ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಪತ್ತು ನಿರ್ವಹಣೆಗೆ ಆಪದ್ ಮಿತ್ರ: ಸಂತ್ರಸ್ತರ ನೆರವಿಗಾಗಿ ತಂಡ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಅತಿವೃಷ್ಟಿ, ಭೂಕುಸಿತ, ಪ್ರವಾಹದಂತಹ ವಿಪತ್ತು ನಿರ್ವಹಣೆಗೆ 'ಆಪದ್ ಮಿತ್ರ 'ಎನ್ನವು ತಂಡವೊಂದು ಸಜ್ಜಾಗುತ್ತಿದೆ.

ಐಐಎಸ್ಸಿ ಅಧ್ಯಯನ ತೆರೆದಿಟ್ಟ ಬೆಂಗಳೂರು ಪ್ರವಾಹದ ಹಿಂದಿನ ಕಾರಣಗಳುಐಐಎಸ್ಸಿ ಅಧ್ಯಯನ ತೆರೆದಿಟ್ಟ ಬೆಂಗಳೂರು ಪ್ರವಾಹದ ಹಿಂದಿನ ಕಾರಣಗಳು

ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಶೀಘ್ರ ನೆರವು ರಕ್ಷಣೆ ಸಿಗಬೇಕು ಎಂಬ ಉದ್ದೇಶಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ದೇಶದ 25 ರಾಜ್ಯಗಳಲ್ಲಿ ಹೆಚ್ಚು ಪ್ರವಾಹ ಪೀಡಿತ ಪ್ರದೇಶ ಯಾವ ಜಿಲ್ಲೆಯಲ್ಲಿದೆ ಎಂಬುದನ್ನು ಗುರುತಿಸಿ ಆಪದ್ ಮಿತ್ರ ಸ್ಥಳೀಯ ಸ್ವಯಂ ಸೇವಕರ ತಂಡವನ್ನು ರಚಿಸುವಂತೆ ಸೂಚಿಸಿದೆ. ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಲಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಆಪದ್ ಮಿತ್ರ ಎಂದರೇನು? ಕಟ್ಟಡ ಕುಸಿತ, ಪ್ರವಾಹ, ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳಾದಾಗ ಅಗ್ನಿ ಶಾಮಕ ಸಿಬ್ಬಂದಿ, ವಿಪತ್ತು ನಿರ್ವಹಣಾ ತಂಡಕ್ಕಿಂತ ಮೊದಲು ನೆರವಿಗೆ ಧಾವಿಸಿದಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಹೆಚ್ಚಿರುತ್ತದೆ.

AAPADH MITRA, rescue team will reach Belgaum soon

ಸಂತ್ರಸ್ತರನ್ನು ಹೇಗೆ ಕಾಪಾಡಬೇಕು, ಒಂದು ವೇಳೆ ನೆರವಿಗೆ ಧಾವಿಸಿದಾಗ ತಾವೇ ಅಪಾಯದಲ್ಲಿ ಸಿಲುಕಿದರೆ ಹೇಗೆ ಪಾರಾಗಬೇಕು ಎಂಬುದುಸ್ಥಳೀಯರಿಗೆ ತಿಳಿದಿರುವುದಿಲ್ಲ, ಹಾಗಾಗಿ ಸ್ಥಳೀಯ ಆಸಕ್ತ ಸ್ವಯಂ ಸೇವಕರನ್ನು ಗುರುತಿಸಿ ಅವರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಿದರೆ ಪ್ರವಾಹ , ನೆರೆ, ಅತಿವೃಷ್ಟಿ ಸಂದರ್ಭದಲ್ಲಿ ತಕ್ಷಣ ನೆರವಿಗೆ ಬರುತ್ತಾರೆ. ಇದರಿಂದ ಎಷ್ಟೋ ಪ್ರಾಣ ಹಾನಿ ತಡೆಯಬಹುದು ಎಂಬುದು ಉದ್ದೇಶವಾಗಿದೆ.

200 ಮಂದಿ ತಂಡ: ಬೆಳಗಾವಿ ಜಿಲ್ಲೆಯ ನಾನಾ ಭಾಗಗಳಿಂದ 100 ಮಂದಿ ಗೃಹ ರಕ್ಷ ದಳ ಸಿಬ್ಬಂದಿಯನ್ನು ಅಲ್ಲಿನ ಜಿಲ್ಲಾಧಿಕಾರಿಗಳು ತರಬೇತಿಗೆ ಕಳುಹಿಸಿದ್ದಾರೆ. ಬೆಂಗಳೂರಿನ ಗೃಹ ರಕ್ಷಕ, ಪೌರ ರಕ್ಷಣೆ ಹಾಗೂ ಅಗ್ನಿ ಶಾಮಕ ಅಕಾಡೆಮಿ ಸಹಯೋಗದಲ್ಲಿ ಮೊದಲ ಹಂತದಲ್ಲಿ 15 ದಿನ 100 ಮಂದಿಗೆ, 2 ನೇ ಹಂತದಲ್ಲಿ 100 ಮಂದಿಗೆ ತರಬೇತಿ ನೀಡಲಾಗುತ್ತದೆ.

English summary
National Disaster Management Force (NDRF) has formed AAPADH MITRA team which will take rescue operation in emergency situation like flood, fire and other incidents across 25 state in the country. In Karnataka, the NDRF team is under training at Ulsoor lake in Bangalore and the same will be sent to Belgaum which was condidered flood affected district during every monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X