HSRP: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕ್ಕಿಂಗ್ ವೇಳೆ ಅಕೌಂಟ್‌ನಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ ₹95,000 ಮಾಯ.!
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ವಿಚಾರ ಮುನ್ನಲೆಗೆ ಬರುತ್ತಲೇ ಇದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಹೆಚ್ಚಾಗಿದ್ದು, ಈ ಬಗ್ಗೆ ಪೊಲೀಸರು ಜಾಗೃತಿ ಮೂಡುಸುತ್ತಲೇ ಇರುತ್ತಾರೆ. ಆದರೆ ಇದೀಗ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕ್ ಮಾಡುವ ವೇಳೆ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡುವಾಗ ಜನರು ಇದೀಗ ಬಹಳ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಬೆಂಗಳೂರಲ್ಲಿ ವ್ಯಕ್ತಿಯೊಬ್ಬರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡಿದ ಕೂಡಲೇ ಬರೋಬ್ಬರಿ 95,000 ರೂಪಾಯಿ ಕಳೆದುಕೊಂಡಿದ್ದಾರೆ ಎನ್ನುವ ಶಾಕಿಂಗ್ ಮಾಹಿತಿಯೊಂದು ಲಭ್ಯವಾಗಿದೆ.

ಹಣ ಮಾಯವಾಗಿದ್ದೇಗೆ: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹೆಸರಿನಲ್ಲಿ ಸೈಬರ್ ವಂಚಕ ಜಾಲ ಸಕ್ರಿಯವಾಗಿದ್ದು, ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮ ಅಕೌಂಟ್‌ನಲ್ಲಿದ್ದ ಹಣವೆಲ್ಲ ದೋಚಲಿದ್ದಾರೆ. ಇನ್ನು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕ್ ಮಾಡಿದ್ದ ವಿಜಿತ್ ಕುಮಾರ್‌ಗೆ 95,000 ರೂಪಾಯಿ ವಂಚನೆ ಮಾಡಲಾಗಿದೆ. ಇನ್ನು ತನಗೆ ವಂಚನೆ ಆಗಿರುವ ಬಗ್ಗೆ ವಿಜಿತ್ ಕುಮಾರ್ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕ್ರೆಡಿಟ್ ಕಾರ್ಡ್‌ನಿಂದ ಹಣ ಮಾಯ: ವಿಜಿತ್ ಕುಮಾರ್ ತನ್ನ ವಾಹನಕ್ಕೆ ನಂಬರ್ ಪ್ಲೇಟ್ ಬುಕ್ ಮಾಡಲು bookmyhsrp.net ಲಿಂಕ್‌ನಲ್ಲಿ ರಿಜಿಸ್ಟರ್ ಮಾಡಿದ್ದರು. ಆದರೆ, ಒಂದು ವಾರದ ಬಳಿಕ ನಿಮ್ಮ ವಿಳಾಸ ಸರಿಯಿಲ್ಲ. ಕೆಳಗೆ ಕೊಟ್ಟ ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ ಎಂದು ಮೇಲ್ ಬಂದಿತ್ತು. ಈ ಲಿಂಕ್ ಕ್ಲಿಕ್ ಮಾಡಿ ವಿಳಾಸವನ್ನು ಅಪ್ಲೋಡ್ ಮಾಡಿದ್ದನು. ಆದರೆ ಇದಾದ ನಾಲ್ಕು ದಿನಗಳಲ್ಲಿ ಹಂತ-ಹಂತವಾಗಿ ವಿಜಿತ್ ಕುಮಾರ್ ಕ್ರೆಡಿಟ್ ಕಾರ್ಡ್‌ನಿಂದ 95,000 ರೂಪಾಯಿ ಹಣ ಮಾಯವಾಗಿದೆ.
3 ಬಾರಿ ವಿಸ್ತರಣೆ: ಇನ್ನು ರಾಜ್ಯದಲ್ಲಿ ಶೇಕಡ 55ಕ್ಕಿಂತ ಹೆಚ್ಚಿನ ವಾಹನ ಸವಾರರು ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದಿಲ್ಲ. ಈ ಹಿನ್ನೆಲೆ ಸರ್ಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವ ಅವಧಿಯನ್ನು ಈಗಾಗಲೇ 3 ಬಾರಿ ವಿಸ್ತರಣೆ ಮಾಡಲಾಗಿತ್ತು. ಅರ್ಜಿ ಸಲ್ಲಿಕೆ ವೇಳೆ ಸಾರಿಗೆ ಇಲಾಖೆಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ಗಳನ್ನು ಸರಿಯಾಗಿ ಗುರುತಿಸಿ ಅಪ್ಲೈ ಮಾಡಬೇಕು.












Click it and Unblock the Notifications