ಬೆಂಗಳೂರು: ಹಣ ಕೊಡಲಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ

ದೊಡ್ಡಬಳ್ಳಾಪುರ, ಡಿಸೆಂಬರ್ 02: ಬೆಂಗಳೂರು ನಗರ ಸಮೀಪದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ್ದಾನೆ.

ತೂಬುಗೆರೆ ನಿವಾಸಿ ಕುಮಾರ ಎಂಬಾತ ಇಂದು ಬೆಳಿಗ್ಗೆ ಗ್ರಾಮದ ಕಾರ್ಪೊರೇಷನ್ ಬ್ಯಾಂಕ್‌ ಬ್ಯಾಂಕ್‌ ಗೆ ಬಂದು ತನ್ನ ಖಾತೆಯಲ್ಲಿರುವ ಹಣ ನೀಡುವಂತೆ ಸಿಬ್ಬಂದಿಗೆ ಕೇಳಿದ್ದಾನೆ. 'ನಿಮ್ಮ ಬ್ಯಾಂಕ್ ಖಾತೆಯಲ್ಲಿ ಈಗ 240 ರೂಪಾಯಿ ಅಷ್ಟೇ ಇದೆ. ಖಾತೆಯಲ್ಲಿ ಮೂರು ವರ್ಷದಿಂದ ವ್ಯವಹಾರ ನಡೆದಿಲ್ಲ, ಹಾಗಾಗಿ ಅಗ್ಯತ್ಯ ದಾಖಲೆಗಳನ್ನು ನೀಡಿ, ಹಣ ಪಡೆದುಕೊಳ್ಳಿ' ಎಂದು ಬ್ಯಾಂಕ್ ನೌಕರ ಹೇಳಿದ್ದಾನೆ.

ಆದರೆ ಇದಕ್ಕೆ ಒಪ್ಪದ ಕುಮಾರ, ನನ್ನ ಖಾತೆಯಲ್ಲಿರುವ ಹಣ ನನಗೆ ಕೊಡಿ ಎಂದು ಗಲಾಟೆ ಮಾಡಿದ್ದಾನೆ. ಆದರೆ ಇದಕ್ಕೆ ಒಪ್ಪದ ಬ್ಯಾಂಕ್ ನೌಕರ ಅಗತ್ಯ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ.

A Man Try To Kill Bank Worker For Silly Reason

ಇದರಿಂದ ಕುಪಿತಗೊಂಡು ಮನೆಗೆ ತೆರಳಿ, ಮಚ್ಚೊಂದನ್ನು ತೆಗೆದುಕೊಂಡು ಬ್ಯಾಂಕ್‌ ಗೆ ನುಗ್ಗಿದ ಕುಮಾರ, ಏಕಾ-ಏಕಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಬ್ಯಾಂಕ್ ನೌಕರ ಹಿಂದೆ ಸರಿದಿದ್ದರಿಂದ ಮಚ್ಚಿನೇಟಿನಿಂದ ಬಚಾವ್ ಆಗಿದ್ದಾರೆ.

ಮತ್ತೂ ನೌಕರನನ್ನು ಅಟ್ಟಾಡಿಸಿ ಮಚ್ಚಿನಿಂದ ಹೊಡೆಯಲು ಮುಂದಾದಾಗ ಅಲ್ಲಿದ್ದ ಸ್ಥಳೀಯರು ಕುಮಾರ ನನ್ನು ಹಿಡಿದು, ಥಳಿಸಿ, ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+