ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆಸಿಡ್ ಅಟ್ಯಾಕ್..ಸೈಕೋ ಲವರ್‌ನಿಂದ ಕೃತ್ಯ..!

|
Google Oneindia Kannada News

ಬೆಂಗಳೂರು , ಏಪ್ರಿಲ್ 28: ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಆ್ಯಸಿಡ್ ದಾಳಿಯನ್ನು ನಡೆಸಿದ್ದಾನೆ. ಈ ದಾಳಿಯನ್ನು ನಡೆರುವ ವ್ಯಕ್ತಿ ತಕ್ಷಣವೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಸುಂಕದಕಟ್ಟೆಯ ಮುತ್ತೂಟ್ ಫಿನ್‌ಕಾರ್ಪ್ ಬಳಿ ಮೆಟ್ಟಿಲ ಮೇಲೆೆ ಯುವತಿಗೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ. ದಾಳಿಗೆ ಒಳಗಾದ ಯುವತಿ ಸುಮಾರು 24 ವರ್ಷದವಳಾಗಿದ್ದು ನಾಗೇಶ್ ಎಂಬಾತನಿಂತ ಕೃತ್ಯ ಎಸಗಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ನಾಗೇಶ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಯುವತಿಯಿಂದ ಪ್ರೀತಿ ನಿರಾಕರಣೆ: ಭಗ್ನ ಪ್ರೇಮಿಯಿಂದ ಆಸಿಡ್ ಅಟ್ಯಾಕ್

ಮುತ್ತೂಟ್ ಫಿನ್ ಕಾರ್ಪ್ ನಲ್ಲಿ ಕೆಲಸಕ್ಕೆಂದು ಯುವತಿ ಹೋಗುತ್ತಿದ್ದಳು. ಈ ವೇಳೆ ಏಕಾಏಕಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಯುವತಿ ಮೆಟ್ಟಿಲು ಹತ್ತುವ ವೇಳೆಗೆ ಬಂದ ನಾಗೇಶ್ ತಕ್ಷಣವೇ ತನ್ನ ಕೈಯಲ್ಲಿದ್ದ ಬಾಟಲ್ ನಿಂದ ಯುವತಿಗೆ ಆಸಿಡ್ ಎರಚಿದ್ದಾನೆ. ಯುವತಿ ಚೀರಿಕೊಂಡಾಗ ಅಲ್ಲಿದ್ದ ಸಹೋದ್ಯೋಗಿಗಳು ಓಡಿ ಬಂದಿದ್ದಾರೆೆ. ತಕ್ಷಣವೇ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಿದ್ದಾರೆ.

Acid attack on young woman in Bengaluru; Kamakshipalya Police Searching Psycho Lover

ಪ್ರೀತ್ಸೆ ಪ್ರೀತ್ಸೆ ಎಂದು ಪೀಡಿಸುತ್ತಿದ್ದ ಸೈಕೋ ಪ್ರೇಮಿ..

ಯುವತಿ ವಾಸವಾಗಿದ್ದ ಮನೆಯ ಎದುರೇ ನಾಗೇಶ್ ವಾಸವಾಗಿದ್ದ. ಈ ವೇಳೆಯೇ ಯುವತಿಗೆ ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದ. ಆದರೆ ಯುವತಿ ಮಾತ್ರ ನಾಗೇಶ್ ನ ಕೋರಿಕೆಯನ್ನು ನಿರಾಕರಿಸಿದ್ದಳು. ಆದರೂ ಕಾಲೇಜಿಗೆ ಹೋಗುತ್ತಿದ್ದಾಗಲೆಲ್ಲಾ ನಾಗೇಶ್ ಹಿಂಬಾಲಿಸಿಕೊಂಡು ಹೋಗುತ್ತಿದ್ದ. ಯುವತಿ ಈ ಬಗ್ಗೆ ಮನೆಯವರ ಗಮನಕ್ಕೂ ತಂದಿದ್ದರು. ಯುವತಿಯ ಕುಟುಂಬಸ್ಥರು ಸಹ ನಾಗೇಶ್ ಮನೆಯವರಿಗೆ ಹೇಳಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

Acid attack on young woman in Bengaluru; Kamakshipalya Police Searching Psycho Lover

ಯುವತಿಯ ಬೆನ್ನು, ಎದೆ, ತಲೆಗೆ ಬಿದ್ದಿರುವ ಆಸಿಡ್

ಯುವತಿ ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯುವತಿಯ ಬೆನ್ನು, ಎದೆ ಮತ್ತು ತಲೆಗೆ ಭಾಗ ಸುಟ್ಟಿದೆ ಎಂಬ ಮಾಹಿತಿಯನ್ನು ಪೊಲೀಸರಿಗೆ ವೈದ್ಯರು ತಿಳಿಸಿದ್ದಾರೆ. ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ.

ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚನೆ

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಪಾಟೀಲ್ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಈಗಾಗಲೇ ನಾಗೇಶ್ ವಿರುದ್ದ ಜಾಮೀನು ರಹಿತ ಪ್ರಕರಣ, ಐಪಿಸಿ ಸೆಕ್ಷನ್ 326A ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ಸ್ಥಳೀಯರು ಸಹ ಆರೋಪಿ ನಾಗೇಶ್ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

Acid attack on young woman in Bengaluru; Kamakshipalya Police Searching Psycho Lover

ಆಸಿಡ್ ದಾಳಿಗೆ ಒಳಗಾದವರಿಗೆ ಸಿಗಲಿದೆ ಪರಿಹಾರ :

ಆಸಿಡ್ ದಾಳಿಗೆ ಒಳಗಾದವರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಸಿಗಲಿದೆ. ಪೊಲೀಸರು ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿಯನ್ನು ಕೊಟ್ಟ ಬಳಿಕ ಮೊದಲ ಭಾಗವಾಗಿ ಎರಡೂವರೆ ಲಕ್ಷ ಆನಂತರ ಕೆಲ ದಿನಗಳ ನಂತರ ಮತ್ತೆ ಎರಡೂವರೆ ಲಕ್ಷ ಪರಿಹಾರ ಸಿಗಲಿದ್ದು ಒಟ್ಟಾರೆ 5 ಲಕ್ಷ ಪರಿಹಾರ ಸಂತ್ರಸ್ಥರಿಗೆ ಸಿಗಲಿದೆ.

Acid attack on young woman in Bengaluru; Kamakshipalya Police Searching Psycho Lover

ಶೃಂಗೇರಿ ನ್ಯಾಯಾಲಯದಲ್ಲಿ ಆಸಿಡ್ ದಾಳಿ ಆರೋಪಿಗೆ ಜೀವವಧಿ ಶಿಕ್ಷೆ ಪ್ರಕಟ

ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದಿದ್ದ ಆಸಿಡ್ ದಾಳಿ ಕುರಿತು ಅಂದಿನ ತನಿಖಾಧಿಕಾರಿಯಾಗಿದ್ದ ಸುಧೀರ್ ಹೆಗಡೆ ದೋಷಾರೋಪಟ್ಟಿಯನ್ನು ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಹಳೆಯ ಆಸಿಡ್ ದಾಳಿ ಪ್ರಕರಣದ ತೀರ್ಪನ್ನು ನೀಡಿತ್ತು. ಆಸಿಡ್ ದಾಳಿ ನಡೆಸಿದ ಆರೋಪಿ ದಿಲೀಪ್ ಎಂಬಾತನಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ 27 ಲಕ್ಷ ದಂಡವನ್ನು ವಿಧಿಸಿದ್ದನ್ನು ಸ್ಮರಿಸಬಹುದು.

English summary
Acid attack on young woman by psycho lover Nagesh in Bengaluru; Kamakshipalya Police Searching for Accused. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X