ಗಣಪತಿ ಬಪ್ಪಾ.. ಪೊಲೀಸರ ಗಾಡಿಗೆ ನೀನ್ಯಾಕ್ ಹೋದ್ಯಪ್ಪ..? ಫೋಟೋ ವೈರಲ್
ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಯು ದೇಶದ ದೊಡ್ಡ ಹಬ್ಬಗಳಲ್ಲಿ ಒಂದು. ಎಂದಿನಂತೆ ಗಣೇಶೋತ್ಸವವನ್ನು ಅದ್ಧೂರಿಯಾಗಿ ಮಾಡಿ, ಐದಾರು ದಿನಗಟ್ಟಲೆ ಮೂರ್ತಿ ಪ್ರತಿಷ್ಠಾಪಿಸಿ, ಕೊನೆಗೆ ನೀರಿನಲ್ಲಿ ವಿಸರ್ಜಿಸುವುದು ವಾಡಿಕೆ. ಆದರೆ ಎಲ್ಲರ ವಿಘ್ನ ನಿವಾರಿಸುತ್ತಿದ್ದ ವಿನಾಯಕನಿಗೆ ಈ ಬಾರಿಯ ಹಬ್ಬ ಶಕುನ ತಂದೊಟ್ಟಿದೆ.
ಗಣೇಶ ಕೂರಿಸಲು ಪೊಲೀಸರಿಂದ ಅನುಮತಿ ಪಡೆಯಬೇಕು ಎನ್ನುವ ನಿಯಮವೇನೋ ಇದೆ. ಆದರೆ, ಕೈದಿಗಳಂತೆ ಪೊಲೀಸ್ ವ್ಯಾನ್ ಹತ್ತುವ ನಿಯಮವೂ ಇದೆಯಾ ಎನ್ನುವ ಅನುಮಾನ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದೆ. ಪೆಂಡಾಲೋ ಅಥವಾ ಮೆರವಣಿಗೆಯಲ್ಲೋ ಇರಬೇಕಾದ ಗಣಪ ಪೊಲೀಸ್ ವ್ಯಾನ್‌ನಲ್ಲಿ ಕುಳಿತಿರುವ ಫೋಟೋವೊಂದು ಸಂಚನಲ ಸೃಷ್ಟಿಸಿದೆ.

ಇದರ ಬೆನ್ನು ಹತ್ತಿದಾಗ ಒಂದು ದೊಡ್ಡ ಕಥೆಯೇ ತೆರೆದುಕೊಂಡಿದೆ. ನೆಮ್ಮದಿಯಾಗಿ ನೀರಿನಲ್ಲಿ ವಿಸರ್ಜನೆಗೊಳ್ಳಬೇಕಿದ್ದ ಗಣಪನ ಪೊಲೀಸರ ವ್ಯಾನ್‌ನಲ್ಲಿ ಏನು ಮಾಡುತ್ತಿದ್ದಾನೆ? ಎಂದೇ ಈ ಫೋಟೋ ಕಂಡವರು ಕೇಳುತ್ತಿರುವ ಪ್ರಶ್ನೆ. ಅಷ್ಟಕ್ಕೂ ವಿನಾಯಕ ಏನಾದ್ರೂ ತಪ್ಪು ಮಾಡಿದ್ನಾ? ಅದಕ್ಕೇನಾದ್ರೂ ಪೊಲೀಸರು ತಮ್ಮ ಗಾಡಿ ಹತ್ತಿಸಿದ್ರಾ? ಎಂದೂ ಕೆಲವರು ತಮಗನಿಸಿದ್ದನ್ನು ಹೇಳಿಕೊಳ್ಳುತ್ತಿದ್ದಾರೆ.
ಗಣೇಶನ ಮೂರ್ತಿಯು ಕೈದಿಗಳಂತೆ ಪೊಲೀಸರು ವ್ಯಾನ್‌ನಲ್ಲಿರುವ ಫೋಟೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಕೊನೆಗೆ ಗೊತ್ತಾಗಿದ್ದು, ಇದು ಪ್ರತಿಭಟನಾಕಾರರಿಂದ ವಶಪಡಿಸಿಕೊಂಡಿರುವ ಗಣಪ ಎಂದು. ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಖಂಡಿಸಿ ಬೆಂಗಳೂರಿನಲ್ಲಿ ಇಂದು ಕೆಲ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ತಮ್ಮೊಂದಿಗೆ ಗಣೇಶನನ್ನೂ ಕರೆತಂದಿದ್ದರು.
ಪೊಲೀಸರು ಮೊದಲಿಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅವರೊಟ್ಟಿಗಿದ್ದ ಗಣೇಶ ಮೂರ್ತಿಯನ್ನೂ ಎಲ್ಲಿಡುವುದು ಎಂದು ತೋಚದೆ, ಪೊಲೀಸ್ ವ್ಯಾನ್‌ನ ಸೀಟಿನ ಮೇಲೆ ಕೂರಿಸಿಬಿಟ್ಟಿದ್ದಾರೆ. ಇದನ್ನು ಅಲ್ಲಿದ್ದವರು ಫೋಟೋ ಹಿಡಿದು ಶೇರ್ ಮಾಡಿದ್ದು, ವೈರಲ್ ಆಗಿದೆ.

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಈ ಪ್ರಸಂಗ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಹಂಚಿಕೊಂಡಿರುವ ಪುನೀತ್ ಕೆರೆಹಳ್ಳಿ, ʼಈ ಗುಲಾಮಗಿರಿಯ ಹಿಟ್ಲರ್ ಸರ್ಕಾರ ನಮ್ಮ ಗಣೇಶನನ್ನು ಬಂಧಿಸುವ ಮೂಲಕ ನಾಡಿನಲ್ಲಿ ಇರುವುದು ಕಾಂಗ್ರೆಸ್‌ನ ಮುಲ್ಲಾ ಸರ್ಕಾರ ಎಂದು ಸಾಬೀತು ಪಡಿಸಿತು! ಎಂದಿದ್ದಾರೆ.
ಈ ಗುಲಾಮಗಿರಿಯ ಇಟ್ಲರ್ ಸರ್ಕಾರ ನಮ್ಮ ಗಣೇಶನನ್ನು ಬಂಧಿಸುವ ಮೂಲಕ ನಾಡಿನಲ್ಲಿ ಇರುವುದು ಕಾಂಗ್ರೆಸ್ಸ್ ನ ಮುಲ್ಲಾ ಸರ್ಕಾರ ಎಂದು ಸಾಬೀತು ಪಡಿಸಿತು! ನಾಗಮಂಗಲದಲ್ಲಿ ಗಣೇಶ ವಿಸರ್ಜನ ಮೆರವಣಿಗೆಯಲ್ಲಿ ಹಿಂದೂಗಳ ಮೇಲೆ ನೆಡೆದ ಘಟನೆ ಖಂಡಿಸಿ ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಹೋರಾಟ ಹಮ್ಮಿಕೊಂಡಿದ್ದೆವು ಅದರೆ ಜಿಹಾದಿಗಳ ಅಂಡು ತೊಳೆಯುವ ಸರ್ಕಾರ… pic.twitter.com/QwIIgPorjK
— Puneeth Kerehalli (@Puneeth74353549) September 13, 2024
ʼನಾಗಮಂಗಲದಲ್ಲಿ ಗಣೇಶ ವಿಸರ್ಜನ ಮೆರವಣಿಗೆಯಲ್ಲಿ ಹಿಂದೂಗಳ ಮೇಲೆ ನೆಡೆದ ಘಟನೆ ಖಂಡಿಸಿ ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಹೋರಾಟ ಹಮ್ಮಿಕೊಂಡಿದ್ದೆವು. ಆದರೆ ಜಿಹಾದಿಗಳ ಓಲೈಸುವ ಸರ್ಕಾರ ಹೋರಾಟಕ್ಕೆ ಅವಕಾಶ ನೀಡದೆ ಹಿಂದೂ ಹೋರಾಟಗಾರರನ್ನು ಬಂಧಿಸಿ ನಮ್ಮ ವಿರುದ್ಧ FIR ದಾಖಲು ಮಾಡಿತು ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಪಿ.ಸಿ.ಮೋಹನ್, ಕಾಂಗ್ರೆಸ್ ಹಿಂದೂಗಳನ್ನು ಏಕೆ ದ್ವೇಷಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಬುಧವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಸದ್ಯ ಈ ಘಟನೆಗೆ ರಾಜ್ಯದೆಲ್ಲೆಡೆ ಖಂಡನೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮೊನ್ನೆ ಘಟನೆಯಾದಾಗಲೂ ಕೂಡ ನಾಗಮಂಗಲದ ಗಣೇಶೋತ್ಸವದ ಯುವಕರು ಕಲ್ಲು ತೂರಾಟ ಖಂಡಿಸಿ, ಗಣಪನ ಮೂರ್ತಿ ಠಾಣೆ ಎದುರು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಇದೇ ಘಟನೆಯು ಗಣಪನನ್ನು ಪೊಲೀಸ್ ವ್ಯಾನ್ ಹತ್ತಿಸುವವರೆಗೂ ಕರೆತಂದಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications