ಮಹಿಳೆಯ ವಿಡಿಯೋ ತೆಗೆಯಲು ಯತ್ನಿಸಿದ ಪೇಂಟರ್ ಬಂಧನ

ಬೆಂಗಳೂರು, ಜ. 10: ದೇಶಾದ್ಯಂತ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ಧ ಹೋರಾಟ ನಡೆಯುತ್ತಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಅಪರಾಧಕ್ಕೆ ಉಗ್ರ ಶಿಕ್ಷೆ ನೀಡಲು ಈಗಾಗಲೇ ಕಾನೂನು ಜಾರಿಗೊಳಿಸಲಾಗಿದೆ. ಆದರೂ, ಲೈಂಗಿಕ ವಾಂಛಿಗಳು ಬದಲಾಗಿಲ್ಲ.

ಬೆಂಗಳೂರಿನ ಬಿಟಿಎಂ ಫಸ್ಟ್ ಸ್ಟೇಜ್‌ನಲ್ಲಿರುವ ಮಹಿಳೆಯರ ಪಿಜಿ ಸೆಂಟರ್‌ನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಐಟಿ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಮಹಿಳೆ ಸ್ನಾನಕ್ಕೆಂದು ಎಂದಿನಂತೆ ಬೆಳಗ್ಗೆ ಬಾತ್ ರೂಂಗೆ ತೆರಳಿದ್ದಾರೆ. [ಶಿಕ್ಷಕಿಯಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

arrest

ಆಗ ಓರ್ವ ಯುವಕ ಬಾತ್ ರೂಂನಲ್ಲಿನ ದೃಶ್ಯಗಳನ್ನು ಕಿಟಕಿ ಹೊರಗಿನಿಂದ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದುದು ಕಂಡಿದೆ. ಇದನ್ನು ನೋಡಿ ಬೆದರಿದ ಮಹಿಳೆ ತಕ್ಷಣ ಅಲಾರ್ಮ್ ಬಟನ್ ಒತ್ತಿದರು. ಆಗ ಪಿಜಿ ಮಾಲೀಕ ಪೊಲೀಸರಿಗೆ ದೂರವಾಣಿ ಕರೆ ಮಾಡಿದರು. [ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ]

ಸ್ಥಳಕ್ಕೆ ಬಂದ ಪೊಲೀಸರು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪಕ್ಕದ ಕಟ್ಟಡದಲ್ಲಿದ್ದ ಕೆಲಸಗಾರನನ್ನು ಬಂಧಿಸಿದ್ದಾರೆ. ಪೇಂಟರ್ ಕೆಲಸ ಮಾಡುತ್ತಿರುವ ಶಶಿ ಕುಮಾರ್ ಬಂಧಿತ ಆರೋಪಿ. ಭಾರತೀಯ ದಂಡ ಸಂಹಿತೆ 354 (ಸಿ) ಪರಿಚ್ಛೇದದಡಿ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. [ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ತ್ವರಿತಗತಿ ನ್ಯಾಯಾಲಯ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+