ಬೆಂಗಳೂರಿಲ್ಲಿ ವಿದ್ಯಾರ್ಥಿಗೆ ಹಲ್ಲುದುರಿಸಿದ ಶಿಕ್ಷಕಿ-ಎಫ್‌ಐಆರ್ ದಾಖಲು
ಬೆಂಗಳೂರು, ನವೆಂಬರ್, 09: ಶಿಕ್ಷಕಿಯೊಬ್ಬಳು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಹಲ್ಲುದುರುವಂತೆ ಹೊಡೆದಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಹಾಗಾದರೆ ಮುಂದೇನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
6ನೇ ತರಗತಿ ವಿದ್ಯಾರ್ಥಿ ಅಶ್ವಿನ್ (11) ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿ ಆತನ ತಂದೆ ಅನಿಲ್ ಕುಮಾರ್ ವಿ.ಪೈ ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದಾರೆ.

ನವೆಂಬರ್ 7ರಂದು ಅಶ್ವಿನ್ ಜೊತೆ ಇತರ ವಿದ್ಯಾರ್ಥಿಗಳು ತರಗತಿಯಲ್ಲಿ ಗೋಸ್ಮಿಕ್ (ಗಮ್) ಮತ್ತು ನೀರು ಚೆಲ್ಲುತ್ತಾ ಆಟ ಆಡುತ್ತಿದ್ದರು. ಇದೇ ವಿಚಾರ ಇಟ್ಟುಕೊಂಡು ಶಿಕ್ಷಕಿ ಅಸ್ಮತ್ ಅವರಿಗೆ ತಿಳಿಸಲು ಅಶ್ವಿನ್ ತೆರಳಿದ್ದಾರೆ. ಇದೇ ವೇಳೆ ಅಶ್ವಿನ್ ಮುಖಕ್ಕೆ ಶಿಕ್ಷಕಿ ಕೋಲಿನಿಂದ ಹೊಡೆದಿದ್ದಾರೆ. ಈ ವೇಳೆ ಹಲ್ಲು ಮುರಿದಿದ್ದು, ನಂತರ ಶಾಲಾ ಆಡಳಿತ ಮಂಡಳಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಪೋಷಕರಿಗೆ ವಿಚಾರ ತಿಳಿಸಿ, ಕ್ಷಮೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಶಿಕ್ಷಕಿಯ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದೇವೆ ಮತ್ತು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
5 ಬಾರಿ ಇಂಜೆಕ್ಷನ್ ಚುಚ್ಚಿದ ವೈದ್ಯ & ನರ್ಸ್: ಸಾಮಾನ್ಯವಾಗಿ ವೈದ್ಯರು ಕುಡುಕರಿಗೆ ಮದ್ಯಪಾನ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಅಂತಾ ಸಲಹೆ ನೀಡುವುದನ್ನು ನೋಡಿದ್ದೇವೆ. ಆದರೆ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಎಂಬಂತೆ ಈ ನಿಯಕ್ಕೆ ತದ್ವಿರುದ್ಧವಾಗಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ವೈದ್ಯ & ನರ್ಸ್ ಕುಡಿದ ಮತ್ತಿನಲ್ಲೇ 4-5 ಬಾರಿ ಇಂಜೆಕ್ಷನ್ ನೀಡಿರುವ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಬಳಿ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಇಂಜೆಕ್ಷನ್ ಕೊಡಿಸಿಕೊಂಡ ಯುವತಿ ಬಳಿಕ ಮಾಡಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲೇ ವೈದ್ಯ ಮತ್ತು ನರ್ಸ್ ಯುವತಿ ಜೀವಕ್ಕೆ ಕುತ್ತು ತರುತ್ತಿದ್ದರು. ನವೆಂಬರ್ 3ರಂದು ಜ್ವರದಿಂದ ಬಳುತ್ತುದ್ದ ಯುವಯಿ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ವೈದ್ಯ ಪ್ರದೀಪ್ ಮತ್ತು ನರ್ಸ್ ಮಹೇಂದ್ರ ಯುವತಿಯ ಕೈಹಿಡಿದು ಒಂದು ಇಂಜೆಕ್ಷನ್ ನೀಡಿದ್ದಾರೆ. ಬಳಿಕ ವೈದ್ಯ ಪ್ರದೀಪ್ ಕರೆದು ಯುವತಿಗೆ ಮತ್ತೊಂದು ಇಂಜೆಕ್ಷನ್ ನೀಡುತ್ತಾನೆ.
ಅಷ್ಟೇ ಅಲ್ಲದೆ, ಮುಂದುವರೆದು 4 ರಿಂದ 5 ಬಾರಿ ಇಂಜೆಕ್ಷನ್ ನೀಡಿದ್ದಾರೆ. ಮೈ ಕೈಗೆ ನಾಲ್ಕೈದು ಇಂಜೆಕ್ಷನ್ ಹಾಕಿದ್ದರಿಂದ ಯುವತಿ ಗಾಬರಿಗೊಂಡಿದ್ದಾರೆ. ತಕ್ಷಣ ಕುಡಿದು ಬಂದಿದ್ದೀರಾ ಅಂತಾ ಯುವತಿ ಪ್ರಶ್ನಿಸಿದ್ದಕ್ಕೆ ವೈದ್ಯ ಅಲ್ಲಿಂದ ಪರಾರಿ ಆಗಿದ್ದಾನೆ. ಇದೇ ವೇಳೆ ಕುಡಿದು ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪ ಸಹ ಕೇಳಿಬಂದಿದೆ. ಬಳಿಕ ನರ್ಸ್ ಮಹೇಂದ್ರನನ್ನು ಯುವತಿಯ ಪೋಷಕರು ತರಾಟೆಗೆ ತೆಗೆದುಕೊಂಡಿದ್ದು, ಅವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ.












Click it and Unblock the Notifications