌ರ ಮುಖಾಂರತವೇ ಪ್ರಕರಣವನ್ನು ಮುಚ್ಚಿಹಾಕುವಂತೆ ಹೇಳಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಆದರೆ ಪೊಲೀಸರು ಯಾವ ಒತ್ತಡಗಳಿಗೂ ಕ್ಯಾರೆ ಅನ್ನದೆ, ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಉಪ್ಪು ತಿಂದಮೇಲೆ ನೀರು ಕುಡಿಯಲೇಬೇಕು," ಎನ್ನುವ ಮಾತನ್ನು ಹೇಳಿದ್ದಾರೆ.

"ಅಂಬರೀಶ್‌, ರಾಜ್‌ಕುಮಾರ್‌, ವಿಷ್ಣುವರ್ದನ್‌ ಅವರಿಗೂ ಸ್ವಲ್ಪನೂ ಅಹಂ ಇರಲಿಲ್ಲ. ಇನ್ನು ಇದೀಗ ರಮೇಶ್‌ ಅರವಿಂದ್‌, ಜಗ್ಗೇಶ್‌ ಅಂತಹ ಹಿರಿಯ ನಟರಿದ್ದಾರೆ. ಇವರು ಎಷ್ಟೇ ಎತ್ತರಕ್ಕೇ ಬೆಳೆದರೂ ಕೂಡ ಸ್ವಲ್ಪನೂ ಅಹಂ ಇಲ್ಲ. ಇವರನ್ನು ನೋಡಿ ಕಲಿಬೇಕಾಗಿದ್ದು ತುಂಬಾ ಇದೆ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+