ಡಿಕೆ ಸುರೇಶ್‌ಗೆ ಮತದಾನ ಹಾಕಿದ ವಿಡಿಯೋ ಮಾಡಿ ಸ್ಟೇಟಸ್ ಇಟ್ಟ ಭೂಪ
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ಇಂದು ನಡೆಯಿತು. ಮತದಾನ ವೇಳೆ ತಾನು ಯಾರಿಗೆ ಮತ ಹಾಕಿದ್ದೇನೆ ಎಂಬುದರ ವಿಡಿಯೋ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.
ಹೌದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿಕೆ ಸುರೇಶ್ ಅವರು ಕಣಕ್ಕಿಳಿದಿದ್ದರು. ಇವರಿಗೆ ಇಂದು ಶುಕ್ರವಾರ (ಏಪ್ರಿಲ್ 26) ರಂದು ಮತದಾನ ಮಾಡಿದ ವ್ಯಕ್ತಿಯೊಬ್ಬರು ಅದನ್ನು ವಿಡಿಯೋ ಮಾಡಿದ್ದಾರೆ. ಅಚ್ಚರಿ ಎಂದರೆ, ಈಗ ವಿಡಿಯೋ ಮಾಡುವವರೆಗೂ ಮತಗಟ್ಟೆಯಲ್ಲಿದ್ದ ಚುನಾವಣಾಧಿಕಾರಿಗಳು ಏನು ಮಾಡುತ್ತಿದ್ದರು ಎಂಬುದೇ ಪ್ರಶ್ನೆಯಾಗಿದೆ.

ಮತಗಟ್ಟೆಗಳಲ್ಲಿ ಮೊಬೈಲ್ ತರಬಾರದು ಎಂಬ ಸೂಚನೆ ಇದೆ. ಆದರೆ ಈ ವ್ಯಕ್ತಿ ಎಲ್ಲರಂತೆ ನೇರವಾಗಿ ಮತಗಟ್ಟೆಗೆ ತೆರಳಿ ಡಿಕೆ ಸುರೇಶ್ ಭಾವಚಿತ್ರ ಪಕ್ಷದ ಚಿಹ್ನ ಇರುವ ಇವಿಎಂ ಆಯ್ಕೆ ಬಟನ್ ಮೇಲೆ ಒತ್ತಿದ್ದಾನೆ. ಕೂಡಲೇ ಬೀಪ್ ಸೌಂಡ್ ಬಂದು, ಇಂಥವರಿಗೆ ವೋಟ್ ಮಾಡಿದ್ದಾಗಿ ಸಣ್ಣ ಕೆಂಪು ಲೈಟ್ ಕಾಣಿಸುತ್ತದೆ. ಇದೆಲ್ಲವು ಆತನ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ.
ಈ ಮತದಾರ ತಾನು ಮತದಾನ ಮಾಡಿದ ವಿಡಿಯೋ ಮಾಡಿದ್ದಲ್ಲದೇ ಅದನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದಾಗಿ ವರದಿ ಆಗಿದೆ. ಇಷ್ಟೆಲ್ಲ ಆದರೂ ಮತಗಟ್ಟೆಯಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಏನು ಮಾಡುತ್ತಿದ್ದು?. ಇಷ್ಟು ನಿರ್ಲಕ್ಷ್ಯ ವಹಿಸಿದ್ದು, ಯಾಕೆ ಎಂಬುದು ತಿಳಿಯಬೇಕಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ 2019 ರಕ್ಕಿಂತ ಹೆಚ್ಚು ಮತದಾವಾಗಿ. ಆಗ 64.4 ರಷ್ಟು ಮತದಾನವಾಗಿತ್ತು. ಈ ಭಾರಿ ಹೆಚ್ಚು 67.29ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಮತದಾನ ನಿರೀಕ್ಷಿತ ಮಟ್ಟ ಮುಟ್ಟಿಲ್ಲ ಎನ್ನಲಾಗಿದೆ.












Click it and Unblock the Notifications