• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಹೆಸರಿಡಿ: ಎಎಪಿ

|
Google Oneindia Kannada News

ಬೆಂಗಳೂರು, ಆಗಸ್ಟ್ 04: ಕನ್ನಡದ ವರನಟ ಪದ್ಮಭೂಷಣ ಡಾ ರಾಜ್ ಕುಮಾರ್ ಅವರ ಹೆಸರನ್ನು ನಗರದ ಮಾಗಡಿ ರಸ್ತೆ ನಮ್ಮ ಮೆಟ್ರೊ ಸ್ಟೇಷನ್ ಗೆ ನಾಮಕರಣ ಮಾಡುವ ಬಿಬಿಎಂಪಿ ಕೌನ್ಸಿಲ್ ಸಭೆಯ ನಿರ್ಣಯವನ್ನು ಆಮ್ ಆದ್ಮಿ ಪಕ್ಷವು ಸಂಪೂರ್ಣ ಸ್ವಾಗತಿಸುತ್ತದೆ. ಮಾಗಡಿ ರಸ್ತೆ ಮೆಟ್ರೊ ನಿಲ್ದಾಣವು ಡಾ ರಾಜ್ ಕುಮಾರ್ ರಸ್ತೆಗೆ ಹೊಂದಿಕೊಂಡಿದ್ದು ಈ ಬಗ್ಗೆ ಪಕ್ಷವು ಕಳೆದ ವರ್ಷ ಬಿಎಂಆರ್ ಸಿಎಲ್ ಗೆ ಮನವಿ ಪತ್ರವನ್ನು ನೀಡಿತ್ತು.

ಈಗಲಾದರೂ ಮೆಟ್ರೊ ನಿಗಮವು ಕೂಡಲೇ ಕ್ರಮ ಕೈಗೊಂಡು ವರನಟ ಡಾ ರಾಜ್ ಕುಮಾರ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ ಹೇಳಿದರು.

ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ

ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳು, ಸಾಹಿತಿಗಳಲ್ಲಿ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ರನ್ನ, ಪಂಪ, ಭೈರಪ್ಪ, ವಿಜ್ಞಾನಿಗಳಾದ ರಾಜಾರಾಮಣ್ಣ, ಸಿ.ಎನ್.ಆರ್.ರಾವ್, ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಾಡುಗಾರರಾದ ಸಿ.ಅಶ್ವಥ್, ಕಾಳಿಂಗ್ ರಾವ್, ನಟರಾದ ಡಾ ರಾಜ್ ಕುಮಾರ್, ವಿಷ್ಣುವರ್ಧನ, ಎಂಜನಿಯರಿಂಗ್ ಕ್ಷೇತ್ರದ ದಿಗ್ಗಜ ಸರ್ ಎಂ ವಿಶ್ವೇಶ್ವರಯ್ಯ, ಐ.ಟಿನಲ್ಲಿ ನಾರಾಯಣ ಮೂರ್ತಿ ಮುಂತಾದವರ ಹೆಸರುಗಳನ್ನು ಪರಿಶೀಲಿಸುವುದು ಸೂಕ್ತ ಎಂಬುದು ಜನಾಭಿಪ್ರಾಯವಾಗಿದೆ.

English summary
AAP Karnataka has demanded Metro BMRCL to re name Namma Metro Magadi Road Metro station after thespian Dr Rajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X