ಬೆಂಗಳೂರು: ಭಾರಿ ಹಗರಣ ಗುಮಾನಿ ಐದು ಕಡೆ ಎಸಿಬಿ ದಾಳಿ
ಬೆಂಗಳೂರು, ಮೇ 04: ನಗರದಲ್ಲಿ ಶನಿವಾರ ಬೆಳಿಗ್ಗೆ ಐದು ಕಡೆ ಎಸಿಬಿ ದಾಳಿ ನಡೆದಿದೆ. ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಹಗರಣಕ್ಕೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಸರ್ಕಾರಕ್ಕೆ ಹಣ ವಂಚಿಸಿದ ಗುಮಾನಿಯ ಮೇಲೆ ರತನ್ ಲಾಲ್, ಅಮಿತ್ ಬೋಳಾರ್, ಕೆ ಗೌತಮ್, ಮುನಿರಾಜಪ್ಪ ಎಂಬುವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.
ಬಿಬಿಎಂಪಿ ಹಾಗೂ ಬಿಡಿಎಯಿಂದ ವಾಲ್ ಮಾರ್ಕ್ ಕಂಪನಿ ಅಕ್ರಮವಾಗಿ ಟಿಡಿಆರ್ ಪಡೆದಿತ್ತು ಎನ್ನಲಾಗಿದೆ. ಹೀಗಾಗಿ ವಾಲ್ ಮಾರ್ಕ್ ಕಂಪನಿ ಮಾಲೀಕ ರತನ್ ಲಾಲ್ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಎಸ್‌ಪಿ, ಎಸಿಪಿ ಮತ್ತು ಐದು ಡಿವೈಎಸ್‌ಪಿಗಳ ತಂಡ ಈ ದಾಳಿ ನಡೆಸಿದೆ.

ಇಂದಿರಾನಗರ, ಕೆಆರ್ ಪುರ ಹಾಗೂ ಹೆಚ್ಎಎಲ್ ನಲ್ಲಿ, ವಾಲ್ ಮಾರ್ಕ್ ಕಂಪನಿ ಸೇರಿದಂತೆ ಒಟ್ಟು ಐದು ಕಂಪನಿಗಳ ಮೇಲೆ ದಾಳಿ ನಡೆದಿದೆ. ರೆಸಿಡೆನ್ಸಿ ರಸ್ತೆಯಲ್ಲಿ ರತನ್ ಲಾಲ್ ನಿವಾಸ, ಹಾಗೂ ಎಚ್ಎಎಲ್ ಬಳಿಯಿರುವ ಅವರ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.












Click it and Unblock the Notifications