ಶಾಸಕರ ಪಿ.ಎ ಆಗೋದು ಇಷ್ಟು ಸುಲಭನಾ? ಕೆಲಸ ಮಾಡದಿದ್ರೂ ಸಿಕ್ಕಿದೆ ಕೈ ತುಂಬಾ ಸಂಬಳ

ಬೆಂಗಳೂರು, ಆಗಸ್ಟ್‌ 26; ಒಂದು ಕಡೆ ಓದಿಗೆ ತಕ್ಕ ಉದ್ಯೋಗ ಸಿಗ್ತಿಲ್ಲ ಎಂದು ಯುವಜನರು ಅಲೆಯುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ಕೆಲಸ ಪಡೀಬೇಕು ಅಂತ ಹಗಲು ರಾತ್ರಿ ಅನ್ನದೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದಿದ್ರೂ ಕೆಲಸ ಸಿಗೋ ಗ್ಯಾರಂಟಿ ಇಲ್ಲ. ಆದ್ರೆ ಚಾಲಾಕಿ ಮಹಿಳೆಯೊಬ್ಬರು ಶಾಸಕರ ಹೆಸರು ಬಳಸಿಕೊಂಡು, ವಿಧಾನಸಭಾ ಸಚಿವಾಲಯದಿಂದ ಪರ್ಸನಲ್‌ ಸೆಕ್ರೆಟರಿ (ಪಿ.ಎ) ಹುದ್ದೆಗೆ ನೇರವಾಗಿ ನೇಮಕಾತಿ ಆದೇಶ ಪಡೆದು ಸಂಬಳ ಕೂಡ ಪಡೆದಿದ್ದಾರೆ.

ಹೌದು, ರಾಮನಗರ ಮೂಲದ ಸ್ವಾಮಿ ಎಂಬಾತ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ. ಬಳಿಕ ಕೆಲ ರಾಜಕಾರಣಿಗಳ ಸಂಪರ್ಕ ಕೂಡ ಬೆಳೆಸಿಕೊಂಡಿದ್ದ ಈತ ತನ್ನ ಪತ್ನಿ ವಿನುತಾಗೆ ಕೆಲಸ ಕೊಡಿಸಬೇಕು ಅಂತಾ ಮಾಡಿರೋ ಪ್ಲ್ಯಾನ್‌ ಕೇಳಿದ್ರೆ ನೀವೆಲ್ಲ ಶಾಕ್‌ ಆಗ್ತೀರ.

A Woman Got a Job By Creating a Fake Letterhead In The Name Of MLA

ಅಷ್ಟಕ್ಕೂ ಈತ ಮಾಡಿದ್ದು ಏನಂದ್ರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ, ಅದಕ್ಕೆ ಶಾಸಕರ ನಕಲಿ ಸಹಿ ಕೂಡ ಹಾಕಿದ್ದಾನೆ. ಆ ಪತ್ರದಲ್ಲಿ ವಿನುತಾರನ್ನು ಆಪ್ತ ಸಹಾಯಕಿ ಹುದ್ದೆಗೆ ನೇಮಕ ಮಾಡಲು ಶಾಸಕರೇ ಪತ್ರ ಕಳಿಸಿದ್ದಾರೆ ಎನ್ನುವಂತೆ ಸ್ವಲ್ಪವೂ ಅನುಮಾನ ಬರದಂತೆ ಪ್ಲ್ಯಾನ್‌ ಮಾಡಿದ್ದ. ಮೊದಲಿಗೆ ಈ ಪತ್ರ ನೋಡಿದ ಸಚಿವಾಲಯದ ಅಧಿಕಾರಿಗಳು, ಇದು ಶಾಸಕರೇ ಕಳಿಸಿರುವ ಪತ್ರ ಎಂದು ನಂಬಿದ್ದು, ವಿನುತಾರನ್ನು ಪಿ.ಎ.ಹುದ್ದೆಗೆ ನೇಮಿಸಿ ಆದೇಶ ಕೂಡ ಹೊರಡಿಸಿದ್ದರು.

ಕಳೆದ ವರ್ಷದಿಂದ ವಿನುತಾ ಈ ಹುದ್ದೆಯಲ್ಲಿದ್ದು, ಕೆಲಸಕ್ಕೆ ಬಾರದೆಯೇ ಒಳ್ಳೆಯ ಸಂಬಳವನ್ನೂ ಪಡೆದುಕೊಂಡಿದ್ದಾರೆ. ಬಳಿಕ ನಾನು ಗರ್ಭಿಣಿಯಾಗಿದ್ದು, ಕೆಲಸದಿಂದ ಬಿಡುಗಡೆ ಮಾಡಿ ಎಂದು ವಿನುತಾ ಮತ್ತೊಂದು ಪತ್ರ ಬರೆದಿದ್ದರು. ಆಗ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈಕೆ ಮಾಡಿರುವ ಗೋಲ್‌ಮಾಲ್‌ ಬೆಳಕಿಗೆ ಬಂದಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರೂ ನಾನು ಆ ರೀತಿಯ ಯಾವುದೇ ಪತ್ರ ಕಳಿಸಿಲ್ಲ ಎಂಬ ವಿಚಾರವನ್ನು ಸಚಿವಾಲಯದ ಗಮನಕ್ಕೆ ತಂದಿದ್ದು, ಬಳಿಕ ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಅವರು ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

A Woman Got a Job By Creating a Fake Letterhead In The Name Of MLA

ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದರ ಹಿಂದಿದ್ದ ಮಾಸ್ಟರ್‌ಮೈಂಡ್‌ ರಾಮನಗರದ ಸ್ವಾಮಿ ಹಾಗೂ ಮತ್ತೊಬ್ಬ ಆರೋಪಿ ಅಂಜನ್‌ ಕುಮಾರ್‌ ಎಂಬುವವರನ್ನು ಅರೆಸ್ಟ್‌ ಮಾಡಿದ್ದಾರೆ. ಸ್ವಾಮಿಯನ್ನು ವಿಚಾರಣೆ ನಡೆಸಿದಾಗ ಶಾಸಕ ಎಸ್‌.ರಘು ಅವರ ಹೆಸರಿನಲ್ಲೂ ಇದೇ ರೀತಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ ಅಂಜನ್‌ ಕುಮಾರ್‌ಗೆ ನೌಕರಿ ಕೊಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಕೆಲಸ ಗಿಟ್ಟಿಸಿಕೊಂಡು ಬಿಟ್ಟಿ ಸಂಬಳ ಪಡೆದುಕೊಂಡಿರುವ ವಿನುತಾಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ವಿಧಾನಸೌಧದಲ್ಲಿ ಈ ರೀತಿ ಬಿಟ್ಟಿ ಕೆಲಸ ಗಿಟ್ಟಿಸಿಕೊಳ್ಳುವ ವ್ಯವಸ್ಥೆ ಇದೆಯಾ, ಇದರ ಹಿಂದೆ ದೊಡ್ಡ ಜಾಲ ಇರುವ ಶಂಕೆಯೂ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+