ಗ್ಯಾಸ್ ಲಾರಿಗೆ ಕಾರು ಗುದ್ದಿ ಸ್ಥಳದಲ್ಲೇ ಇಬ್ಬರು ಸಾವು
ಬೆಂಗಳೂರು, ಮಾರ್ಚ್ 21: ಗ್ಯಾಸ್ ಲಾರಿಗೆ ಕಾರು ಗುದ್ದಿ, ಸ್ಥಳದಲ್ಲೇ ಇಬ್ಬರು ಸಾವನಪ್ಪಿದ ಘಟನೆ ನಡೆದಿದೆ. ಬೆಂಗಳೂರು - ಮಂಗಳೂರು ಹೆದ್ದಾರಿ 75 ರಲ್ಲಿ ಈ ಅಪಘಾತ ಸಂಭವಿಸಿದೆ.
ಮಾಗಡಿ ತಾಲೂಕಿನ ಕುದೂರು ರಸ್ತೆ ಪಾಳ್ಯದ ಬಳಿ ದುರ್ಘಟನೆ ಸಂಭವಿಸಿದೆ. ಕಾರ್‌ನಲ್ಲಿ ಬರುತ್ತಿದ್ದ ಪ್ರಯಾಣಿಕರು, ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದಾಗ ಅಪಘಾತವಾಗಿದೆ.
ಹಿರೇಹಡಗಲಿಯಲ್ಲಿ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಮಗುಚಿ ನಾಲ್ವರ ಸಾವು
ಕಾರ್‌ನಲ್ಲಿ ಬರುವಾಗ ಮುಂದೆ ಹೋಗಲು ಓವರ್ ಟೇಕ್ ತೆಗೆದುಕೊಳ್ಳಲು ಹೋಗಿ ಈ ಘಟನೆ ಸಂಭವಿಸಿದೆ. ಓವರ್ ಟೇಕ್ ಮಾಡುವಾಗ ಗ್ಯಾಸ್ ಲಾರಿಗೆ ಕಾರು ಗುದ್ದಿದೆ. ಕಾರಿನಲ್ಲಿ ಒಟ್ಟು ಐದು ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಇಬ್ಬರು ಸ್ಥಳದಲ್ಲೇ ಸಾವಿಗಿಡಗಿದ್ದಾರೆ.
ಕಾರ್‌ನಲ್ಲಿ ಇದ್ದ ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುದೂರು ಪೊಲೀಸರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.