ಎ-ಸ್ಯಾಟ್ ಯಶಸ್ಸು ಮೋದಿ ಮಾಡಿದ ಸಾಧನೆಯಾ?: ಎಚ್‌ಡಿಕೆ ವ್ಯಂಗ್ಯ
ಬೆಂಗಳೂರು, ಮಾರ್ಚ್ 27: ಎ-ಸ್ಯಾಟ್ ಪ್ರಯೋಗ ಯಶಸ್ವಿ ಆಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದೇನು ಮೋದಿ ಮಾಡಿದ ಸಾಧನೆಯಾ ಎಂದು ವ್ಯಂಗ್ಯ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅದೇನು ಮಹಾ ತಮ್ಮದೇ ಸಾಧನೆ ಎಂಬಂತೆ ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ವಿಜ್ಞಾನಿಗಳು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಈ ರೀತಿಯ ಕಾರ್ಯಗಳು ವಾಡಿಕೆಯಂತೆ ಆಗುತ್ತಲೇ ಇರುತ್ತವೆ. ಅದನ್ನು ಚುನಾವಣೆ ಸಮಯದಲ್ಲಿ ಮೋದಿ ಅವರು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಂಡು ಮತಗಳಿಗೆ ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಅದನ್ನೇನು ನರೇಂದ್ರ ಮೋದಿ ಅವರು ಹಾರಿಸಿದ್ದಾ, ಅದೇನು ದೊಡ್ಡ ಸಾಧನೆಯಾ, ದೇಶದಲ್ಲಿ ವಿಜ್ಞಾನಿಗಳ ಪಡೆ ಇದೆ, ದೇಶದಲ್ಲಿ ಯಾರೇ ಪ್ರಧಾನಿಗಳಿರಲಿ ವಿಜ್ಞಾನಿಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತಲೇ ಬಂದಿದ್ದಾರೆ. ಯಾರೋ ಮಾಡಿದ ಕಾರ್ಯವನ್ನು ತಮ್ಮದೆಂದು ಹೇಳಿ ಮೋದಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.











Click it and Unblock the Notifications