ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ದಾಳಿ: ಕಂತೆ ಕಂತೆ ಹಣ ಗಂಟು! ಚಿನ್ನಾಭರಣದ ಸಂಪತ್ತು!

|
Google Oneindia Kannada News

ಬೆಂಗಳೂರು, ಜೂನ್17: ಕಂತೆ ಕಂತೆ ನೋಟು, ವೈರೆಟಿ ವೆರೈಟಿ ಚಿನ್ನ, ಎಸಿಬಿ ದಾಳಿಯ ವೇಳೆ ಕಂದಾಯ ಭವನದ ನೋಂದಣಿ ವಿಭಾಗದಲ್ಲಿ ಸಹಾಯಕ ಮಹಾನಿರೀಕ್ಷಕ ಮಧುಸೂದನ್ ಮನೆಯಲ್ಲಿ ಸಿಕ್ಕಿರುವ ನಗದು ಹಣವೇ 3.9 ಕೋಟಿ. ಕೆಜಿಗಟ್ಟಲೆ ಚಿನ್ನ ಸಹ ಸಿಕ್ಕಿದ್ದೂ ಎಸಿಬಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮಧುಸೂದನ್ ಮನೆಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಸಂಪತ್ತು ಪತ್ತೆಯಾಗಿದೆ. ಕಂದಾಯ ಭವನದಲ್ಲಿ ನೊಂದಣಿ ವಿಭಾಗದ ಸಹಾಯಕ ಮಹಾನಿರೀಕ್ಷಕ ಆಗಿರೋ ಮಧುಸೂದನ್‌ಗೆ ಸೇರಿದ ರಾಜಾಜಿನಗರದಲ್ಲಿರೋ ನಿವಾಸ ಮೇಲೆ ದಾಳಿ ನಡೆಸಿದ್ದ ಎಸಿಬಿ ಟೀಂ. ದಾಳಿ ವೇಳೆ ಕೆ.ಜಿಗಟ್ಟಲೆ ಚಿನ್ನಾಭರಣ,ಲಕ್ಷಾಂತರ ರೂಪಾಯಿ ನಗದು ಹಣ ಪತ್ತೆಯಾಗಿದೆ.

ಎಸಿಬಿ ದಾಳಿ: ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮ್‌ನಲ್ಲಿ ಲಕ್ಷ ಲಕ್ಷ ಹಣ ಪತ್ತೆ!ಎಸಿಬಿ ದಾಳಿ: ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮ್‌ನಲ್ಲಿ ಲಕ್ಷ ಲಕ್ಷ ಹಣ ಪತ್ತೆ!

ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿ ಶಾಕ್ ನೀಡಿದ್ದಾರೆ. ಆದಾಯಕ್ಕೆ ಮೀರಿದ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ರಾಜ್ಯಾದ್ಯಂತ 21 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ದಾಳಿಯನ್ನು ನಡೆಸು ತಪಾಸಣೆಯನ್ನು ನಡೆಸುತ್ತಿದ್ದಾರೆ.

 ಕೋಟಿ ಕೋಟಿ ನಗದು ಪತ್ತೆ

ಕೋಟಿ ಕೋಟಿ ನಗದು ಪತ್ತೆ

ಮಧಸೂದನ್ ಮನೆಯಲ್ಲಿ ಕೋಟಿ ಕೋಟಿ ನಗದು ಪತ್ತೆಯಾಗಿದೆ. 39,00,500 ನಗದು ಹಣ ಪತ್ತೆಯಾಗಿದೆ. 500 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು ಬರೋಬ್ಬರಿ 3.90 ಕೋಟಿ ನಗದು ಹಣ ಮನೆಯಲ್ಲಿ ಪತ್ತೆಯಾಗಿದೆ.

 ಬಂಗಾರದ ಕೋಣೆ

ಬಂಗಾರದ ಕೋಣೆ

ಎಸಿಬಿ ಅಧಿಕಾರಿಗಳು ಬಂಗಾರದ ಕೋಣೆಯನ್ನು ಕಂಡಂತಾಗಿದೆ. ಮಧು ಸೂದನ್ ಮನೆಯಲ್ಲಿ ಶೋಧಿಸುವ ಸಮಯದಲ್ಲಿ ಸಿಕ್ಕಿರುವ ಚಿನ್ನಾಭರಣ ಕೆಜಿಗಟ್ಟಲೇ ಇದೆ. 2.3 ಕೆಜಿ ಚಿನ್ನ ಮನೆಯಲ್ಲಿ ಸಿಕ್ಕಿದ್ದು ವಿವಿಧ ಬಗೆಯ ಆಭರಣಗಳನ್ನು ಮಾಡಿಸಿಕೊಳ್ಳಲಾಗಿತ್ತು. 4.9 ಕೆಜಿ ಬೆಳ್ಳಿಯ ಸಾಮಗ್ರಿಗಳು ಸಹ ಮಧುಸೂಧನ್ ಮನೆಯಲ್ಲಿ ಸಿಕ್ಕಿದೆ.

 ಆಸ್ತಿ ಪತ್ರಗಳು ಸಹ ದೊರಕಿದೆ

ಆಸ್ತಿ ಪತ್ರಗಳು ಸಹ ದೊರಕಿದೆ

ಮಧುಸೂದನ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದು ಆಸ್ತಿ ಪತ್ರಗಳು ಸಹ ದೊರಕಿದೆ ಎನ್ನಲಾಗುತ್ತಿದೆ. ಇನ್ನು ಮಧುಸೂದನ್ ಸುಮಾರು ನಾಲ್ಕು ಕೋಟಿ ನಗದನ್ನು ಮನೆಯಲ್ಲಿ ಯಾಕೆ ಇಟ್ಟಿದ್ದರು. ಅಕ್ರಮವಾಗಿ ಸಂಪಾದಿಸಿರೋ ಹಣವೇ ಅಥವಾ ಯಾವ ಹಣವೆಂದು ಮಧುಸೂದನ್‌ರನ್ನು ಪ್ರಶ್ನಿಸಲಾಗುತ್ತಿದೆ.

 80 ಕಡೆಗಳಲ್ಲಿ ದಾಳಿಯನ್ನು ನಡೆಸಿದ್ದಾರೆ

80 ಕಡೆಗಳಲ್ಲಿ ದಾಳಿಯನ್ನು ನಡೆಸಿದ್ದಾರೆ

ರಾಜ್ಯಾದ್ಯಂತ ದಾಳಿಯನ್ನು ನಡೆಸಿ 21 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 80 ಕಡೆಗಳಲ್ಲಿ ದಾಳಿಯನ್ನು ನಡೆಸಿದ್ದಾರೆ. 300 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದ ಭ್ರಷ್ಟ ತಿಮಿಂಗಿಲಗಳು ತಿಂದಿರೋದು ಎಷ್ಟು ಎಂದು ಶೋಧಿಸುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿಯನ್ನು ನಡೆಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಸಿಬಿ ದಾಳಿ ಮುಗಿದ ಬಳಿಕವಷ್ಟೇ ಯಾವ ಅಧಿಕಾರಿ ಎಷ್ಟು ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂಬುದು ತಿಳಿದುಬರಲಿದೆ.

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
Karnataka ACB Raids: Acb raid on AGO Madhusudan house in Bengaluru.Rs 3.9 CR cash and 2.3 Kg gold jewelry were seized, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X