ಫೇಸ್‌ಬುಕ್ : ಸೋಮಣ್ಣ-ಪ್ರಿಯಾಕೃಷ್ಣ ಕಳ್ಳ ಪೊಲೀಸ್ ಆಟ!

v somanna
ಬೆಂಗಳೂರು,ಜ.18 : ಮಾಜಿ ಸಚಿವ ವಿ.ಸೋವಣ್ಣ ತಮ್ಮ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಚಿತ್ರ ಪ್ರಕಟಿಸಲಾಗಿದೆ ಎಂದು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುರೇಶ್ ಬಿ.ಗೌಡ ಅವರು ತಮ್ಮ ಫೇಸ್ ಬುಕ್ ಸೋಮಣ್ಣ ಮತ್ತು ಶಾಸಕ ಪ್ರಿಯಾಕೃಷ್ಣ ವಿರುದ್ಧ ಇಂತಹ ಚಿತ್ರವನ್ನು ಹಾಕಿದ್ದು, ವಿವಾದಕ್ಕೆ ಕಾರಣವಾಗಿದೆ.

ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಮತ್ತು ಅವರ ರಾಜಕೀಯ ವಿರೋಧಿ ವಿ.ಸೋಮಣ್ಣ ಈ ಚಿತ್ರದಲ್ಲಿದ್ದಾರೆ. ಪೊಲೀಸ್ ಅಧಿಕಾರಿ ವೇಷದಲ್ಲಿರುವ ಪ್ರಿಯಾಕೃಷ್ಣ ಸೋಮಣ್ಣ ಅವರನ್ನು ಓಡಿಸಿಕೊಂಡು ಬರುವಂತಹ ಚಿತ್ರವದು. ಫೇಸ್ ಬುಕ್ ನಲ್ಲಿ ಸುರೇಶ್.ಬಿ.ಗೌಡ ಅವರು ಈ ಚಿತ್ರವನ್ನು ಜ.3ರಂದು ಹಾಕಿದ್ದಾರೆ.

ಇದನ್ನು ಗಮನಿಸಿರುವ ವಿ.ಸೋಮಣ್ಣ ತಮ್ಮ ಗೌರವಕ್ಕೆ ಧಕ್ಕೆ ತರುವಂತಹ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ತಿರುಚಿ ಸುರೇಶ್ ಬಿ.ಗೌಡ ಅವರು ಹಾಕಿದ್ದಾರೆ ಎಂದು ತಮ್ಮ ಆಪ್ತ ಸಹಾಯಕನಿಂದ ವಿಜಯನಗರ ಪೊಲೀಸರಿಗೆ ದೂರು ಕೊಡಿಸಿದ್ದಾರೆ. ಜ.8ರಂದು ಈ ಕುರಿತು ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಲಾಭೂರಾಮ್, ವಿ.ಸೋವಣ್ಣ ಅವರ ಸಹಾಯಕರು ನೀಡಿದ ದೂರಿನ ಅನ್ವಯ ಕ್ರಮ ಕೈಗೊಳ್ಳುವಂತೆ ವಿಜಯನಗರ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿ ಸೈಬರ್ ಕ್ರೈಂ ಪೊಲೀಸರಿಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಪೋಟೋ ಹಾಗೆ ಇದೆ : ಮಾಜಿ ಸಚಿವ ವಿ.ಸೋಮಣ್ಣ ತಮ್ಮ ಸಹಾಯಕರ ಮೂಲಕ ದೂರು ನೀಡಿದರು ಸುರೇಶ್ ಬಿ.ಗೌಡ ಅವರ ಫೇಸ್ ಬುಕ್ ನಲ್ಲಿ ಸೋಮಣ್ಣ ಮತ್ತು ಪ್ರಿಯಾಕೃಷ್ಣ ಅವರ ಫೋಟೋ ಹಾಗೆ ಇದೆ. ಜ.3ರಂದು ಹಾಕಿರುವ ಈ ಚಿತ್ರ ಜ.18 ಶನಿವಾರ ಸಹ ಅವರ ಹಾಗೆಯೇ ಇದೆ. ಇದನ್ನು ಈಗಾಗಲೇ ಇಬ್ಬರು ಶೇರ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+