ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊಡ್ಡಬಳ್ಳಾಪುರ: ಬಿಜೆಪಿಯ ಸಾಧನೆಯನ್ನು ಬಿಂಬಿಸುವ 'ಜನಸ್ಪಂದನ'ಕ್ಕೆ ಕ್ಷಣಗಣನೆ

|
Google Oneindia Kannada News

ದೊಡ್ಡಬಳ್ಳಾಪುರ , ಸೆಪ್ಟೆಂಬರ್ 10: ಬಿಜೆಪಿಯ ಸಾಧನೆಯನ್ನು ಬಿಂಬಿಸಲು ಬೃಹತ್ ಸಮಾವೇಶವನ್ನು ಜನಸ್ಪಂದನ ಅನ್ನೋ ಹೆಸರಿನಲ್ಲಿ ದೊಡ್ಡಬಳ್ಳಾಪುದಲ್ಲಿ ಆಯೋಜಿಸಲಾಗಿದೆ.. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಸ್ಮೃತಿ ಇರಾನಿ ಆಗಿಸುತ್ತಿದ್ದರು ರಾಜ್ಯದ ಪ್ರಮುಖ ನಾಯಕರು ವೇದಿಕೆ ಮೇಲಿರಲಿದ್ದಾರೆ. ಈ ಸಮಾವೇಶದಲ್ಲಿ 3 ಲಕ್ಷ ಜನ ಸೇರುವ ನಿರೀಕ್ಷೆಯನ್ನು ಮಾಡಲಾಗಿದೆ.

ಜನೋತ್ಸವ ಕಾರ್ಯಕ್ರಮ ಪದೇ ಪದೇ ಮುಂದೂಡಿಕೆಯಾಗುತ್ತಿತ್ತು, ಇದೀಗ ಜನೋತ್ಸವ ಕಾರ್ಯಕ್ರಮವನ್ನು ಜನಸ್ಪಂದನ ಎಂಬ ಹೆಸರಿನಲ್ಲಿ ಮಾಡಲಾಗುತ್ತಿದೆ. ಇದೀಗ ಬಿಜೆಪಿ ಪಕ್ಷದ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ, ಕಾರ್ಯಕ್ರಮಕ್ಕೆ ಜನರನ್ನ ಕರೆತರಲು 5 ಸಾವಿರ ಬಸ್ ಗಳನ್ನ ಬಳಸಲಾಗಿದೆ.

ಜನಸ್ಪಂದನ ಕುರಿತು ಕಾರ್ಯಕ್ರಮದ ವೇದಿಕೆಯಲ್ಲಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದು ಛತ್ತೀಸ್ ಘಡದಲ್ಲಿ ರಾಷ್ಟ್ರಿಯ ಮಟ್ಟದ ಕಾರ್ಯಕ್ರಮದಲ್ಲಿ‌ ಜೆ.ಪಿ.ನಡ್ಡಾ ಭಾಗವಹಿಸುವುದು ಅನಿವಾರ್ಯ ಆಗಿರುವುದರಿಂದ ಅವರ ಆಗಮನ ಖಾತ್ರಿಯಾಗಿಲ್ಲ. ಬದಲಿಗೆ ಹಿರಿಯ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 2023ರ ವಿಧಾನಸಭೆ‌ ಚುನಾವಣೆಗೆ ತಯಾರಿ

2023ರ ವಿಧಾನಸಭೆ‌ ಚುನಾವಣೆಗೆ ತಯಾರಿ

ಜನಸ್ಪಂದನ ಕಾರ್ಯಕ್ರಮದಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಜನರ‌ ಮುಂದಿಡುವುದು ಒಂದೆಡೆಯಾದರೆ, ದೊಡ್ಡಬಳ್ಳಾಪುರದಿಂದಲೇ 2023ರ ವಿಧಾನಸಭೆ‌ ಚುನಾವಣೆಗೆ ರಣಕಹಳೆ ಮೊಳಗಿಸಲಾಗುವುದು, ಪಕ್ಷ‌ ಸಂಘಟನೆಯೇ ಇಲ್ಲ ಎನ್ನುವ ಜಾಗದಲ್ಲಿ ಸವಾಲಾಗಿ ಸ್ವೀಕರಿಸಿ ನಮ್ಮ ಅಸ್ತಿತ್ವ ತೋರಿಸುವ ಪ್ರಯತ್ನವೇ ಜನಸ್ಪಂದನ ಕಾರ್ಯಕ್ರಮವಾಗಿದೆ. ಸಮಾವೇಶದಲ್ಲಿ ಒಟ್ಟು 3 ಲಕ್ಷ ಜನರು‌ ಭಾಗವಹಿಸಲಿದ್ದು, ಎಲ್ಲ ರೀತಿಯ ಸಿದ್ಧತೆ ಹಾಗೂ ವ್ಯವಸ್ಥೆ‌ ಮಾಡಲಾಗಿದೆ‌ ಎಂದರು.

 ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ

ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ

ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಎರಡು ವರ್ಷ, ಬಸವರಾಜ ಬೊಮ್ಮಾಯಿ ನೇತೃತ್ವದ ಒಂದು ವರ್ಷದ ಆಡಳಿತದಲ್ಲಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ಜನರ ಮುಂದಿಡಲು ಜನಸ್ಪಂದನ‌ ನಡೆಸಲಾಗುತ್ತಿದೆ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲ ಭಾಗ ಒಳಗೊಂಡಂತೆ ಮೊದಲ ವಲಯ ಮಟ್ಟದ ಜನಸ್ಪಂದನ ನಡೆಯುತ್ತಿದೆ. ಒಟ್ಟು ಆರು ವಲಯಗಳಲ್ಲಿ ಜನಸ್ಪಂದನ ನಡೆಯಲಿದ್ದು, ಅಂತಿಮವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

 ಪಕ್ಷದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ

ಪಕ್ಷದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ

40 ಎಕರೆ ವಿಸ್ತೀರ್ಣದಲ್ಲಿ‌ ಜರ್ಮನ್ ಶೆಡ್ ನಿರ್ಮಿಸಲಾಗಿದೆ. ಲಕ್ಷಾಂತರ ಜನರು ಭಾಗವಹಿಸುವ ಕಾರಣ ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಲಾಗಿದೆ. ಎರಡು ದೊಡ್ಡ ಕಂಪೆನಿಗಳಿಗೆ ಕ್ಯಾಟರಿಂಗ್ ಗುತ್ತಿಗೆ ನೀಡಲಾಗಿದೆ. 3 ಲಕ್ಷ ಜನರಿಗೆ ಊಟ ಸಿದ್ದವಾಗುತ್ತಿದೆ. ಪಲಾವ್, ಮೊಸರನ್ನ, ಸಿಹಿ ತಿಂಡಿ ತಯಾರಿಸಲಾಗುತ್ತಿದೆ.

 ಜನಸ್ಪಂದನೆಯಲ್ಲಿ ಮಹತ್ವದ ಘೋಷಣೆ ನಿರೀಕ್ಷೆ

ಜನಸ್ಪಂದನೆಯಲ್ಲಿ ಮಹತ್ವದ ಘೋಷಣೆ ನಿರೀಕ್ಷೆ

ಜನಸ್ಪಂದನ ಕಾರ್ಯಕ್ರಮ ನಡೆಯುವ ಸ್ಥಳದಿಂದ ಒಂದು ಕಿ.ಮೀ. ಅಂತರದಲ್ಲಿ ಎರಡೂ ಕಡೆ ಒಟ್ಟು 12 ಜಾಗಗಳಲ್ಲಿ ಒಟ್ಟು 200 ಎಕರೆ ವಿಸ್ತೀರ್ಣದಲ್ಲಿ ಪಾರ್ಕಿಂಗ್ ವ್ಯವಸ್ಥೆ‌ ಮಾಡಲಾಗಿದೆ. ಜನರನ್ನು ಕರೆತರಲು ಒಟ್ಟು 5000 ಖಾಸಗಿ ಹಾಗೂ ಸರ್ಕಾರಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯೂ ಸಂಚಾರ ದಟ್ಟಣೆ ಉಂಟಾಗದಂತೆ ಟ್ರಾಫಿಕ್ ಡಿವಿಯೇಷನ್ ಮಾಡಲಾಗಿದೆ. ಈ ಕುರಿತು‌ ಪೊಲೀಸರೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಇನ್ನು ಸಿಎಂ ಬಸವಾಜ ಬೊಮ್ಮಾಯಿ ಸರ್ಕಾರದ ಸಾಧನೆಯನ್ನು ತೆರೆದಿಡುವ ಜೊತೆಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳಿವೆ.

English summary
A huge convention has been organized in Doddaballapu in the name of Janaspandana to reflect the achievement of BJP. BJP national president JP Nadda and Smriti Irani will be on the stage. 3 lakh people are expected to attend this convention, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X