ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಎಪಿ ಕಾರ್ಯಕರ್ತರಿಗೆ ಜನ ಸಾಮಾನ್ಯನ ಪ್ರಶ್ನೆ; ವಿಡಿಯೋ ವೈರಲ್

|
Google Oneindia Kannada News

ಬೆಂಗಳೂರು, ಜುಲೈ08: ಲೋಕದ ಡೊಂಕು ತಿದ್ದುವ ಮೊದಲು ನಿಮ್ಮ ಡೊಂಕುಗಳನ್ನು ಸರಿ ಪಡಿಸಿಕೊಳ್ಳಿ ಎಂಬುದು ಲೋಕ ರೂಢಿಯಲ್ಲಿರುವ ಮಾತಾಗಿದೆ. ಆಮ್ ಆದ್ಮಿ ಪಕ್ಷ ದೇಶದ ಡೊಂಕನ್ನು ತಿದ್ದಲು ಮುಂದಾಗಿದೆ. ಆದರೆ ಅವರದೇ ಪಕ್ಷದ ಕಾರ್ಯಕರ್ತರನ್ನು ತಿದ್ದಲು ಸಾಧ್ಯವಾಗುತ್ತಿಲ್ಲವೇ?. ದೇಶದ ನೆಲದ ಕಾನೂನಿಗೆ ಗೌರವ ಕೊಡದ ಕಾರ್ಯಕರ್ತರು ಹೆಲ್ಮೆಟ್ ಹಾಕದೆ ರಸ್ತೆ ರಸ್ತೆಯಲ್ಲಿ ಸುತ್ತುವಾಗ ಅವರನ್ನು ಸಾಮಾನ್ಯನೊಬ್ಬ ಪ್ರಶ್ನಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆಮ್ ಆದ್ಮಿಯ ಕಾರ್ಯಕರ್ತರು ಬೆಂಗಳೂರಿನ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಒಂದು ವಾಹನದಲ್ಲಿ ಇಬ್ಬರು ಹೋಗುವ ಸಂದರ್ಭದಲ್ಲಿ ಹಿಂಬದಿ ಸವಾರ ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಈ ಸಮಯದಲ್ಲಿ ಜನ ಸಾಮಾನ್ಯ ಹೆಲ್ಮೆಟ್‌ ಎಲ್ಲಿ ಎಂದು ಪ್ರಶ್ನಿಸಿದ್ದಾನೆ?. ಕೆಲವರು ಉತ್ತರಿಸದೇ ಹೋದರೆ ಇಲ್ಲೋಬ್ಬ ಅಲ್ಲೇ ಕೊಡುತ್ತಾರೆ ಎಂದು ಹೇಳಿ ಹೋಗಿದ್ದಾನೆ. ಈ ಎಲ್ಲಾ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್‌ಗೆ ಜೈಕಾರ; ಎಎಪಿಯ ನಾಯಕರೂ ಆಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್‌ಗೆ ಚನ್ನಾಗಿಯೇ ಕಾನೂನುಗಳು ಗೊತ್ತಿದೆ. ಕಾನೂನನ್ನು ಉಲ್ಲಂಘಿಸಬಾರದು ಎಂಬುದು ತಿಳಿದಿದೆ. ಆದರೆ ಭಾಸ್ಕರ್ ರಾವ್‌ಗೆ ಜೈಕಾರ ಹಾಕುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೆಲದ ಕಾನೂನಿಗೆ ಗೌರವವನ್ನು ನೀಡದೇ ಹೆಲ್ಮೆಟ್ ರಹಿತವಾದ ಪ್ರಯಾಣನ್ನು ಮಾಡುತ್ತಿದ್ದಾರೆ. ಪಕ್ಷ ಇಂಥ ಕಾರ್ಯಕರ್ತರಿಗೆ ಹಿತವಚನವನ್ನು ಹೇಳಬೇಕಿದೆ. ಇನ್ನು ಕಾರ್ಯಕರ್ತರು ಪುನೀತ್ ರಾಜ್ ಕುಮಾರ್‌ಗೆ ಸಹ ಜೈಕಾರವನ್ನು ಹಾಕುತ್ತಾ ಆಮ್ ಆದ್ಮಿ ಪಕ್ಷದ ಮುಖಂಡರಂತೆ ಬಿಂಬಿಸುತ್ತಿರುವುದು ಖಂಡನೀಯ ವಿಚಾರವಾಗಿದೆ. ಯಾಕೆಂದರೇ ಅಪ್ಪು ಯಾವತ್ತು ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿರಲಿಲ್ಲ.

ಎಲ್ಲಾ ಪಕ್ಷದ ಕಾರ್ಯಕರ್ತರು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಾರೆ ಅನ್ನೋದು ನಿಜ ಸಂಗತಿಯೇ. ಆದರೆ ಎಲ್ಲ ಪಕ್ಷಗಳಿಗಿಂತ ತಾವೂ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷವೂ ಬೇರೆದವರಂತೆ ಮಾಡುತ್ತಾರೆ, ನಾವೂ ಮಾಡುತ್ತೇವೆ ಎಂದರೆ ಅರ್ಥವೇನು?. ಆಮ್ ಆದ್ಮಿ ಪಕ್ಷವೂ ವಿಭನ್ನವಾಗಿ ಗುರುತಿಸಿಕೊಳ್ಳಬೇಕಾದರೆ ಬೇರೆ ಪಕ್ಷಕ್ಕೂ ತಮ್ಮ ಪಕ್ಷಕ್ಕೂ ಇರುವ ವ್ಯತ್ಯಾಸ ಜನರಿಗೆ ತಿಳಿಯಬೇಕಲ್ಲವೇ.

Aam Admi Party Workers Bike Riding Without Helmet Common People Questioning Video Viral

ಸಂಚಾರಿ ಪೊಲೀಸರು ಹಾಕಬೇಕಿದೆ ದಂಡ; ರಾಜ್ಯದ ಯಾವುದೇ ಪಕ್ಷಕದ ಕಾರ್ಯಕರ್ತರು ಬೈಕ್ ಜಾಥಾವನ್ನು ಮಾಡುವಾಗ ಹೆಲ್ಮೆಟ್ ಧರಿಸಬೇಕು. ಆದರೆ ಸಂಚಾರಿ ಪೊಲೀಸರು ಗುಂಪು ಗುಂಪಾಗಿ ಹೋಗುವ ಪಕ್ಷಗಳ ಕಾರ್ಯಕರ್ತನನ್ನು ಹಿಡಿದು ದಂಡವನ್ನು ಹಾಕುವುದಿಲ್ಲ. ಇದೇ ಧೈರ್ಯದ ಮೇಲೆ ಪಕ್ಷಗಳ ಕಾರ್ಯಕರ್ತರು ಜನರಿಗೂ ತೊಂದರೆಯಾಗುವ ರೀತಿಯಲ್ಲಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಸಂಚಾರವನ್ನು ಮಾಡುತ್ತಾರೆ. ಇಂಥವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದರೆ ಬೈಕ್ ತೆಗೆಯುವ ಮುನ್ನವೇ ತಲೆಗೆ ಹೆಲ್ಮೆಟ್ ಧರಿಸಿ ಹೊರಡುತ್ತಾರೆ.

Recommended Video

ನಟ ವಿಕ್ರಂ ಗೆ ಹೃದಯಘಾತ! ತಕ್ಷಣವೇ ಆಸ್ಪತ್ರೆಗೆ ದಾಖಲು. ಹೇಗಿದೆ ವಿಕ್ರಂ ಆರೋಗ್ಯ ಸ್ಥಿತಿ? | OneIndia Kannada

English summary
Aam Admi party workers Bike Riding Without Helmet. Common People Questioning Video Viral in Bengaluru near Gandhi Bazar, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X