Bengaluru: ಮನೆ ಬಳಿ ಮೇಯಲು ಬಂದ ದನಗಳಿಗೆ ಆಸಿಡ್‌ ಎರಚಿದ ಮಹಿಳೆ

ಬೆಂಗಳೂರು, ಡಿಸೆಂಬರ್‌ 11: ಮನೆಯ ಸಮೀಪದಲ್ಲಿ ಮೇಯಲು ಬಂದ ದನಗಳಿಗೆ ಮಹಿಳೆಯೊಬ್ಬರು ಆಸಿಡ್‌ ಎರಚಿ ಗಾಯ ಮಾಡಿರುವ ಘಟನೆ ಬೆಂಗಳೂರಿನ ಉತ್ತರ ಭಾಗದ ಗುಣಿ ಅಗ್ರಹಾರ ಎಂಬಲ್ಲಿ ನಡೆದಿದೆ. ಮೂಕ ಪ್ರಾಣಿಗಳ ಮೇಲೆ ಮಹಿಳೆಯ ಕ್ರೌರ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಣಿ ಅಗ್ರಹಾರ ನಿವಾಸಿ ಜೋಸೆಫ್‌ ಗ್ರೇಸ್‌ ಎನ್ನುವ ಮಹಿಳೆ ಮನೆಯ ಬಳಿ ಖಾಲಿ ಜಾಗವಿದ್ದು, ಈ ಭಾಗಕ್ಕೆ ದಿನ ನಿತ್ಯ ಹತ್ತಾರು ಹಸುಗಳು ಮೇಯಲು ಬರುತ್ತಿದ್ದವು. ಹಸುಗಳು ಬೀದಿ ಬದಿ ಎಸೆದ ಹಣ್ಣು ತರಕಾರಿಗಳನ್ನು ತಿನ್ನುತ್ತಾ, ಈ ಖಾಲಿ ಜಾಗದಲ್ಲಿದ್ದ ಹುಲ್ಲುಗಳನ್ನು ತಿಂದು ದಿನ ಈ ಭಾಗದಲ್ಲಿ ಮೇಯಲು ಹೋಗುತ್ತಿದ್ದವು. ಖಾಲಿ ಜಾಗದಲ್ಲಿ ಮೇಯಲು ಬರುತ್ತಿದ್ದ ಹಸುಗಳನ್ನು ಕಂಡ ಮಹಿಳೆ ಕೋಪದಿಂದ ಅವುಗಳ ಮೇಲೆ ಆಸಿಡ್‌ ಎರಚಿ ದಾಳಿ ನಡೆಸಿದ್ದಾರೆ.

A woman Throws Acid On Cattle That Came To Graze In Near Her House

ಜೋಸೆಫ್‌ ಗ್ರೇಸ್‌ ಕಳೆದ ಮೂರು ದಿನಗಳಿಂದ ಮನೆ ಬಳಿ ಬಂದ ಹಸುಗಳ ಮೇಲೆ ಮನಬಂದಂತೆ ಆಸಿಡ್‌ ಎರಚಿದ್ದು, ಸುಮಾರು ಹದಿನೈದಕ್ಕೂ ಹೆಚ್ಚು ಹಸುಗಳು ಗಂಭೀರ ಗಾಯಗೊಂಡಿವೆ. ಬಾತ್ ರೂಂ ಸ್ವಚ್ಛತೆಗೆ ಬಳಸಲಾಗುತ್ತಿದ್ದ ಆಸಿಡ್‌ಅನ್ನು ಹಸುಗಳ ಮೇಲೆ ಎರಚಲಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ರಾಜಣ್ಣ ಅವರಿಗೆ ಸೇರಿದ 2 ಹಸುಗಳು, ನಾಗಣ್ಣ ಎನ್ನುವವರಿಗೆ ಸೇರಿದ 4 ಹಸುಗಳು, ಪ್ರಕಾಶ್ ಎನ್ನುವವರಿಗೆ ಸೇರಿದ 3 ಹಸುಗಳು, ಗಂಗಮ್ಮ ಎನ್ನುವವರಿಗೆ ಸೇರಿದ 2 ಹಸುಗಳು, ಕೃಷ್ಣ ಎನ್ನುವವರಿಗೆ ಸೇರಿದ 3 ಹಸುಗಳು, ಶ್ರೀರಾಮ ಎನ್ನುವವರಿಗೆ ಸೇರಿದ 3 ಹಸುಗಳು ಹಾಗೂ ಮದನ್ ಎನ್ನುವವರಿಗೆ ಸೇರಿದ ಒಂದು ಹಸು ಗಂಭೀರ ಗಾಯಗೊಂಡಿವೆ.

ಸುಟ್ಟ ಗಾಯಗಳಿಂದ ಹಸುಗಳ ದೇಹದ ಭಾಗಗಳು ಸುಟ್ಟಿದ್ದು, ನೋವಿನಲ್ಲಿ ನರಳಾಡುತ್ತಿದೆ. ಮೂರು ದಿನಗಳಿಂದ ನೋವಿನಿಂದ ಹಾಲು ಕೊಡುತ್ತಿಲ್ಲ. ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ಹಾಲು ಮಾರಾಟವನ್ನೇ ನಂಬಿಕೊಂಡ ನಮ್ಮ ಜೀವನದ ಗತಿಯೇನು..? ನಮಗೆ ನ್ಯಾಯ ಕೊಡಿಸಿ. ನಮ್ಮ ಹಸುಗಳ ಈ ಸ್ಥಿತಿಗೆ ಕಾರಣವಾದ ಮಹಿಳೆ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಹಸುಗಳ ಮಾಲೀಕರು ಒಟ್ಟಾಗಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನು ಮೂಕ ಪ್ರಾಣಿಗಳ ಮೇಲೆ ಆಸಿಡ್‌ ಎರಚಿರುವ ಮಹಿಳೆ ತಾನು ಮಾಡಿರುವ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಮ್ಮ ಖಾಸಗಿ ಜಾಗ. ನಮ್ಮ ಮನೆಯ ಬಳಿಯೇ ಇರುವ ಖಾಸಗಿ ಜಾಗ. ಇಲ್ಲಿ ಹಸುಗಳನ್ನು ಮೇಯಲು ಬಿಡುವುದು ಅವುಗಳ ಮಾಲೀಕರ ತಪ್ಪು. ಹಸುಗಳು ಮನೆ ಬಳಿ ಬರಬಾರದು ಅಂತಾ ಹೀಗೆ ಮಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+