ಮಗುವನ್ನು ತಡವಾಗಿ ಮನೆಗೆ ತಲುಸಿದ ಶಾಲೆ ವಿರುದ್ಧ ದೂರು ಕೊಟ್ಟ ಪೋಷಕರು
ಬೆಂಗಳೂರು, ಜೂನ್ 6: ನಗರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ 5ನೇ ತರಗತಿಯ ಬಾಲಕಿಯನ್ನು ತಡವಾಗಿ ಮನೆಗೆ ಬಿಟ್ಟಿದ್ದಕ್ಕಾಗಿ ಶಾಲೆಯ ವಿರುದ್ಧ ಪೋಷಕರು ರಾಜ್ಯ ಮಕ್ಕಳ ಹಕ್ಕುಗಳ ಸಂಸ್ಥೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಕ್ರಿಸಾಲಿಸ್ ಹೈ ಶಾಲೆಯ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (KSCPCR) ನೀಡಿದ ದೂರಿನಲ್ಲಿ ಪೋಷಕರು ತಮ್ಮ ಮಗಳು ಇರುವಿಕೆಯ ಬಗ್ಗೆ ಸಂವಹನ ಕಳೆದುಕೊಂಡು ಒಂದು ಗಂಟೆ ಅನುಭವಿಸಿದ ಯಾತನೆಯನ್ನು ವಿವರಿಸಿದ್ದಾರೆ.

ಶಾಲೆಯವರು ಗುರುವಾರ ಮಧ್ಯಾಹ್ನ 3.20ರ ಸುಮಾರಿಗೆ ಬಾಲಕಿಯನ್ನು ಮನೆಗೆ ಬಿಡಬೇಕಿತ್ತು. ಆದರೆ ಆಕೆ ಮನೆಗೆ ಬಂದಿರಲಿಲ್ಲ. ಮಧ್ಯಾಹ್ನ 3 ಗಂಟೆಯಿಂದ ನಾವು ಡ್ರಾಪ್ ಪಾಯಿಂಟ್‌ನಲ್ಲಿ ಕಾಯುತ್ತಿದ್ದೆವು. ಆದರೆ ಶಾಲೆಯವರು ಸಂಜೆ 4.40 ರ ಸುಮಾರಿಗೆ ನಮ್ಮ ಮಗಳನ್ನು ಡ್ರಾಪ್ ಮಾಡಿದರು. ಇದರಿಂದ ನಾವು ಆತಂಕಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ.
ತಮ್ಮ ಮಗಳಿಂದ ಶಾಲೆಯ ಸಿಬ್ಬಂದಿ ರಸ್ತೆಯ ಇನ್ನೊಂದು ಬದಿಯಲ್ಲಿ ಬಸ್‌ನಿಂದ ಇಳಿಯುವಂತೆ ಸೂಚಿಸಿದ್ದರು. ಆದರೆ ಅವಳು ನಿರಾಕರಿಸಿದಳು. ತಮ್ಮ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ ಅವಳನ್ನು ಶಿಕ್ಷಿಸಲು ಬಯಸಿದ ಬಸ್ಸಿನಲ್ಲಿದ್ದ ಸಿಬ್ಬಂದಿ ಅವರು ಎಲ್ಲಾ ಮಕ್ಕಳನ್ನು ಬಿಡುವವರೆಗೂ ಅವಳನ್ನು ಕಾಯುವಂತೆ ಮಾಡಿದರು ಎಂದು ಪೋಷಕರು ಡಿಎಚ್‌ಗೆ ಹೇಳಿಕೆ ನೀಡಿದ್ದಾರೆ.
ಶಾಲಾ ಸಿಬ್ಬಂದಿ ನಮ್ಮ ಮಗಳನ್ನು ಇಳಿಯಲು ಹೇಳಿದ ಸ್ಥಳವು ನಾವು ತಂಗುವ ಸ್ಥಳಕ್ಕೆ ಎದುರಾಗಿ ಇತ್ತು. ಅಗಲವಾಗಿರುವುದರಿಂದ ಮತ್ತು ಮಧ್ಯದಲ್ಲಿ ವಿಭಜಕ ಇರುವುದರಿಂದ ಆಕೆಗೆ ರಸ್ತೆ ದಾಟಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಗುವಿನ ತಂದೆ ವಿವರಿಸಿದರು.

ಶಾಲೆಯ ಅಧಿಕಾರಿಗಳ ಮುಂದೆ ಸಮಸ್ಯೆಯನ್ನು ಹೇಳಿಕೊಂಡಾಗ ಪೋಷಕರು ತಮ್ಮ ಮಗಳಿಗೆ ಶಾಲಾ ವಾಹನವನ್ನು ನೀಡಲಾಗುವುದಿಲ್ಲ ಎಂದು ತಿಳಿಸುವ ಇಮೇಲ್ ಕಳುಹಿಸಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದರು.
ಈ ಬಗ್ಗೆ ಶಾಲೆಯ ವಕ್ತಾರರು, ತಾವು ಯಾವುದೇ ತಪ್ಪು ಮಾಡಿಲ್ಲ. ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಪೋಷಕರು ರಸ್ತೆ ದಾಟಲು ಮತ್ತು ತಮ್ಮ ಮಗುವನ್ನು ಎತ್ತಿಕೊಳ್ಳಲು ನಿರಾಕರಿಸಿದ್ದರಿಂದ ನಮ್ಮ ಅಟೆಂಡರ್ ಮಗುವನ್ನು ಜೊತೆಯಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ಡ್ರಾಪ್ ಮಾಡಿ ಬಂದಿದ್ದಾರೆ ಎಂದು ಹೇಳಿದರು.
ನಾವು ಮಗುವನ್ನು ಕರೆದುಕೊಂಡು ಹೋದ ಸ್ಥಳದಲ್ಲೇ ಮಗುವನ್ನು ಮತ್ತೆ ತಂದು ಬಿಡಬೇಕು. ಅವರು ತಮ್ಮಿಷ್ಟ ಬಂದ ಕಡೆ ಬಿಡುವುದರಿಂದ ವಾಹನದಲ್ಲಿದ್ದ ಇತರ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ. ನಮ್ಮ ಕಡೆಯಿಂದ ನಾವು ಯಾವುದೇ ತಪ್ಪು ಆಗಿಲ್ಲ ಎಂದು ಶಾಲೆಯವರು ಹೇಳಿದರು. ಶಾಲೆಯ ವಿರುದ್ಧ ಪೋಷಕರು ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ.












Click it and Unblock the Notifications