Get Updates
Get notified of breaking news, exclusive insights, and must-see stories!

ಬೆಂಗಳೂರು ಆಸಿಡ್ ದಾಳಿ ಪ್ರಕರಣ: ಪೊಲೀಸರಿಂದ ತಮಿಳುನಾಡಿನಲ್ಲಿ ಮಹಜರ್

ಬೆಂಗಳೂರು, ಜೂನ್ 5: ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ನಡೆದ ಆಸಿಡ್ ದಾಳಿಯ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆಸಿಡ್ ದಾಳಿ ಮಾಡಿದ ಆರೋಪಿಯನ್ನು ಬಂಧಿಸಿದ್ದ ಕಾಮಾಕ್ಷಿ ಪಾಳ್ಯ ಪೊಲೀಸರು ಆತ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗೇಶ್ ಕೂಡ ಚೇತರಿಸಿಕೊಂಡಿದ್ದು ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಕೆಲವು ಸಾಕ್ಷಿಗಳನ್ನು ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ತಮಿಳುನಾಡಿಗೆ ಕಾಮಾಕ್ಷಿಪಾಳ್ಯ ಪೊಲೀಸರು ತೆರಳಿದ್ದಾರೆ. ನಾಗೇಶ್ ಆಸಿಡ್ ದಾಳಿ ವೇಳೆ ಬಳಸಿದ್ದ ಬಟ್ಟೆ ಮತ್ತು ಇನ್ನಿತರ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ನಾಗೇಶ್ ತಾನೂ ತಪ್ಪು ಮಾಡಿದೆ ಎಂದು ಪಶ್ಚಾತಾಪದ ವರಸೆ ಶುರುವಿಟ್ಟುಕೊಂಡಿದ್ದಾನೆ.

ಕಾಮಾಕ್ಷಿಪಾಳ್ಯ ಪೊಲೀಸರು ನಾಗೇಶ್‌ನನ್ನು ತಮಿಳುನಾಡಿನ ತಿರುವಣ್ಣಾಮಲೈಗೆ ಕರೆದುಕೊಂಡು ಹೋಗಿ ಮಹಜರು ಕಾರ್ಯವನ್ನು ಮಾಡುತ್ತಿದ್ದಾರೆ. ಆಸಿಡ್ ದಾಳಿಯ ವೇಳೆ ಧರಿಸಿದ್ದ ಬಟ್ಟೆಯನ್ನು ನಾಗೇಶ್ ನಿರ್ಜನ ಪ್ರದೇಶದಲ್ಲಿ ಹೂತಿಟ್ಟಿದ್ದ. ನಾಗೇಶ್ ಧರಿಸಿದ್ದ ಬಟ್ಟೆ ಮತ್ತು ಇನ್ನಿತರ ಪರಿಕರನ್ನು ಪೊಲೀಸರು ಹೊರತಗೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆಸಿಡ್ ದಾಳಿಯನ್ನು ನಡೆಸಿದ ನಾಗೇಶ್ ಯಾವುದೇ ಕಾರಣಕ್ಕೂ ಕಾನೂನು ಸಂಕೋಲೆಯಿಂದ ತಪ್ಪಿಸಿಕೊಳ್ಳಬಾರದು ಎಂಬ ದೃಷ್ಟಿಯಿಂದ ಪೊಲೀಸರು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಎಲ್ಲಾ ಸಾಕ್ಷ್ಯಾಧಾರವನ್ನು ಸಂಗ್ರಹಿದ ಮೇಲೆ ನ್ಯಾಯಾಲಯಕ್ಕೆ ಶೀಘ್ರದಲ್ಲೇ ಚಾರ್ಜ್ ಶೀಟ್‌ ಅನ್ನು ಸಲ್ಲಿಸಲಿದ್ದಾರೆ.

ಎದೆಗೆ ಗುಂಡು ಹಾರಿಸಿಬೇಕಿತ್ತು ಸಾರ್ ಎಂದು ಕಣ್ಣೀರು.!

ಎದೆಗೆ ಗುಂಡು ಹಾರಿಸಿಬೇಕಿತ್ತು ಸಾರ್ ಎಂದು ಕಣ್ಣೀರು.!

ಪರಮ ಪಾಪಿ ಆಸಿಡ್ ನಾಗೇಶ. ಈ ನಾಗೇಶ ಅರ್ಧ ಲೀಟರ್ ಆಸಿಡ್ ಹಾಕಿ ಬಂಗಾರದಂತಹ ಯುವತಿಯ ಬಾಳಿಗೆ ಬೆಂಕಿ ಹಾಕಿದ್ದ. ಹಲವು ದಿನಗಳ ಕಾಲ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ತಲೆಮರೆಸಿಕೊಂಡಿದ್ದ ನಾಗ ಸಿಕ್ಕಿ ಬಿದ್ದಿದ್ದ. ವಶಕ್ಕೆ ಪಡೆಯಲು ಹೋದಾಗ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಕಾಲಿಗೆ ಗಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ಇಷ್ಟು ದಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ನಾಗನನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಶುರುಮಾಡಿದ್ದಾರೆ. ಆರೋಪಿ ನಾಗೇಶ್ ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ತಪ್ಪು ಮಾಡಿದೆ ಸಾರ್ ಎಂದು ಅವಲತ್ತುಕೊಂಡಿದ್ದಾನೆ. ಇದರ ನಡುವೆ ನನ್ನ ಕಾಲಿಗೆ ಹುಂಡು ಹಾರಿಸಬಾರದಿತ್ತು ಎದೆಗೆ ಗುಂಡು ಹಾರಿಸಬೇಕಿತ್ತು ಎಂದು ಕಣ್ಣೀರು ಹಾಕಿದ್ದಾನಂತೆ.

ಪ್ರೀತಿಸಿದ ಹುಡುಗಿ ಯಾರಿಗೂ ಸಿಗಬಾರದೆಂದು ಹೀಗೆ ಮಾಡಿದೆ

ಪ್ರೀತಿಸಿದ ಹುಡುಗಿ ಯಾರಿಗೂ ಸಿಗಬಾರದೆಂದು ಹೀಗೆ ಮಾಡಿದೆ

ನಾಗೇಶ್, "ಸಾರ್ ನಾನು ದೊಡ್ಡ ತಪ್ಪೇ ಮಾಡಿದೆ. ಆ್ಯಸಿಡ್ ಹಾಕಬಾರದಿತ್ತು. ಕನಸು-ಮನಸಲ್ಲೂ ಯಾರು ಯೋಚನೆ ಮಾಡದ್ದನ್ನು ಮಾಡಿದೆ. ಸಾರಿ ಸರ್. ಸಾರಿ ನಾನೇ ಪಾಪಿ ನಾನೇ ಪಾಪಿ". ಹೀಗಂತ ಹೇಳಿ ಕಣ್ಣೀರು ಹಾಕುತ್ತಾ ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ತಲೆತಲೆ ಚಚ್ಚಿಕೊಂಡಿದ್ದಾನಂತೆ.

"ತನಗೆ ಆಸಿಡ್ ಹಾಕೋ ಮನಸ್ಸು ಇರಲಿಲ್ಲ. ನಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಅಂತ ಹೀಗೆ ಮಾಡಿದೆ. ಇದೀಗ ಆಸಿಡ್ ಹಾಕಿ ಪ್ರತಿಕ್ಷಣ ಸತ್ತು ಬದುಕ್ತಿದ್ದೇನೆ. ನಾನು ಯುವತಿ‌ ಕಾಲೇಜಿನಲ್ಲಿದ್ದಾಗ್ಲೇ ಲವ್ ಮಾಡಿದ್ದೆ. ಕಾಲೇಜಿನಲ್ಲೂ ಕೂಡ ಯುವತಿಯನ್ನ ಫಾಲೋ‌ ಮಾಡುತ್ತಿದ್ದೆ. ಅವಳು ಹೋಗೊ ಕಾಲೇಜಿನಲ್ಲಿ ಯಾರಾದರು ನನ್ನ ಹುಡುಗಿ ಮೇಲೆ ಕಣ್ಣಾಕಿದವರಿಗೆ ವಾರ್ನಿಂಗ್ ಕೊಡುತ್ತಿದ್ದೆ" ಎಂದು ಪೊಲೀಸರ ಮುಂದೆ ನಾಗೇಶ್ ಬಾಯ್ಬಿಟ್ಟಿದ್ದಾನೆ.

ಪೊಲೀಸರ ಮುಂದೆ ತನ್ನ ತಪ್ಪೊಪ್ಪಿಗೆ

ಪೊಲೀಸರ ಮುಂದೆ ತನ್ನ ತಪ್ಪೊಪ್ಪಿಗೆ

ನಾಗೇಶ್ ತಾನೂ ಏನೇ ಮಾಡಿದರು ನಂದು ಒನ್ ಸೈಡ್ ಲವ್ ಆಗಿಯೇ ಉಳಿಯಿತಲ್ಲಾ ಅಂತ ಗೊತ್ತಾಗಿ ಹುಚ್ಚನಾಗಿಬಿಟ್ಟಿದ್ದೆ. ಅವಳಿಲ್ಲದೇ ಒಂದ್ ಸೆಕೆಂಡ್ ಕೂಡ ಇರೋಕೆ ಆಗುತ್ತಿರಲಿಲ್ಲ ಎನ್ನುವ ಹಂತ ತಲುಪಿದ್ದೆ. ಜೊತೆಗೆ ನನ್ನನ್ನ ಆಕೆ ಇಷ್ಟ ಪಟ್ಟಿಲ್ಲ ಅಂತ ಹಲವಾರು ದಿನ ಕುಡಿತವೇ ಜೀವನವಾಯ್ತು. ಆದರು ಆಸಿಡ್ ಹಾಕಿ ನಾನು ತಪ್ಪು ಮಾಡಿದೆ ಸರ್. ದೇವರು ಅದಕ್ಕೆ ನಿಮ್ಮ ಕೈಯಿಂದ ಶಿಕ್ಷೆ ಕೊಡಿಸಿಬಿಟ್ಟ. ಗುಂಡು ಹಾರಿಸಿ ಒಳ್ಳೆ‌ ಕೆಲಸ ಮಾಡಿದ್ದೀರಿ ಸರ್. ಈ ಕಾಲುಮುರಿದಿರೋ ಶಿಕ್ಷೆ ಕಡಿಮೆ ನನಗೆ. ನನಗೆ ಗಲ್ಲೇ ಅಂತಿಮ. ನನ್ನ ಕಾಲಿಗೆ ಗುಂಡು ಹಾರಿಸೋ‌ ಬದಲು ನನ್ನೆದೆಗೆ ಗುಂಡು ಹಾರಿಸಿದ್ದರೆ ಒಳ್ಳೆದಿತ್ತು ಸರ್. ಪ್ಲೀಸ್ ಏನಾದರೂ ಮಾಡಿ ಸರಿಯಾದ ಶಿಕ್ಷೆ ಸಿಗೋ‌ ಹಾಗೆ ಮಾಡಿ ಸರ್. ಮುಂದಿನ ದಿನದಲ್ಲಿ ಸಮಾಜದಲ್ಲಿ ಒಳ್ಳೆ ವ್ಯಕ್ತಿಯಾಗಿ ಇರುತ್ತೇನೆ ಸರ್. ಆಕೆಯನ್ನ ಮದ್ವೆಯಾಗೋ ಅರ್ಹತೇನೂ‌ ನನಗಿಲ್ಲ. ಹೀಗಂತ ಅರೋಪಿ ಪೊಲೀಸರ ಮುಂದೆ ಕಣ್ಣೀರು ಹಾಕಿ ತಪ್ಪುನ್ನು ಒಪ್ಪಿಕೊಂಡಿದ್ದಾನೆ.

ನಾಗೇಶ್ ವಿರುದ್ದ ಶೀಘ್ರವೇ ಚಾರ್ಜ್‌ಶೀಟ್

ನಾಗೇಶ್ ವಿರುದ್ದ ಶೀಘ್ರವೇ ಚಾರ್ಜ್‌ಶೀಟ್

ಆರೋಪಿ ನಾಗೇಶ್ ಈ ಹಿಂದೆ ಆಸಿಡ್ ಅಟ್ಯಾಕ್‌ಗೂ ಮೊದಲು ಪೀಣ್ಯದಲ್ಲಿ ಒಟ್ಟು ಒಂಬತ್ತು ಕೆಜಿ ಆಸಿಡ್ ಖರೀದಿ ಮಾಡಿದ್ದನಂತೆ. ನಕಲಿ ಲೆಟರ್ ಹೆಡ್ ಬಳಸಿ ಖರೀದಿ ಮಾಡಿದ್ದ ಒಂಬತ್ತು ಕೆಜಿಯಲ್ಲಿ ಆತ ಬಚ್ಚಿಟ್ಟಿದ್ದ ಎಂಟು ವರೆ ಕೆಜಿ ಆಸಿಡ್ ಅನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖಾ ಪ್ರಕ್ರಿಯೆಗಳನ್ನು ವೇಗವಾಗಿ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ಶೀಘ್ರವಾಗಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಅರೋಪಿಗೆ ಶಿಕ್ಷೆ ಕೊಡಿಸಬೇಕು ಎನ್ನೋದು ಸದ್ಯ ಪೊಲೀಸರ ಮುಂದಿನ ಗುರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+