ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗಾಗಿ ಆಪ್‌ನಿಂದ 'ಬೆಂಬಾಟ್ ಬೆಂಗಳೂರು' ವೆಬ್‌ಸೈಟ್

|
Google Oneindia Kannada News

ಬೆಂಗಳೂರು, ಜ.13 : ಆಮ್ ಆದ್ಮಿ ಪಕ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಚುನಾವಣಾ ಪ್ರಣಾಳಿಕೆ ತಯಾರಿಸಲು ಬೊಂಬಾಟ್ ಬೆಂಗಳೂರು ಎಂಬ ವೆಬ್‌ಸೈಟ್ ಆರಂಭಿಸಲಿದೆ.

ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ದೆಹಲಿ ಮಾದರಿಯಲ್ಲಿ ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ, ಪ್ರಣಾಳಿಕೆಯನ್ನು ಜನರ ಸಹಕಾರದ ಮೂಲಕ ತಯಾರಿಸಲು ಮುಂದಾಗಿದೆ.

Aam Admi Party

ಬೆಂಗಳೂರಿನ ಸಮಸ್ಯೆ ಬಗ್ಗೆ ಜನರು ನೀಡುವ ಸಲಹೆಗಳನ್ನು ಆಧರಿಸಿ ಪ್ರಣಾಳಿಕೆ ರಚಿಸಲಾಗುತ್ತದೆ. ಆದ್ದರಿಂದ ಜನರ ಸಲಹೆಯನ್ನು ಸ್ವೀಕರಿಸಲು ಕರ್ನಾಟಕ ಆಮ್ ಆದ್ಮಿ ಘಟಕ 'ಬೊಂಬಾಟ್ ಬೆಂಗಳೂರು' ಹೆಸರಲ್ಲಿ ನೂತನ ವೆಬ್‌ಸೈಟ್ ಆರಂಭಿಸಲಿದೆ. [ಬಿಬಿಎಂಪಿ ಚುನಾವಣೆ ಮೇಲೆ ಆಮ್ ಆದ್ಮಿ ಕಣ್ಣು]

ಸಾರ್ವಜನಿಕ ಆಡಳಿತ, ಶಿಕ್ಷಣ, ಆರೋಗ್ಯ, ಕಸ ವಿಲೇವಾರಿ ಮುಂತಾದ ಬೆಂಗಳೂರು ನಗರದ ಸಮಸ್ಯೆಗಳ ಕುರಿತು ಈ ವೆಬ್‌ಸೈಟ್‌ ಮೂಲಕ ಜನರು ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಸಲಹೆಯನ್ನು ನೀಡಬಹುದಾಗಿದೆ. [ಬೆಂಗಳೂರಲ್ಲಿ ಕೇಜ್ರಿವಾಲ್ ಜತೆ ಊಟ ಮಾಡಿದ 200 ಜನ]

ಈ ಬಗ್ಗೆ ಆಮ್ ಆದ್ಮಿ ಪಕ್ಷ ಪ್ರಯತ್ನ ಆರಂಭಿಸಿದ್ದು, ಈ ಕುರಿತು ಚರ್ಚಿಸಲು ಜ.24ರಂದು ಸಭೆ ನಡೆಯಲಿದೆ. ಸಭೆಯ ನಂತರ ಈ ಕುರಿತು ಅಂತಿಮ ರೂಪುರೇಷೆ ತಯಾರಾಗುವ ಸಾಧ್ಯತೆ ಇದೆ. 198 ವಾರ್ಡ್‌ಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಆಪ್ ಪ್ರತಿಸ್ಪರ್ಧೆ ನೀಡಲಿದೆ.

ಅಂದಹಾಗೆ ಭಾನುವಾರ ಬೆಂಗಳೂರಿಗೆ ಬಂದಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಅವರು ರಾಜ್ಯದ ಆಪ್ ನಾಯಕರಿಗೆ ಈ ಬಗ್ಗೆ ಸಲಹೆಗಳನ್ನು ನೀಡಿರಬಹುದು. ರಾಜಕೀಯವನ್ನು ಮೊದಲು ಪಾಲಿಕೆ ಚುನಾವಣೆ ಮೂಲಕ ಆರಂಭಿಸಬೇಕು ಎಂದು ಕರ್ನಾಟಕ ಆಪ್ ನಾಯಕರು ಕೆಲವು ದಿನಗಳ ಹಿಂದೆ ಹೇಳಿದ್ದರು.

English summary
Karnataka Aam Admi Party (AAP) eyes set on the Bruhat Bangalore Mahanagara Palike (BBMP) elections scheduled in April 2015. AAP plans to fight BBMP polls in Bengaluru, creates website 'Bombat Bengaluru', invites suggestions form people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X