ವಿಶ್ವ ನೃತ್ಯ ದಿನ: ಕೊರೋನಾ ಕಾಲದಲ್ಲೊಂದು ಕುಣಿತ
ಬೆಂಗಳೂರು, ಏಪ್ರಿಲ್ 29: ಇಡೀ ಜಗತ್ತೇ ಕೊರೋನಾ ವೈರಾಣು ಹಾವಳಿಯಿಂದ ನಲುಗಿಹೋಗಿರುವ ಈ ಸಂದರ್ಭದಲ್ಲಿ ಕೊರೋನಾ ನಿರ್ಮೂಲನೆಗಾಗಿ ಸಾಮಾಜಿಕ ಅಂತರ, ಲಾಕ್ ಡೌನ್ ಪಾಲನೆ ಕುರಿತಂತೆ ಜಾಗೃತಿ ಮೂಡಿಸುವ ಹಲವು ಕಿರುಚಿತ್ರಗಳನ್ನು ಸೃಜನಶೀಲ ಮನಸ್ಸುಗಳು ತಯಾರಿಸುತ್ತಿವೆ.
ಈ ಸರಣಿಯಲ್ಲಿ ಮುಖ್ಯವಾದುದು 'DANCE IN THE TIME OF LOCKDOWN... ಕೊರೋನಾ ಕಾಲದಲ್ಲೊಂದು ಕುಣಿತ'. ಲಾಕ್ ಡೌನ್ ಅವಧಿಯಲ್ಲಿ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ತೆರಳುವ ನೃತ್ಯಪಟು ಯುವಕನೊಬ್ಬನ ಕಥಾವಸ್ತುವನ್ನು ಕಿರುಚಿತ್ರ ಒಳಗೊಂಡಿದೆ. ಕೊರೋನಾದಿಂದಾಗಿ ಮಾನಸಿಕ ಆತಂಕ, ಖಿನ್ನತೆ ಮುಂತಾದವುಗಳಿಗೆ 'ಯೋಗ' ಉತ್ತಮ ಪರಿಹಾರ ಎಂಬ ಸಂದೇಶವೂ ಚಿತ್ರದಲ್ಲಿದೆ.
'ಮೆಣಸಿನಕಾಯ್ ಮೂವೀಸ್' ಸಂಸ್ಥೆ ನಿರ್ಮಿಸಿರುವ 12 ನಿಮಿಷ ಅವಧಿಯ ಈ ಕಿರುಚಿತ್ರದಲ್ಲಿ ಮೂವರು ಪಾತ್ರಧಾರಿಗಳಿದ್ದು, ಇವರೂ ಸೇರಿದಂತೆ ನಿರ್ದೇಶನ ತಂಡದ ಸದಸ್ಯರೆಲ್ಲಾ ಪ್ರತ್ಯೇಕವಾಗಿ ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೇ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಮನೆಯ ಕಾಂಪೌಂಡ್ ದಾಟಿಲ್ಲ. ಪಾತ್ರಧಾರಿಗಳ ಕುಟುಂಬ ಸದಸ್ಯರು ಮೊಬೈಲ್ ಫೋನ್ ಕ್ಯಾಮರಾದಲ್ಲೇ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಏಪ್ರಿಲ್ 29ರ ವಿಶ್ವ ನೃತ್ಯ ದಿನದ ಅಂಗವಾಗಿ ಈ ಚಿತ್ರ ತಯಾರಿಸಿರುವುದು ಮತ್ತೊಂದು ವಿಶೇಷ. ಚಿತ್ರಕಥೆ, ಸಂಕಲನ ಜತೆಗೆ ನಿರ್ದೇಶನ ವೀರನಾರಾಯಣ ಅವರದ್ದು. ಸಹಾಯಕ ನಿರ್ದೇಶನ ರಮ್ಯ ಜಿ.ಎಸ್. ಮತ್ತು ಇಂಗ್ಲಿಷ್ ಉಪಶೀರ್ಷಿಕೆ ವೆಂಕಟೇಶ ಬೆಳಗುಲಿ. ನಟವರ್ಗದಲ್ಲಿ ಧನಂಜಯ ಟಿ.ಆರ್., ಕೃಪಾಶ್ರೀ ವಿ ಮತ್ತು ರಘುನಾಥ್ ಎಂ.ಎಸ್. ಇದ್ದಾರೆ. ಚಿತ್ರದ ಲಿಂಕ್ ಇಲ್ಲಿದೆ
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications