Get Updates
Get notified of breaking news, exclusive insights, and must-see stories!

ಲೋಕಾಯುಕ್ತ ಸಂಸ್ಥೆ ಘನತೆ ಉಳಿಸಲು ಎಎಪಿ ಕರೆ

ಬೆಂಗಳೂರು, ಜೂ.15: ಲೋಕಾಯುಕ್ತ ಸಂಸ್ಥೆ ಮೇಲಿನ ಘನತೆ ಹಾಗೂ ನಂಬಿಕೆಯನ್ನು ಪುನರ್ ಸ್ಥಾಪಿಸಲು ಬೇಕಾದ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸಿದೆ.

ಕರ್ನಾಟಕ ಲೋಕಾಯುಕ್ತ ಶಾಸನವು ಇಡೀ ದೇಶದಲ್ಲಿಯೇ ಮೊದಲ ಸ್ವತಂತ್ರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿತ್ತು. ಅದಲ್ಲದೇ ಕೇಂದ್ರದ ಲೋಕಪಾಲ್ ಹಾಗೂ ಇತರ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತಕ್ಕೆ ಬೇಡಿಕೆ ಬರಲು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅದ್ಭುತ ಕಾರ್ಯವೈಖರಿಯೂ ಕಾರಣವಾಗಿತ್ತು ಎಂದು ಆಮ್ ಆದ್ಮಿ ಪಕ್ಷದ ವಕ್ತಾರರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. [ಕರ್ನಾಟಕದಿಂದ ವರ್ಗಾವಣೆ ಬಯಸಿಲ್ಲ: ಸೋನಿಯಾ ನಾರಂಗ್]

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಜನರ ಮನಸ್ಸಿನಲ್ಲಿ ಅಪಾರವಾದ ನಂಬಿಕೆ ಹಾಗೂ ಘನತೆಯನ್ನು ಗಳಿಸಿಕೊಂಡಿತ್ತು.

Aam Aadmi Party-Karnataka appeal to GoK regarding Lokayukta

ಆದರೆ ಇತ್ತೀಚಿನ ಬೆಳವಣೆಗೆಗಳು ಹಾಗೂ ಲೋಕಾಯುಕ್ತ ಸಂಸ್ಥೆಯ ಒಳಗಿನಿಂದಲೇ ಕೇಳಿಬರುತ್ತಿರುವ ಆರೋಪಗಳು, ಲೋಕಾಯುಕ್ತ ಅಧಿಕಾರದ ದುರುಪಯೋಗ, ಜನರಲ್ಲಿ ಲೋಕಾಯುಕ್ತ ಸಂಸ್ಥೆ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಬಹುದಾಗಿದೆ. [ಐಪಿಎಸ್ ಅಧಿಕಾರಿಗಳು ಗಿಫ್ಟ್ ಕಂಡ್ರೆ ಬೆಚ್ಚುವರಯ್ಯ!]

ಆಮ್ ಆದ್ಮಿ ಪಾರ್ಟಿ-ಕರ್ನಾಟಕ, ಕರ್ನಾಟಕ ಲೋಕಾಯುಕ್ತಕ್ಕೆ ತಮ್ಮ ಕಾರ್ಯವೈಖರಿಯಿಂದ ಜನರ ನಂಬಿಕೆಯನ್ನು ಪುನಃ ಗಳಿಸುವತ್ತ ಗಮನ ಹರಿಸಬೇಕೆಂದೂ, ಹಾಗೂ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತದ ಹೊಣೆಗಾರಿಕೆಯನ್ನು ಬಲ ಪಡಿಸುವ ಕಾನೂನು ಬದಲಾವಣೆ ತರಬೇಕೇ ಹೊರತು ಅದರ ಅಧಿಕಾರವನ್ನು ಕುಗ್ಗಿಸುವ ಬದಲಾವಣೆಗಳನ್ನಲ್ಲ ಎಂದು ವಿನಂತಿಸಿಕೊಂಡಿದೆ.

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್, ಲೋಕಾಯುಕ್ತ ಎಡಿಜಿಪಿ ಪ್ರೇಮ್‌ಶೇಖರ್ ಮೀನಾ ಹಾಗೂ ರಿಜಿಸ್ಟರ್‌ಗೆ ರಹಸ್ಯ ಪತ್ರ ಬರೆದು, ಕೆಲ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+