Breaking: ಭೋವಿ ಅಭಿವೃದ್ಧಿ ನಿಗಮದ ಮೇಲೆ ಎಸಿಬಿ ದಿಢೀರ್ ದಾಳಿ
ಬೆಂಗಳೂರು, ಏಪ್ರಿಲ್ 28: ರಾಜ್ಯದ ಭೋವಿ ಅಭಿವೃದ್ಧಿ ನಿಗಮ ಹಾಗೂ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದು, ಸಂಜೆ ಹೊತ್ತಿಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಭೋವಿ ಅಭಿವೃದ್ಧಿ ನಿಗಮದ ಎಂಡಿ ಲೀಲಾವತಿ, ಜಿಎಂ ನಾಗರಾಜಪ್ಪ ಅವರ ಮನೆ ಮೇಲೂ ಸಹ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಭೋವಿ ಅಭಿವೃದ್ಧಿ ಪ್ರಾಧಿಕಾರದ ಕೆಲವೊಂದು ವ್ಯವಹಾರದ ಸಂಬಂಧ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬಂದಿದ್ದವು. ಭೋವಿ ಅಭಿವೃದ್ಧಿ ನಿಗಮದ ಎಂಡಿ ಲೀಲಾವತಿ ಹಾಗೂ ಜಿಎಂ ನಾಗರಾಜ್ ವಿರುದ್ಧ ದೂರುಗಳು ಕೇಳಿ ಬಂದಿದ್ದವು.

ಈ ಬಗ್ಗೆ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ಈ ಹಿನ್ನೆಲೆ ಭೋವಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಲೀಲಾವತಿ ಹಾಗೂ ನಾಗರಾಜ್ ಕಚೇರಿ ಹಾಗೂ ಇಬ್ಬರ ಮನೆಗಳ ಮೇಲೆ ದಾಳಿ ಮಾಡಿ ಎಸಿಬಿ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ.
Recommended Video
ಭಾಷೆ ವಿಚಾರಕ್ಕೆ ವಾದಕ್ಕಿಳಿದ ಸ್ಟಾರ್ ನಟರು | Oneindia Kannada












Click it and Unblock the Notifications