ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ನಾಲ್ವರ ದುರ್ಮರಣ
ಬೆಂಗಳೂರು, ಜನವರಿ 8: ರಾಜಧಾನಿ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವುದು ಇತ್ತೀಚೆಗೆ ಸಾಮಾನ್ಯವಾಗಿದ್ದು, ಶುಕ್ರವಾರ ರಾತ್ರಿ ಬೆಂಗಳೂರು ಹೊರವಯದಲ್ಲಿರುವ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ.
ಭೀಕರ ಸರಣಿ ಅಪಘಾತದಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಯುವತಿಯ ಮಾಹಿತಿ ಲಭ್ಯವಾಗಬೇಕಿದೆ.
ಮತ್ತೊಂದು ಕ್ವಾಲಿಸ್ ಕಾರಲ್ಲಿದ್ದ ಆರು ಜನರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರಿಂದ ಸ್ಥಳದಲ್ಲಿ ಜಖಂಗೊಂಡು ನಿಂತಿದ್ದ ವಾಹನಗಳ ತೆರವು ಕಾರ್ಯ ನಡೆದಿದೆ.

ಕೆ.ಎಸ್. ಲೇಔಟ್ ಟ್ರಾಫಿಕ್ ಪಿಎಸ್ ವ್ಯಾಪ್ತಿಯ ಪುರವಂಕರ ಅಪಾರ್ಟ್‌ಮೆಂಟ್ ಬಳಿಯ ನೈಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ತಮಿಳುನಾಡು ನೋಂದಣಿ ಟ್ರಕ್ ಕೇರಳ ನೋಂದಣಿ ಹೊಂದಿರುವ ವ್ಯಾಗನ್ R ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಟ್ರಕ್, ಕಾರುಗಳು ಮತ್ತು ಕಂಟೈನರ್‌ಗಳ ಸರಣಿ ಅಪಘಾತ ಸಂಭವಿಸಿದೆ.
ಅತಿಯಾದ ವೇಗದಿಂದಾಗಿ ಸರಣಿ ಅಪಘಾತಗಳು ಸಂಭವಿಸಿ 2 ಕ್ವಾಲಿಸ್ ಮತ್ತು ಸ್ವಿಫ್ಟ್ ಕಾರುಗಳು ಹಾನಿಗೊಳಗಾಗಿವೆ ಮತ್ತು 3-4 ಕಂಟೈನರ್ ವಾಹನಗಳು ಹಾನಿಗೊಳಗಾಗಿವೆ.

Recommended Video
ಈ ಅಪಘಾತದಲ್ಲಿ ವ್ಯಾಗನ್ ಆರ್ ವಾಹನದಲ್ಲಿದ್ದ ಎಲ್ಲಾ ನಾಲ್ವರು (2 ಪುರುಷರು ಮತ್ತು 2 ಮಹಿಳೆಯರು) ಸಾವನ್ನಪ್ಪಿದ್ದಾರೆ. 4 ಕ್ವಾಲಿಸ್ ವಾಹನದಲ್ಲಿದ್ದವರಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಿಫ್ಟ್ ವಾಹನದಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.












Click it and Unblock the Notifications