ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಿಂದ ವರ್ಗಾವಣೆ ಬಯಸಿಲ್ಲ: ಸೋನಿಯಾ ನಾರಂಗ್

By Mahesh
|
Google Oneindia Kannada News

ಬೆಂಗಳೂರು, ಜೂ. 09: ಲೋಕಾಯುಕ್ತ ಸಂಸ್ಥೆಯಿಂದ ವರ್ಗಾವಣೆ ಮಾಡುವಂತೆ ಕೋರಿ ರಾಜ್ಯದ ಮುಖ್ಯಕಾರ್ಯದರ್ಶಿಗೆ ಯಾವುದೇ ಪತ್ರ ಬರೆದಿಲ್ಲ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸೋನಿಯಾ ನಾರಂಗ್ ಸ್ಪಷ್ಟಪಡಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯಿಂದ ವರ್ಗಾವಣೆ, ಕೇಂದ್ರ ಸರಕಾರದಲ್ಲಿ ನಿಯೋಜನೆ ಇತ್ಯಾದಿ ಬಗ್ಗೆ ಕೆಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ದೈನಿಕಗಳಲ್ಲಿ ಪ್ರಕಟವಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಲೋಕಾಯುಕ್ತ ಸಂಸ್ಥೆಗೆ ಬಂದ ನಂತರ ಬೇರೆ ಕಡೆಗೆ ನಿಯೋಜನೆ ಮಾಡುವಂತೆ ಎಂದಿಗೂ ಕೇಳಿಕೊಂಡಿಲ್ಲ ಎಂದು ಹೇಳಿದ್ದಾರೆ. [ಐಪಿಎಸ್ ಅಧಿಕಾರಿಗಳು ಗಿಫ್ಟ್ ಕಂಡ್ರೆ ಬೆಚ್ಚುವರಯ್ಯ!]

Lokayukta SP Sonia Narang denies report on seeking transfer from Karnataka

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್, ಲೋಕಾಯುಕ್ತ ಎಡಿಜಿಪಿ ಪ್ರೇಮ್‌ಶೇಖರ್ ಮೀನಾ ಹಾಗೂ ರಿಜಿಸ್ಟರ್‌ಗೆ ರಹಸ್ಯ ಪತ್ರ ಬರೆದು, ಕೆಲ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಕೋರಿದ್ದರು. [ಲಾಟರಿ ಕಿಂಗ್ ಪಿನ್ ಕೈ ಹಿಡಿದ ಪುಢಾರಿಗಳ ಗೆಳೆತನ ]

ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತರಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರವಿಲ್ಲ. ಆದರೆ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಸೂಚನೆ ಕೊಡಬಹುದು. ಅಂತಹ ಅಧಿಕಾರಿಯನ್ನು ವರ್ಗಾಯಿಸುವುದು ಇಲ್ಲವೇ ಅಲ್ಲಿಯೇ ಮುಂದುವರೆಸುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ.

English summary
Lokayukta SP Sonia Narang denies report on seeking transfer from Karnataka. Earlier Narang submitted a report on corruption in the agency. Lokayukta justice Y Bhaskar Rao held a meeting with ADGP Prem Shankar Meena and IGP Pranab Mohanty and proposed to have a dedicated phone line to lodge complaints against its officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X